Posts

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ನಮ್ಮ ದೇಶದ ಪ್ರಧಾನಿ  ನರೇಂದ್ರ ಮೋದಿಜೀ ಅವರು 12 ವರ್ಷ ದಾಖಲೆಗಳನ್ನು ಮುರಿದ ಅಧಿಕಾರದಲ್ಲಿ ಮುಂದುವರೆಯುತ್ತಿರುವ ರಾಜ್ಯದ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು ಪೂಜೆ ಸಲ್ಲಿಸಿದರು"" ಬೆಂಗಳೂರು:  ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ಚುನಾಯಿತ ಪ್ರಧಾನಿಗಳಾಗಿ ಕಳೆದ 12 ವರ್ಷಗಳಿಂದ ದೇಶದ ಪ್ರಧಾನ ಸೇವಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಸಂಬಂಧ  ಮಲ್ಲೇಶ್ವರದ ಶ್ರೀ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್, ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಶಿವರಾಜ್ ಪಾಟೀಲ್, ವಿಧಾನಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರೀ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. (

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
ಬೆಂ.ಮ.ಸಾ.ಸಂ. ಕೇಂದ್ರ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಹಸಿರು ಪರಿಸರ, ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ವಾಹನಗಳ ಮೂಲಕ ಸುಸ್ಥಿರ ಭವಿಷ್ಯದತ್ತ ಬಿಎಂಟಿಸಿಯ ದೃಢ ಹೆಜ್ಜೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಆವರಣದಲ್ಲಿ ಅರ್ಥಪೂರ್ಣ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ  ವಿ.ಎಸ್. ಆರಾಧ್ಯ, ಉಪಾಧ್ಯಕ್ಷರಾದ  ನಿಕೇತ್ ರಾಜ್ ಎಂ., ವ್ಯವಸ್ಥಾಪಕ ನಿರ್ದೇಶಕರಾದ  ಕೆ.ಬಿ. ಶಿವಕುಮಾರ್, ಭಾ.ಆ.ಸೇ., ಹಾಗೂ ನಿರ್ದೇಶಕರು (ಭ&ಜಾ) ಯ ಅಬ್ದುಲ್ ಅಹದ್, ಭಾ.ಪೊ.ಸೇ. ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, *ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಹಸಿರು ಪರಿಸರ ನಿರ್ಮಾಣಕ್ಕಾಗಿ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ಹವಾಮಾನ ಬದಲಾವಣೆ, ವಾಯು ಮಾಲಿನ್ಯ ಹಾಗೂ ಪರಿಸರ ಅಸಮತೋಲನದಂತಹ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು. ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿರುವ ಬೆಂ.ಮ.ಸಾ.ಸಂ. ಸ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ  MSME, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ – ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ RAMP ಯೋಜನೆಯಡಿಯಲ್ಲಿ MSME ಗಳಿಗಾಗಿ ಟೆಕ್ನಾಲಜಿ ಕ್ಲಿನಿಕ್ ಬೆಂಗಳೂರುನಲ್ಲಿ, 15 ಮೇ 2026 ನಡೆಯಿತು"" ಪೀಣ್ಯ ದಾಸರಹಳ್ಳಿ:: ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ 2026ರ ಮೇ 14 ಮತ್ತು 15ರಂದು ಪೀಣ್ಯ ಕೈಗಾರಿಕಾ ವಸಾಹತುವಿನಲ್ಲಿರುವ ಪಿಐಎ ಸಭಾಂಗಣದಲ್ಲಿ MSMEಗಳಿಗಾಗಿ “RAMP ಅಡಿಯಲ್ಲಿ ತಂತ್ರಜ್ಞಾನ ಕ್ಲಿನಿಕ್” ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEಗಳು) ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಆಧುನಿಕ ಉತ್ಪಾದನಾ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಾಯೋಗಿಕ ಪರಿಚಯ ಒದಗಿಸುವುದಾಗಿತ್ತು. ಈ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು MSME ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ತಾಂತ್ರಿಕ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಉತ್ಪಾದನಾ ಘಟಕಗಳ ಪ್ರತಿನಿಧಿಗಳು  ಭಾಗವಹಿಸಿದರು.  ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಹಾಗೂ AI ಆಧಾರಿತ CNC/VMC ತಂತ್ರಜ್ಞಾನಗಳ ಮಹತ್ವವನ್ನು ವಿವರಿಸಲಾಯಿತು. ಇವುಗಳ ಉತ್ಪಾದಕತೆ, ಗುಣಮಟ್ಟ, ಸ್ಪರ್ಧಾತ್ಮಕತೆ ಹಾಗೂ ಸ್ಥಿರತೆಯನ್ನು ಹೆಚ್ಚಿಸಲು ಹ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
ಬಿಎಂಟಿಸಿ“ ಎಸ್‌.ಎಸ್‌.ಎಲ್‌.ಸಿ   ಪರೀಕ್ಷಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದೆ  ****** ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಶಾಲಾ/ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ.  ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಪರೀಕ್ಷೆ-01 ಬೇರೆ ಬೇರೆ ಶಾಲಾ/ಕಾಲೇಜುಗಳಲ್ಲಿ ಇರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಿರುತ್ತದೆ. • ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಿನಾಂಕ 18.03.2026 ರಿಂದ 02.04.2026 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ (ವೇಗದೂತ ಸೇವೆಗಳನ್ನು ಹೊರತುಪಡಿಸಿ) ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. • ಎಸ್.ಎಸ್.ಎಲ್.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. • ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ಅಬ್ಬಿಗರೆಯ  ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಮಹಾ ಶಿವರಾತ್ರಿಯ ಮಹೋತ್ಸವ ನಡೆಯಿತು "" ಪೀಣ್ಯ ದಾಸರಹಳ್ಳಿ : ದಕ್ಷಿಣ ಭಾರತದ ಹೆಸರಾಂತ ರಾಜ ಮನೆತನಗಳಲ್ಲಿ ಒಂದಾದ ಚೋಳರ ಕಾಲದ ಇತಿಹಾಸವುಳ್ಳ (ಉದ್ಭವ ಶಿವಲಿಂಗ ಮೂರ್ತಿ ) ಶ್ರೀ ಸೋಮೇಶ್ವರ ಸ್ವಾಮಿಗೆ ಬೆಳಿಗ್ಗೆಯಿಂದನೇ ವಿಶೇಷ ಅಭಿಷೇಕ ಹಾಗೂ ಪೂಜೆ ಮತ್ತು ಮಹಾರುದ್ರ ಹೋಮ ಹಾಗೂ ಸಂಜೆ ಸಹಸ್ರ ದೀಪೋತ್ಸವ ನಂತರ ಪಟಾಕಿ ವಿದ್ಯುತ್ ದ್ವೀಪಗಳ ಪ್ರದರ್ಶನ ನಾಡಿನ ಹೆಸರಾತ ಗಾಯಕರಿಂದ  ಶಿವ ಭಕ್ತಿ ಗೀತೆಗಳ ಗಾಯನ ನೃತ್ಯ  ಹಾಗೂ ಸಂಕಲ್ಪ ಯಾಮಾ ಪೂಜೆ ಮತ್ತು ಜಾಗರಣೆ ಮಹಾಶಿವರಾತ್ರಿಯ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.  ಅಬ್ಬಿಗೆರೆಯ ಶ್ರೀ ಸೋಮೇಶ್ವರ ಸ್ವಾಮಿಯ ಮಹಾ ಶಿವರಾತ್ರಿಯ ಮಹೋತ್ಸವದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವರಾದ ವಿ ಸೋಮಣ್ಣನವರು ಆಶೀರ್ವಾದವನ್ನು ಪಡೆದುಕೊಂಡ ನಂತರ ಚೋಳರ ಕಾಲದ ಇತಿಹಾಸವುಳ್ಳ ಉದ್ಭವ ಶಿವಲಿಂಗ ಮಹತ್ವದ ಬಗ್ಗೆ ಎಷ್ಟು ಹೇಳಿದರು ಸಾಲದು ಇಲ್ಲಿ  ಸಾಲುಗಟ್ಟಿ ನಿಂತಿರುವ ಭಕ್ತಾರನ್ನು ನೋಡಿದರೆ ಸಾಕು ಇದು ಎಂತಹ ಮಹತ್ವ ಎಂದು ನಮಗೆ ತಿಳಿಯುತ್ತದೆ ಸೋಮೇಶ್ವರ ಸ್ವಾಮಿಯು ನಮ್ಮ ನಾಡಿನ ಜನತೆಗೆ ಆರೋಗ್ಯ ಭಾಗ್ಯ ಸಂಪತ್ತು ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು  ಹಾಗೆ ಕ್ಷೇತ್ರದ ಶಾಸಕರಾದ ಮುನಿರಾಜು ಎಸ್ ನಮ್ಮ ಕ್ಷೇತ್ರದಲ್ಲಿ ಸುಮಾರು 800 ವರ್ಷದ ಇತಿಹಾಸ ಪುಟಗ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
