ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರನ "ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್"ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ.ಎಚ್.ಕೆ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವರಾದ.ಡಾ.ಎಂ.ಸಿ.ಸುಧಾಕರ್ ಅವರು ಹಾಗೂ ಅಡ್ವೊಕೇಟ್ ಜನರಲ್ ಜಾಕ್ ವೆಲ್ ರವರು ಮತ್ತು ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀಂಕೋರ್ಟ್ ವಕೀಲರು .ಪಿ.ಕುಲಕರ್ಣಿ .ರವರು. ಆಯುಕ್ತರಾದ ಕು.ಮಂಜು ಶ್ರೀ ರವರ ಸಮ್ಮುಖದಲ್ಲಿ.ನಡೆದ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು (ಕಾನೂನು ತೊಡಕು ತಿದ್ದುಪಡಿ) ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಇಂದು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಸಲಾಯಿತು.ನಂತರ ಮಾತನಾಡಿದ ಡಾ.ಎಚ್.ಕೆ.ಪಾಟೀಲ ಅವರು ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ನಿಯಮಾವಳಿ ರೂಪಿಸಿ ಯುಜಿಸಿ & ನಾನ್ ಯುಜಿಸಿ ಎನ್ನದೆ ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ಒಳಿತಾಗುವಂತೆ ಸರ್ಕಾರಿ ಅಭಿಯೋಜಕರಿಗೆ (ಅಡ್ವೊಕೇಟ್ ಜನರಲ್) ಅವರಿಗೆ ಸೂಚಿಸಿದರು.2009 ಎಂ.ಫಿಲ್ ಪದವಿ ಯನ್ನು ಯುಜಿಸಿ ಸಮಾನವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಸೂಚಿಸಿದರು..ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು
ಮುಂದುವರೆದಂತೆ ಯುಜಿಸಿ ಮತ್ತು ಎಂ. ಎ. /ಎಂ ಎಸ್ ಸಿ/ಎಂಕಾಂ ಪಡೆದುಕೊಂಡ ಅಭ್ಯರ್ಥಿಗಳು ಆತಂಕ ಪಡುವಂತಹ ಯಾವುದೇ ವಿಷಯ ಇಲ್ಲಿ ಅಂದರೆ ಸಭೆಯಲ್ಲಿ ಹಾಗಿಲ್ಲ ಎಲ್ಲರನ್ನೂ ಮುಂದುವರೆಸುವಂತೆ ಅನುಕಂಪದ ಆಧಾರದ ಮೇಲೆ ಕೂಡ ವಿಶೇಷ ಕಾಯ್ದೆ ಅಡಿ ಮಾಡಿಕೊಳ್ಳುವ ವಿಚಾರವನ್ನು ಇಲ್ಲಿ ಇನ್ನೊಂದು ವಿಶೇಷವಾಗಿ 11 ಸಾವಿರ ಉಪನ್ಯಾಸಕರಿಗೂ ಕೂಡ ಯಾವ ರೀತಿ ಇವರನ್ನ ಉಳಿಸಿ ಎನ್ನುವುದು ಅವರು ಕಾನೂನು ಸಚಿವರು ಪ್ರಸ್ತಾಪಿಸಿದ್ದು ಮತ್ತೆ ಉನ್ನತ ಶಿಕ್ಷಣ ಸಚಿವರು ಹೈಕೋರ್ಟ್ ಆದೇಶ ಬಂದ ನಂತರ ಮುಂದಿನ ಕಾರ್ಯ ಚಟುವಟಿಕೆಗಳು ಮುಂದುವರೆಯಲಿದೆ ಎಂದು ತಿಳಿಸಿದರು