ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಉನ್ನತ ಶಿಕ್ಷಣ ಇಲಾಖೆ ನಾನ್ ಯು.ಜಿ.ಸಿ. ಉಪನ್ಯಾಸಕರನ್ನು ಕೈ ಬಿಟ್ಟು ಕೌನ್ಸಿಲಿಂಗ್ ಗೆ ಮುಂದಾಗಿದೆ
ಬೆಂಗಳೂರು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ನಿಯೋಗ ಬೆಂಗಳೂರು ನಲ್ಲಿ ಅತಿಥಿ ಉಪನ್ಯಾಸಕರ ನಿಯಮಬಾಹಿರ ನೇಮಕಾತಿ
,ಕೌನ್ಸಲಿಂಗ್ ಪ್ರಕ್ರಿಯೆಯಿಂದಾಗಿ ಯುಜಿಸಿ ಅರ್ಹತೆ ಪಡೆಯದ 6,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಇವರ ದೀರ್ಘಕಾಲದ ಸೇವೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ,ಉದ್ಯೋಗ ರಕ್ಷಣೆ ಮಾಡಬೇಕಾಗಿದೆ. ಈಗ ಉದ್ಬವಿಸಿರುವ ಕಾನೂನಾತ್ಮಕ ಬಿಕ್ಕಟ್ಟನ್ನು ಸಚಿವ ಸಂಪುಟ ಸಭೆಗೆ ತಂದು, ನ್ಯಾಯ ಒದಗಿಸಿಕೊಡ ಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್. ಕೆ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ .ಎಚ್ ಸಿ. ಮಹಾದೇವಪ್ಪ ರವರಿಗೆ ಭೇಟಿ ಮಾಡಿ ಮನವಿ ಮಾಡಲಾಯಿತು.
ಸಕರಾತ್ಮಕವಾಗಿ ಸ್ಪಂದಿಸಿ, ಹಾಗೂ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುವುದಾಗಿ ಬರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ಡಾ. ರವೀಂದ್ರ, ಜೆ. ಸಿ. ರಾಜೇಶ್ ಕುಮಾರ್. ಕೆ. ಡಾ. ಅನಂತ್, ಸತೀಶ್, ಹರ್ಷಿತ, ಪೂರ್ಣಿಮಾ, ರಾಜೇಂದ್ರ ಬಾಬು, ಶ್ರೀನಿವಾಸ್, ನಿರುಪಮಾ, ಸುನೀತಾ ಮೇಡಂ, ದೀಲೀಪ, ಇನ್ನು ಅನೇಕ ಅತಿಥಿ ಉಪನ್ಯಾಸಗಳು ಹಾಜರಿದ್ದರು