"'ರಾಜ್ಯದ ಎಲ್ಲ ವಿಶ್ವವಿದ್ಯಾಲಯದಲ್ಲಿ 'ನಶಾ ಮುಕ್ತ ಹಾಗೂ ವ್ಯಸನ ಮುಕ್ತ ಕರ್ನಾಟಕ ಮಾಡಲು ಜನಜಾಗೃತಿಯೂ . : ' ಕಾರ್ಯಕ್ರಮ ಆಗಬೇಕು: ದಿನೇಶ್ ಗುಂಡೂರಾವ"" *ಬಾಂಕ್ವೆಟ್ ಹಾಲ್ ವಿಧಾನಸೌಧ ಬೆಂಗಳೂರು:* ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ವ್ಯಸನ ಮುಕ್ತ ಕರ್ನಾಟಕ ಮಾಡಲು ಜನಜಾಗೃತಿಯೂ ಬಹಳ ಮುಖ್ಯ. ಹೆಚ್ಚಿನ ಸಂದರ್ಭದಲ್ಲಿ ಗೆಳೆಯರ ಒತ್ತಾಯಕ್ಕೋ, ಚಿಕ್ಕವಯಸ್ಸಿನಲ್ಲಿನ ಕುತೂಹಲದಿಂದ ಪ್ರಾಂಭವಾಗುವ ಹವ್ಯಾಸ ನಂತರ ಅಡಿಕ್ಷನ್ ಆಗಿ ಬದಲಾಗುತ್ತದೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಇಂತಹ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಸುಮಾರು 10 ಸಾವಿರ ಜನರೊಂದಿಗೆ ನಾನು ಸಹ ಭಾಗವಹಿಸಿದ್ದೆ. ವ್ಯಸನಮುಕ್ತ ಕರ್ನಾಟಕ ಮಾಡಲೇಬೇಕಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅತೀ ಅಗತ್ಯ. ಇದು ದೊಡ್ಡ ಸವಾಲು ಸಹ ಆಗಿದೆ. ಡ್ರಗ್ಸ್ ನಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿರುವುದು ಎಲ್ಲರ ಗಮನದಲ್ಲಿ ಇದೆ. ಡ್ರಗ್ಸ್ ನಿಂದಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆ ಆಗುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಕರ್ತವ್ಯ ಲೋಪ ಎಸಗಿದ ಕೆಎಸ್ಆರ್ ಟಿಸಿ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ನಿಸಾರ್ ಅಹಮದ್ ಅಮಾನತು ಸಚಿವ ರಾಮಲಿಂಗ ರೆಡ್ಡಿ ಆದೇಶ "" ಬೆಂಗಳೂರು: ಬೆಂಗಳೂರಿನಲ್ಲಿ ಕರ್ತವ್ಯ ಲೋಪ ಎಸಗಿದ ಕೆಎಸ್ಆರ್ ಟಿಸಿ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ನಿಸಾರ್ ಅಹಮದ್ ಅಮಾನತು ಇವರು ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ Fitness Certificate ನೀಡಿದ್ದು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಆದೇಶದ ಮೇರೆಗೆ ಸಾರಿಗೆ ಇಲಾಖೆ ಆಯುಕ್ತರು ಅಮಾನತ್ತು ‌‌‌‌‌ಆದೇಶ ಹೊರಡಿಸಿದ್ದಾರೆ . ಗುಜರಾತ್ ರಾಜ್ಯದ ಸಾರಿಗೆ ಕಛೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‌ ನ ಲ್ಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್ ಟಿ ಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38 (ಎ) (Fitness Certificate] ನೀಡಿದ ನಂತರ, ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಸದರಿ ವಾಹನಗಳು ಹಾದುಹೋಗಿವೆ ಎಂದು ಹಾಗೂ ಅವುಗಳನ್ನು  ನಿಸಾರ್ ಅಹಮದ್ ಇವರು ಅನುಮೋದಿಸಿರುವುದಾಗಿ ಉಪ ನಿರ್ದೇಶಕರು, ಸಾರಿಗೆ ಆಯುಕ್ತರ ಕಛೇರಿ, ಗಾಂಧಿನಗರ, ಗುಜರಾತ್ ರವರು ತಿಳಿಸಿರುತ್ತಾರೆ. ಈ ವಿಷಯವು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಆಯುಕ್ತರು ಸಾರಿಗೆ ಇಲಾಖೆ ರವರಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಅದ...