ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ನಜೀರ್ ನದಾಫ್ ರಚಿತಾ ""ಸನಿಹ "" ಕವನ ಸಂಕಲನ ಲೋಕಾರ್ಪಣೆ""
ಬೆಂಗಳೂರು ಬೆಂಗಳೂರಿನ 37 ನೇ ಕ್ರಿಸೆಂಟ್
ಬ್ಯಾಂಕ್ವೇಟ್ ಹಾಲ್ ನಲ್ಲಿ ಪೀರ ಪ್ರಕಾಶನ ಹಾಗೂ ಅಭಿವ್ಯಕ್ತ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ನಜೀರ್ ನದಾಫ್ ರಚಿತಾ ಸನಿಹ ಕವನ ಸಂಕಲನ ವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್ಎನ್ ಮುಕುಂದರಾಜ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಲೋಕಾರ್ಪಣೆ ಮಾಡಿದರು
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್ಎನ್ ಮುಕುಂದರಾಜ್ ಅವರು ಬರಹಗಾರರಿಗೆ ಹಾಗೂ ಓದುಗರಿಗೆ ಸಾಕಷ್ಟು ಲಾಭವನ್ನು ತಂದು ಕೊಡುವಂತದ್ದು ಅದು ಯಾವ ರೀತಿಯಲ್ಲಿ ಎಂದರೆ ಬರಹಗಾರರಿಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ ದೀರ್ಘಾಯುಷ್ಯ ಕೊಡುತ್ತದೆ ಹಾಗೆ ವ್ಯಕ್ತಿತ್ವ ಬದಲಾಗುತ್ತವೆ. ಓದಿವಿಕೆಯ ಮನಸ್ಸುಗಳಿಗೆ ಬದಲಾವಣೆ ಮಾಡುತ್ತವೆ ಮನಸ್ಸಿಗೆ ನೆಮ್ಮದಿ ಹಾಗೂ ಸ್ಪೂರ್ತಿ ನೀಡುವಂತದ್ದಾಗುತ್ತದೆ. ಬರಹಗಾರರಿಗೆ ಹೆಚ್ಚು ಹೆಚ್ಚು ಸಾಮರ್ಥ್ಯ ಮತ್ತು ಹಣ ಕೀರ್ತಿ ತಂದು ಕೊಡುವುದರ ಜೊತೆಗೆ ಓದುಗರು ರಿಂದ ಸಹ ಸನ್ಮಾನ ದೊರಕುತ್ತದೆ ಎಂದು ಹೇಳಿದರು
ಮತ್ತೋರ್ವ ಹಿರಿಯ ಸಾಹಿತಿಗಳಾದ ಮಾಸ್ಕೇರಿ ಎಂ ಕೆ ನಾಯಕ ಇವರು ಕೂಡ ಹಿರಿಯ ಸಾಹಿತಿಗಳಿಂದ ಹಾಗೂ ಕಿರಿಯ ಸಾಹಿತಿಗಳು ಪರಸ್ಪರ ಹೊಂದಾಣಿಕೆಯಿಂದ ಒಬ್ಬರ ಮತ್ತೊಬ್ಬರ ಸಾಹಿತ್ಯ ಸಾಹಿತ್ಯದ ನಾಡಿಮಿಡಿತಗಳು ಒಗ್ಗಟ್ಟಾಗಿ ಒಂದಾಗಿ ಇರಬೇಕು ಎಂದು ಹೇಳಿದರು ಇದೇ ಸಮಯದಲ್ಲಿ ಕನ್ನಡ ನಾಡು ನುಡಿಯ ಭಕ್ತ ನಜೀರ್ ನದಾಫ್, ಹಾಗೆ ಇವರು ಮಾಡಿರುವಂತಹ ಭಾಷಾವಾರು ನೋಡಿದರೆ ಮರಾಠಿಗರಿಗೂ ಮನ ಜಾಗೃತಿಯು ಮೂಡಿಸಿದರು ಹಾಗೆ ಮನೆ ಮನೆಯಲ್ಲಿ ಕನ್ನಡ ಧ್ವಜ ಹಾರಾಡಿಸಿದರು ಈ 66 ಕವನ ಸಂಕಲನ ಇದರಲ್ಲಿ ಅಡಗಿದೆ ಸರ್ಕಾರ ಇಂಥವರನ್ನು ಗುರುತಿಸಬೇಕು ಎಂದರು
