ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಕೋಗಿಲು ಅಕ್ರಮ ಕುರಿತಂತೆ ಸತ್ಯ ಸಂಶೋಧನಾ ಸಮಿತಿಯು""
ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರಂ ನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಪತ್ರಿಕಾಗೋಷ್ಠಿಯಲ್ಲಿ ಕೋಗಿಲು ಸತ್ಯ ಸಂಶೋಧನಾ ಅಧ್ಯಕ್ಷರಾದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಗಿತ್ತು ಇಂದು ಸಮಿತಿಯ ವರದಿಯನ್ನು ನಿಯೋಗವು ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರಿಗೆ ಸಲ್ಲಿಸಿತು
ರಾಜ್ಯ ಸರ್ಕಾರವು 26 ನಿರಾಶ್ರಿತರನ್ನ ಗುರಿತಿಸಿ ರವರಿಗೆ ಪರ್ಯಾಯ ಯುವಸ್ತೆಯನ್ನು ಮಾಡಲು ನಿರ್ಧರಿಸುವುದೆ ಆದರೆ 26ರ ಪೈಕಿ ಒಬ್ಬರಾದರೂ ಕೇರಳದವರಾಗಿಲ್ಲ ಆದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿರುವ ಟೀಕೆ ಸತ್ಯಕ್ಕೆ ದೂರವಾದುದು. ಇಲ್ಲಿ ಬಂದಿರೋದಲ್ಲಿ ಬಹು ಪಾಲು ಮಂದಿ (ರೋಹಿಂಗ್ಯ ಮುಸ್ಲಿಂ ಸಮುದಾಯರಾಗಿದ್ದು) ನೆರೆ ರಾಷ್ಟ್ರ ಬಾಂಗ್ಲಾದೇಶದಿಂದ ಅಕ್ರಮ ಮಾರ್ಗದಿಂದ ವಲಸೆ ಬಂದವರಾಗಿದ್ದಾರೆ ಅವರಿಗೂ ಕೂಡ ಕಾನೂನ ಬಾಹಿರವಾಗಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಮಾಡಿ ಕೊಡಲಾಗಿದ್ದು ಇಂಥವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸುವುದು ಸರಿಯಲ್ಲ ನಮ್ಮ ರಾಜ್ಯದಲ್ಲಿ ಹಲವಾರು ಬಡ ಕುಟುಂಬದವರು ನಿವೇಶನಗಳಿಗೆ ಅರ್ಜಿ ಹಾಕಿಕೊಂಡು ಹಣವನ್ನು ಕಟ್ಟಿ ವರ್ಷಾನುಗಟ್ಟಲೆ ಕಾದಿದ್ದಾರೆ ಇಂತಹ ಕರ್ನಾಟಕದ ಅರ್ಹ ಜನರಿಗೆ ಕೊಡಿ ಎಂಬುದೇ ನಮ್ಮ ವಾದ ಎಂದು ಸಮಿತಿಯ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕರಾದ ಮುನಿರಾಜು ಎಸ್ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹಾಗೂ ರಾಜ್ಯ ಉಪಾಧ್ಯಷಿ ಯಾದ ಮಾಳ್ವಿಕಾ ಅವಿನಾಶ್ ಮತ್ತು ರಮೇಶ್ ಗೌಡ ಮುಂತಾದವರಿದ್ದರು