ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ನುಡಿ ಸಡಗರ ಹಬ್ಬವನ್ನು ಎಸ್.ಜೆ.ಆರ್ ಮಹಿಳಾ ಪದವಿ ಕಾಲೇಜಿನಲ್ಲಿ ಆಚರಿಸಲಾಯಿತು""
 ಬೆಂಗಳೂರು : ನುಡಿ ಸಡಗರ- ಹಬ್ಬಗಳ ವೈಭವ' ಅಂತರ ತರಗತಿಗಳ ಸ್ಪರ್ಧೆಯನ್ನು ಕನ್ನಡ ಸಂಘವು ಆಯೋಜಿಸಿದ್ದು.
 ಈ ಕಾರ್ಯಕ್ರಮಕ್ಕೆ  ಈ ಸಂಸ್ಥೆಯ ಉಪಾಧ್ಯಕ್ಷರಾದ  ಎಸ್.ವಿ.ರಾಜೇಂದ್ರ ಪ್ರಸಾದ್,ಆಡಳಿತ ಮಂಡಳಿಯ ಸದಸ್ಯರಾದ  ಸಿದ್ದಲಿಂಗೇಶ್ವರ ಗುಂಡಗಟ್ಟಿ‌ ದೀಪ ಬೆಳಗುವುದರ ಮೂಲಕ ಉದ್ಘಾಟನೆಯನ್ನು,  ಮಾಡಿದರು 
ತದನಂತರ ಭಾರತೀಯ  ಸಂಪನ್ಮೂಲಗಳು ಹಾಗೂ ಸಂಪ್ರದಾಯಗಳು  ಎಷ್ಟು ಪ್ರಾಮುಖ್ಯತೆಗಳು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳು ಕೂಡ ಅಷ್ಟೇ ಮುಖ್ಯ  ಭಾರತೀಯರಾಗಿ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನಮ್ಮ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ತಿಳಿಸುವಂತದ್ದಾಗಬೇಕು ಎಂದು ಹಬ್ಬಗಳು  ಹರಿದಿನಗಳು ನಮ್ಮ ಸಂಸ್ಕೃತಿಯನ್ನು ಮೆರೆದನ್ನು  ಸೂಚಿಸುವಂತೆ ಮಾಡುತ್ತೇವೆ  ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಈ  ಸಂಸ್ಥೆಯ ಉಪಾಧ್ಯಕ್ಷರಾದ  ಎಸ್ ವಿ. ರಾಜೇಂದ್ರ ಪ್ರಸಾದ್. ಸ್ಪರ್ಧೆಯ ತೀರ್ಪುಗಾರರಾಗಿ ವಿಜಯ ಕಾಲೇಜಿನ ಉಪಪ್ರಾಂಶುಪಾಲರೂ, ಕನ್ನಡ ಪ್ರಾಧ್ಯಾಪಕರಾದ  ಡಾ.ಶಾಂತರಾಜು ಮತ್ತು ಎಂ.ಎಲ್.ಎ ಅಕಾಡೆಮಿ ಆಫ್ ಲರ್ನಿಂಗ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ದಾಕ್ಷಾಯಿಣಿ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಪ್ರೇಮ ಸಿದ್ದರಾಜು ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ನಾಡಿನ ಹಬ್ಬಗಳಾದ ಸಂಕ್ರಾಂತಿ,ಯುಗಾದಿ,ದಸರಾ,ದೀಪಾವಳಿ,ಶಿವರಾತ್ರಿ,ಗೌರಿ- ಗಣೇಶ,ವರಮಹಾಲಕ್ಷ್ಮೀ, ಕೃಷ್ಣ ಜನ್ಮಾಷ್ಟಮಿ, ಹೋಳಿ, ಹುತ್ತರಿ ,ಮೊಹರಂ,ನಾಗರ ಪಂಚಮಿ ಮತ್ತು ಕ್ರಿಸ್ ಮಸ್ ಮುಂತಾದ ಹಬ್ಬಗಳ ವೈಶಿಷ್ಟ್ಯ ತೆಯನ್ನು ತಮ್ಮ ತಮ್ಮ ತರಗತಿಗಳಲ್ಲಿ ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಸ್ಪರ್ಧಿಸಿದ್ದರು. ಶಿವರಾತ್ರಿ,ಮೊಹರಂ ಮತ್ತು ಕೃಷ್ಣ ಜನ್ಮಾಷ್ಟಮಿ ಹಬ್ಬಗಳನ್ನು ಆಚರಿಸಿದ್ದ ತರಗತಿಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳು ಸ್ಪರ್ಧಾರ್ಥಿಗಳಿಗೆ ವಿತರಿಸಿದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್