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಮನು ಬಳಿಗಾರ್ "ಹುಟ್ಟು ಆಕಸ್ಮಿಕ ಸಾವು ಖಚಿತ" ಅನ್ನುವಂತಹ ನುಡಿ ಎಷ್ಟು ಸತ್ಯವೋ ಹಾಗೆ ನಜೀರ್ ನದಾಫ್ ರಚಿತಾ "ಸನಿಹ "ಕವನ ಸಂಕಲನ 66 ಕವನಗಳು ಈ ಪುಸ್ತಕದಲ್ಲಿ ಅಡಗಿದೆ ಈ ದಿನ ಲೋಕಾರ್ಪಣೆಯಾಗಿದೆ ಇವರು ಬೇರೆ ಧರ್ಮದವರು ಆಗಿದ್ದರು ಕೂಡ ಕನ್ನಡ ಸಾಹಿತ್ಯ ಲೋಕಕ್ಕೆ ಬಂದಿದ್ದಾರೆ ಯಾಕೆಂದರೆ ಸರಸ್ವತಿ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಾರೆ ಈ ಸಾಹಿತ್ಯ ಇವರನ್ನು ಆಕರ್ಷಿಸಿದೆ ಹಾಗೆ ಬೆಳೆದು ನಿಂತಿದ್ದಾರೆ ಎಂದರೆ ಅದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಂಡಯುವಂಥ ಕೆಲಸ ಮಾಡಿದ್ದಾರೆ ಇಂತಹ ಮಹಾನ್ ಸಾಹಿತಿಗಳು ನಮ್ಮ ನಾಡು ದಾಸರ ಸಾಹಿತ್ಯ ಕುಮಾರವ್ಯಾಸ ಬೇಂದ್ರೆ ಕುವೆಂಪು ಇನ್ನು ಹತ್ತು ಹಲವಾರು ಸಾಹಿತಿಗಳು ಅದರಲ್ಲಿ ಕೂಡ ಶಿಶುನಾಳ ಶರೀಫ್ ರವರು ಜನಪದ ಕಲೆ ಸಾಹಿತ್ಯ ಸಾಂಸ್ಕೃತಿಕ ನೆಲೆಬೀಡ ನಮ್ಮ ಕನ್ನಡ ನಾಡಿನಲ್ಲಿ ಎಲ್ಲೇ ಹುಟ್ಟಿದರೂ ಕೂಡ ಕನ್ನಡ ಸಾಹಿತ್ಯ ಬರೆಯುವಂತಹ ಶ್ರದ್ಧಾ ಭಕ್ತಿ ನಮ್ಮಲ್ಲಿರಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ ಎಂ ಕೆ ಶಾಂತನಾಯಕ್ ಮತ್ತು ಜಿ ಕಲ್ಚರ್ ಕಲೆ ಮತ್ತು ಸಂವಹನ ಸಂಸ್ಥೆ ದಿಲಾವರ ರಾಮದುರ್ಗ ಹಾಗೂ ಚಂದನ ದೂರದರ್ಶನ ನಿರೂಪಕರಾದ ಬಸವರಾಜ್ ಅರಬಗಟೃ ದಾಸರಹಳ್ಳಿ ಕ್ಷೇತ್ರದ ಜನಪದ ಸಾಹಿತ್ಯ ಅಧ್ಯಕ್ಷ ವೈ ಬಿ ಎಚ್ಜ್ ಜಯದೇವ ಹಾಗೆ ಇನ್ನು ಹಲವಾರು ಸಾಹಿತಿಗಳು ಸಾಹಿತಿ ಅಭಿಮಾನಿಗಳು ಪಾಲ್ಗೊಂಡಿದ್ದರು.