ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ - 2025-26ನೇ ಶೈಕ್ಷಣಿಕ ಸಾಲಿನ ಸೃಜನ - ಸಾಂಸ್ಕೃತಿಕ ಇತರ ಚಟುವಟಿಕೆಗಳ ಉದ್ಘಾಟನೆ""
ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ 2025-2026 ನೇ ಶೈಕ್ಷಣಿಕ ಸಾಲಿನ ಸೃಜನ ಸಂಸ್ಕೃತಿ - ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್, ಎನ್ ಸಿ ಸಿ, ರೇಂಜರ್ಸ್ ಅಂಡ್ ರೋವರ್ಸ್, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್, ಇಕೋ ಕ್ಲಬ್, ಅಡ್ವೆಂಚರ್ ಕ್ಲಬ್, ಲಲನಾ ಮಹಿಳಾ ವೇದಿಕೆ ಹಾಗೂ ಆರ್ ಸಿ ಕೌಶಲ್ಯ ತರಬೇತಿ ಕೇಂದ್ರವನ್ನು ಹಾಗೂ ಇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾ್ಪುರ್ ಹಾಗೂ ಖ್ಯಾತ ಕನ್ನಡ ಚಲನ ಚಿತ್ರ್ರರ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಚಲನಚಿತ್ರ ನಟಿ ಕುಮಾರಿ ಕಾರುಣ್ಯ ರಾಮ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಜಾಾಜ್ ಅಹಮದ್ ಖಾನ್ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು
ತದನಂತರ .ಕಾಲೇಜು ದಿನಗಳು ಜೀವನದ ಅತ್ಯಮೂಲ್ಯ ಮಹತ್ವದ ದಿನಗಳು ಈ ದಿನಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯವನ್ನು ನಿರ್ಧರಿಸುತ್ತದೆ ಏಕೆಂದರೆ ನಾನು ಬಡ ಕುಟುಂಬ ದಿಂದ ಬಂದವನು ನಾನು ಕೂಡ ಒಬ್ಬ ಸರ್ಕಾರಿ ಸ್ಕೂಲ್ ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಗುರುಗಳ ಮಹತ್ವ ಎಂತಹದ್ದು ಎಂದು ನಮಗೆ ಗುರುಗಳು ಆಶೀರ್ವಾದ ಹಾಗೂ ಅವರು ಹಾಕಿ ಕೊಟ್ಟಿರುವಂತಹ ಮತ್ತು ಹೇಳಿಕೊಟ್ಟಿರುವಂತಹ ಜ್ಞಾನ ನನ್ನ ಜೀವನದಲ್ಲಿ ಆದಷ್ಟು ನಾನು ರೂಪಿಸಿಕೊಂಡೆ ಅದೇ ರೀತಿ ನೀವುಗಳು ಕೂಡ ಶಿಕ್ಷಣ ಅತ್ಯಮೂಲ್ಯ ಹಾಗೆ ನೋಡಿದರೆ ಆಧುನಿಕ ಬದುಕಿನಲ್ಲಿ ಸ್ಪರ್ಧೆಗಳು ಹೆಚ್ಚು ಇದೆ ಹಾಗಾಗಿ ನೀವುಗಳು ಸಾಕಷ್ಟು ಶ್ರಮ ಮತ್ತು ಶ್ರದ್ಧೆ ವಹಿಸಿ ಅಭ್ಯಾಸವನ್ನು ಮಾಡಿದ್ದೆ ಆದರೆ ಸ್ಪರ್ಧೆಯಲ್ಲಿ ಯಶಸ್ವಿಯ ಹಾದಿಯನ್ನ ಪಡೆಯಬಹುದು ಹಾಗಾಗಿ ನಾನು ನಿಮಗೆ ಉದಾಹರಣೆ ನನ್ನ ವಿದ್ಯಾರ್ಥಿ ಜೀವನದಲ್ಲಿ ನಡೆದಿರ್ತಕ್ಕಂತ ಘಟನೆಯನ್ನು ನಾನು ಹೇಳಲು ಬಯಸುತ್ತೇನೆ ಏಕೆಂದರೆ ನಾನು ಪಿಯುಸಿ ವಿಜ್ಞಾನ ವಿಭಾಗವನ್ನ ತೆಗೆದುಕೊಂಡಿದೆ ನನಗೆ ಪಾಸ್ ಮಾಡಿ ಕೊಂಡಿದ್ದೆ ಬಹಳ ಕಷ್ಟ ಆಯಿತು ಮತ್ತೆ ನಮ್ಮ ತಂದೆಗೆ ನನಗೆ ಬಾಳ ಕಷ್ಟವಾಗುತ್ತಿದೆ ಎಂದು ಹೇಳಲು ನಿರಕರಿಸಿ ಅವರಿಗೆ ಬಿಎ ಮಾಡಿದರೆ ನಾನು ತಹಶೀಲ್ದಾರ್ ಆಗುತ್ತೇನೆ ಎಂದು ಹೇಳಿ ಬಿಎ ಮುಗಿಸಿಕೊಂಡು ಎಲ್ ಎಲ್ ಬಿ ಮಾಡಿ ತದನಂತರ ನಾನು ರಾಜಕೀಯಕ್ಕೆ ಬಂದು ಹಲವಾರು ಬಾರಿ ಎಂಎಲ್ಎ ಹಾಗೆ ಸಚಿವನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಸಚಿವರಾದ ಆರ್ ಬಿ ತಿಮ್ಮಾಪುರ್ ತಿಳಿಸಿದರು
ಕುಮಾರಿ ಕಾರುಣ್ಯ ರಾಮ್ ರವರು ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದು ಮನೆಯ ಕೆಲಸಗಳನ್ನು ನೋಡಿಕೊಳ್ಳಲು ಅನ್ನುವಂತಹ ಭಾವನೆಗಳು ಅವರಲ್ಲಿ ಇದೆ ಎಂದರು ಆದರೆ ಇಲ್ಲಿ ಯಾವುದೇ ತರಹದ ಅಡ್ಡಿಯಾತಂಕಗಳು ಬೆಂಗಳೂರುನಲ್ಲಿ ಅಂತಹ ಸಮಸ್ಯೆಗಳು ಇಲ್ಲಿ ಎದುರಾಗುವುದು ನೀವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನವನ್ನು ಶ್ರಮಪಟ್ಟು ಪಡೆದುಕೊಳ್ಳಿ ಎಂದು ಹೆಣ್ಣು ಮಕ್ಕಳಿಗೆ ಕಿವಿ ಮಾತನ್ನ ಹೇಳಿದರು.
