ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜು ರವರು ಮುಂಬರುವ ಜಿ.ಬಿ.ಎ ಚುನಾವಣೆಗೆ ಪೂರ್ವಭಾವಿ ಸಭೆ ಕಾರ್ಯಕರ್ತರ ಜೊತೆ ""
ಪೀಣ್ಯ ದಾಸರಹಳ್ಳಿ : ಭಾರತೀಯ ಜನತಾ ಪಾರ್ಟಿಯ ಶಾಸಕರಾದ ಎಸ್.ಮುನಿರಾಜಣ್ಣ ರವರ ಅಧ್ಯಕ್ಷತೆಯಲ್ಲಿ ಬಿ.ಎಲ್.ಎ 2 ನೇಮಕಾತಿ ಹಾಗೂ ಮುಂಬರುವ ಜಿ.ಬಿ.ಎ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಸಂಘಟನಾತ್ಮಕವಾಗಿ ಯಾವ ರೀತಿ ಸಿದ್ದರಾಗ ಬೇಕೆಂದು ಕಾರ್ಯಕರ್ತರಿಗೆ ಮಾರ್ಗದರ್ಶನ ಹಾಗೂ ಕರೆ ಕೊಟ್ಟರು ಇದೆ ಸಮಯದಲ್ಲಿ ಇಡೀ ಕ್ಷೇತ್ರದ ಜನತೆಗೆ ಕೇಂದ್ರ ಸರ್ಕಾರ ಹಾಗೂ ನಮ್ಮ ರಾಜ್ಯ ಕೊಟ್ಟಿರುವಂತಹ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಿ ಕೇಂದ್ರ ಸರ್ಕಾರದ ಸವಲತ್ತುಗಳು ಬಗ್ಗೆ ಪಟ್ಟಿ ಸಿದ್ಧತೆ ಮಾಡಿಕೊಂಡು ಅವರಿಗೆ ತಿಳಿಸುವಂತಹ ಪ್ರಯತ್ನ ಮಾಡಿ
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸೋಮಶೇಖರ್ ರವರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ .ಜಿ.ಮರಿಸ್ವಾಮಿ ರವರು ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್.ಗಂಗರಾಜು ರವರು ಕೃಷ್ಣಮೂರ್ತಿ ರವರು ಬಿ.ಬಿ.ಎಂ.ಪಿ ಮಾಜಿ ಸದಸ್ಯರಾದ ಉಮಾದೇವಿ ನಾಗರಾಜು ರವರು ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ರವರು ಲಕ್ಷ್ಮಿ ವೆಂಕಟೇಶ್ ರವರು ಹಾಗೂ ಪ್ರಮುಖ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.