ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ರಾಯಲ್ ಉತ್ಸವ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ""
---------------------------------------
----------------------------------
ಬೆಂಗಳೂರು: ಇಂದಿನ ಶಿಕ್ಷಣ ವ್ಯವಸ್ಥೆ ಉದ್ಯೋಗ ಕೇಂದ್ರೀಕೃತವಾಗಿ ಹೆಚ್ಚಾಗಿ ಗೋಚರಿಸುತ್ತಿದೆ, ಅದರ ಜೊತೆಗೆ ಶಿಕ್ಷಣದ ಜೊತೆಯಲ್ಲಿ ಮೌಲ್ಯ ಮತ್ತು ವ್ತಕ್ತಿತ್ವ ವಿಕಸನದ ಶಿಕ್ಷಣ ಇಂದಿನ ಅನಿವಾರ್ಯ ಅಗತ್ಯತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಂದು ವ್ಯಕ್ತಪಡಿಸಿದರು.ಅವರು ನಗರದ ಮತ್ತಿಕೆರೆಯ ರಾಯಲ್ ಕಾಲೇಜ್ ಆಯೋಜಿಸಿದ್ದ ರಾಯಲ್ ಉತ್ಸವ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣವು ಹಣ ಗಳಿಸುವುದು ಹೇಗೆ ಎಂದು ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಬೇಕು,ಆ ಕೆಲಸವನ್ನು ರಾಯಲ್ ಕಾಲೇಜ್ ಮಾಡುತ್ತಿದೆ ಎಂದರು.
ಈ ವೇದಿಕೆಯಲ್ಲಿ ಖ್ಯಾತ ಶಿಕ್ಷಣ ತಜ್ಞರಾದ ವೂಡೇ ಕೃಷ್ಣ ಅವರಿಗೆ ರಾಯಲ್ ಜ್ಞಾನ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸಮಯ ಬಹಳ ಅತ್ಯಮೂಲ್ಯವಾಗಿರುವಂತದ್ದು ನೀವು ಪ್ರತಿಯೊಂದು ವಿಷಯದಲ್ಲಿಯೂ ಅಭ್ಯಾಸವನ್ನು ಸರಿಯಾದ ಮಾರ್ಗದಲ್ಲಿ ಮಾಡಿದ್ದೆ ಆದರೆ ನಿಮ್ಮ ಮುಂದಿನ ಯಶಸ್ಸು ನಿಮಗೆ ದಾರಿದೀಪ ವಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಲ್ ಕಾಲೇಜಿನ ಸಂಸ್ಥಾಪಕರಾದ ಡಾ.ದೇವರಾಜ್ ಬಿ.ಕೆ, ವ್ಯವಸ್ಥಾಪಕ ನಿರ್ದೇಶಕರಾದ ಸುಜಾತದೇವರಾಜ್, ಪ್ರಾಚಾರ್ಯರಾದ ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಭಾರತೀಯ ಕಲಾ ದಿಗ್ದರ್ಶನ ಪ್ರೇಕ್ಷಕರ ಮನ ಸೆಳೆಯಿತು