ಹಾಗೆ ಖ್ಯಾತ ಕನ್ನಡ ಚಲ್ಲನಚಿತ್ರ ನಿರ್ದೇಶಕ ಬರಹಗಾರ ಮತ್ತು ನಿರ್ಮಾಪಕರು ಓಂ ಸಾಯಿ ಪ್ರಕಾಶ್ ರವರು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಾಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೂಡ ಗಮನ ವಹಿಸ ಬೇಕಾಗಿರುತ್ತದೆ ಆದ ಕಾರಣ ನೀವುಗಳು ಯಾವ ವಿಭಾಗದಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದೀರಾ ಅದನ್ನು ಶ್ರದ್ಧೆಯಿಂದ ಶ್ರಮಪಟ್ಟಿದ್ದೆ ಆದರೆ ನಿಮ್ಮ ವಿದ್ಯಾಭ್ಯಾಸಕ್ಕೆ ಹಾಗೂ ನೀವು ಪಡೆಯುವಂತಹ ಶಿಕ್ಷಣವನ್ನವು ದಾರಿದೀಪವಾಗುತ್ತಿದೆ ಎಂದು ತಿಳಿಸಿದರು. .
ತದನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಜಾಜ್ ಅಹಮದ್ ಖಾನ್ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂಖ್ಯೆಯು ಹೆಚ್ಚು ಆಗುವುದರಿಂದ ಹಾಗೂ ಇದೇ ವರ್ಷ ಶಿಕ್ಷಣ ಇಲಾಖೆಯಿಂದ 75 ವಿದ್ಯಾರ್ಥಿಗಳಿಗೆ ಒಂದು ತರಗತಿ ಮಾಡಲು ಕಲ್ಪಿಸಿದ್ದಾರೆ ಈ ಸಾರಿ ನಾವು ಮೂರು ಹಂತಗಳಲ್ಲಿ ಕಾಲೇಜಿನ ವೇಳೆಯನ್ನ ಮಾಡಬೇಕಾಗಿ ಬಂದಿದೆ ಏಕೆಂದರೆ ಕಾಲೇಜಿನ ಕೊಠಡಿಗಳ ಸಂಖ್ಯೆ ಜಾಸ್ತಿ ಬೇಕಾಗಿರುವುದರಿಂದ ಈ ಈ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಸೃಜನ ಸಂಸ್ಕೃತಿ_ ಸಾಂಸ್ಕೃತಿಕ ಸಂಚಾಲಕರಾದ ಪ್ರೊ. ಅಂಬುಜಾಕ್ಷಿ ಹಾಗೂ ಸೃಜನ ಆರ್ ಸಿ ವಾಣಿಜ್ಯ ಮತ್ತು ನಿರ್ವಹಣಾ ವೇದಿಕೆ ಸಂಚಾಲಕರಾದ ಪ್ರೊ ಗೋವಿಂದಪ್ಪ ವೈ, ಕ್ರೀಡಾ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸಲು ಮತ್ತು ಎನ್. ಎಸ್. ಎಸ್. ಸಂಚಾಲಕರಾದ ಪ್ರೊ. ಶ್ರೀಕಾಂತ್ ಬಿಕೆ ಯುಕೋ ಕ್ಲಬ್ ಸಂಚಲಕರದ ಡಾ. ನಾಗರಾಜ್ ಹಾಗೂ ಅಡ್ವೆಂಚರ್ ಕ್ಲಬ್ ಸಂಚಲಕರದ ಡಾ. ಎಚ್. .ಕೆ. ಸತೀಶ್ ರೆಡ್ ಕ್ರಾಸ್ ರೆಡ್ ರಿಬ್ಬನ್ ಮೋಹನ್ ಕುಮಾರ್, ರೇಂಜಸ್ ಅಂಡ್ ರೋವರ್ಸ್ ಪ್ರೊ ಆಶಾ ಕೆ ಆರ್. ಕಾಲೇಜಿನ ಬೋಧಕ ಬೋದಕೇತರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು