ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು : ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಪ್ರೇಕ್ಷ ಧ್ಯಾನ್ ಅಕಾಡೆಮಿ ಯಲ್ಲಿ ಡಿಸೆಂಬರ್ 27ರಿಂದ 30ನೇ ತಾರೀಖಿನವರೆಗೆ ನಡೆದ 40ನೇ ನ್ಯಾಷನಲ್ ಸಬ್ ಜೂನಿಯರ್ ಕ್ರೀಡಾಕೂಟದಲ್ಲಿ 18 ರಿಂದ 35 ವರ್ಷ ವಯೋಮಿತಿ ಯಲ್ಲಿ ನಡೆದ ಟೈಕೊಂಡು ಕ್ರೀಡಾಕೂಟದಲ್ಲಿ ಕೋಚ್ ನವೀನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಚಿಕ್ಕಬಾಣಾವರ ಪುರಸಭೆ ವಾಸಿ ಹಾಗೂ ಸಮಾಜ ಸೇವಕರಾದ ಬಿ. ಎಂ. ಚಿಕ್ಕಣ್ಣ ರವರ ಪುತ್ರಿ ಕುಮಾರಿ ಡಾ.ಪೂಜಶ್ರೀ ಚಿಕ್ಕಣ್ಣ ರವರು ವೈಯಕ್ತಿಕ ಸ್ಪಾರಿಂಗ್(ಫೈಟಿಂಗ್) ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಮತ್ತು ವೈಯಕ್ತಿಕ ಪ್ಯಾಟ್ರನ್ ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಹಾಗೂ ಗ್ರೂಪ್ ಪ್ಯಾಟರ್ನ್ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ. ಗ್ರೂಪ್ ಸ್ಪಾರಿಂಗ್ ನಲ್ಲಿ (ಫೈಟಿಂಗ್) ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಒಟ್ಟು ಎರಡು ಬೆಳ್ಳಿ ಪದಕ ಒಂದು ಚಿನ್ನದ ಪದಕ ಒಂದು ಕಂಚಿನ ಪದಕಗಳನ್ನು ಪಡೆದುಕೊಂಡಿರುತ್ತಾರೆ