ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಅಂತರಾಷ್ಟ್ರೀಯ ಪ್ರಕೃತಿ ಯೋಗ ಅಕಾಡೆಮಿಯ 36ನೇ ವರ್ಷದ ಹಾಗು ಅಜಂತಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿಯವರ 44ನೇ ವರ್ಷದ ವಾರ್ಷಿಕೋತ್ಸವ""
ಪೀಣ್ಯ ದಾಸರಹಳ್ಳಿ  ಅಂತರಾಷ್ಟ್ರೀಯ ಪ್ರಕೃತಿ ಯೋಗ ಅಕಾಡೆಮಿಯ 36ನೇ ವರ್ಷದ ಹಾಗು ಅಜಂತಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿಯವರ 44ನೇ ವರ್ಷದ ವಾರ್ಷಿಕೋತ್ಸವ ಮತ್ತು ಲೋಕಲ್ ಟು ಗ್ಲೋಬಲ್ ಯೋಗಾಸನ ಚಾಂಪಿಯನ್ ಷಿಪ್ ಕಮ್ಮಗೊಂಡನ ಹಳ್ಳಿಯ ಎಮ್ ಎನ್ ಟಿ ಐ ಕಾಲೇಜಿನ ಆವರಣದಲ್ಲಿ  ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರು ಹಾಗು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷರಾದ ಕೆ.ನಾಗಭೂಷಣ್  , ಕಾಲೇಜಿನ ಅಧ್ಯಕ್ಷರಾದ ಆರ್.ಶಾಂತಕುಮಾರ್ ಹಾಗು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ರಾಜ್ಯದ ಹಲವಾರು ಭಾಗಗಳಿಂದ ಆಗಮಿಸಿದ್ದ ಯೋಗ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಯೋಗ ಮಾಡುವುದರಿಂದ ನಮ್ಮ ದೇಹದ ಆರೋಗ್ಯ ಸ್ಥಿತಿ ಮಾನಸಿಕ ಆಲೋಚನೆಗಳು ಆರೋಗ್ಯ ಮತ್ತು ಯೋಗ್ಯವಾಗಿರುತ್ತದೆ ಯೋಗಾಸನ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಸ್ಥಿರವಾಗಿರಲು  ಯೋಗ ದಿಂದ ಮಾತ್ರ ಸಾಧ್ಯ ಎಂದು ಮಾಜಿ ಬಿಬಿಎಂಪಿ ಸದಸ್ಯರಾದ ಕೆ ನಾಗಭೂಷಣ್ ತಿಳಿಸಿದರು 
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಹರಿದಾಸು ಮತ್ತು ನಿರ್ದೇಶಕರಾದ ರಾಜಣ್ಣರವರು ಆಡಳಿತ ಮಂಡಳಿಯ ಸದಸ್ಯರುಗಳು ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News