ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಶರಣ ವಕೀಲರ ವೇದಿಕೆ (ರಿ) ಕರ್ನಾಟಕ ಎಸ್ ವಿ ವಿ ಲಾ ಅಕಾಡೆಮಿ ಉದ್ಘಾಟನೆ ಹಾಗೂ ವಕೀಲರ ವೃತ್ತಿಯಲ್ಲಿ 50 ವರ್ಷ ಪೂರೈಸಿರುವ ಸಮಾಜದ ಹಿರಿಯ ವಕೀಲರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ""
ಬೆಂಗಳೂರು: ಆರ್ ಟಿ ನಗರದಲ್ಲಿರುವ ಶ್ರೀ ತರಳಬಾಳು ಕೇಂದ್ರ ಇಲ್ಲಿ ಶರಣ ವಕೀಲರ ವೇದಿಕೆ (ರಿ) ಕರ್ನಾಟಕ ಎಸ್ ವಿ ವಿ ಲಾ ಅಕಾಡೆಮಿ ಉದ್ಘಾಟನೆ ಹಾಗೂ ವಕೀಲದ ವೃತ್ತಿಯಲ್ಲಿ 50 ವರ್ಷ ಪೂರೈಸಿರುವ ಸಮಾಜದ ಹಿರಿಯ ವಕೀಲರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯವನ್ನು ಶ್ರೀ ಮಧುಜ್ಜಯಿನಿ ಸದ್ಧರ್ಮ ಸಿಂಹಾಸನಾದಿ ಶ್ರೀತರಳಬಾಳು ಜಗದ್ಗುರು 1108 ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ತರಳುಬಳು ಜಗದ್ಗುರು ಹಾಗೂ ವಿಶ್ರಾಂತ ಮುಖ್ಯ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಕೇರಳ ಬನ್ನೂರು ಮಠ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು ಮೂಲಕ ಚಾಲನೆ ನೀಡಿದರು
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಮಹಾಸ್ವಾಮಿಗಳು ಮೊದಲಿಗೆ ಶರಣ ವಕೀಲದ ವೇದಿಕೆ ಭಗವಂತ ಹಾರೈಸಲಿ ಎಂದು ಹಾರೈಸಿದರು ತದನಂತರ
""ಕಳಬೇಡ ಕೊಲ್ಲಬೇಡ ಮುನಿಯಬೇಡ ಅನ್ಯರಿಗೆ ಅಸೆಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ ಇದೆ ಅಂತರಂಗ ಶುದ್ದಿ ಇದೆ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮ ದೇವರ ನಲಿಸುವ ಪರಿ"" ವಚನವನ್ನ ನಾವೆಲ್ಲ ತಿಳ್ಕೊಂಡಿದ್ದೇವೆ
ನ್ಯಾಯಾಲಯದಲ್ಲಿರುವ ನ್ಯಾಯಾಲಯದ ಮೂರು ಬೆಂಚ್ಗಳು ಇಲ್ಲೇ ವೇದಿಕೆ ಮೇಲೆ ಅಸ್ಸಿನರಾಗಿದ್ದೀರಾ ನನಗೆ ಬಹಳ ಖುಷಿ ತಂದು ಕೊಟ್ಟಿದೆ ಅದು ಹೇಗೆ ಎಂದರೆ ನಿವೃತ್ತಿ ನ್ಯಾಯಾಧೀಶರು ಹಾಗೂ ನಿವೃತ್ತಿ ವಕೀಲರು ಹಾಗೂ ಈಗ ವಕೀಲರ ವೃತ್ತಿಯಲ್ಲಿರುವರು ರವರು ಆದರೆ ಸಮಾಜದ ಸಾಮಾನ್ಯ ಜನತೆ ನ್ಯಾಯವನ್ನು ಸಿಗುತ್ತೆ ಎನ್ನುವಂತಹ ಭರವಸೆಯ ಮೇಲೆ ನ್ಯಾಯಾಲಯಕ್ಕೆ ಬಹಳ ಮಹತ್ವ ಕೊಡುತ್ತಾರೆ ನಾವು ಕೊಡುವಂತಹ ನ್ಯಾಯ ಬಹಳಷ್ಟು ಜನರ ಜೀವ ಮತ್ತು ಜೀವನ ಕಾಪಾಡುತ್ತದೆ ಹಾಗಾಗಿನ್ಯಾಯಾಲಯದಲ್ಲಿ ತೀರ್ಪನ್ನು ಕೊಡುವುದನ್ನು ಕಕ್ಷಿಧಾರ ಕಾಯುತ್ತಿರುತ್ತಾನೆ ಹಾಗಾಗಿ ನ್ಯಾಯಾಧೀಶರಿಗೆ ಬಸವಣ್ಣನವರು ಕೊಟ್ಟಿರುವಂತಹ ವಚನವನ್ನು ಇಲ್ಲಿ ಬಹಿರಂಗ ಪಡಿಸುತ್ತಾರೆ ಅಂದರೆ ನ್ಯಾಯಾಧೀಶರ ಸರಿಯಾದ ನ್ಯಾಯವನ್ನು ಬಹಿರಂಗವನ್ನು ಪಡಿಸುತ್ತಾರೆ ಎಂದು ಕಕ್ಷಿದಾರ ಕಾಯುತ್ತಾ ಇರುತ್ತಾನೆ ನ್ಯಾಯ ದೇಗುಲದಲ್ಲಿ ನ್ಯಾಯ ಸಿಕ್ಕಿದ್ದೇ ಆದರೆ ಸಾಮಾನ್ಯ ಮನುಷ್ಯ ದೇವರನ್ನು ಹೇಗೆ ಪೂಜಿಸುತ್ತಾನೋ ಹಾಗೆ ತೀರ್ಪು ಕೊಟ್ಟಿರುವಂತಹ ನ್ಯಾಯಾಧೀಶನಿಗೆ ದೇವರಂತೆ ಕಾಣುತ್ತಾನೆ ಹಾಗೆ ಮಾಡಿದ್ದರೆ ನಮ್ಮ ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಹಾಗೂ ಯುವ ವಕೀಲ ವೃತ್ತಿ ಮಾಡುವವರೆಗೂ ಬಹಳ ಸಹಕಾರಿಯಾಗುತ್ತದೆ ಹಾಗೆ ನೋಡಿದರೆ ನ್ಯಾಯಾಲಯಕ್ಕೆ ಬರುವಂತಹ ಜನತೆ ಯುವ ವಕೀಲ ವೃತ್ತಿ ಮಾಡುವಂತಹ ವೃತ್ತಿಪರಗು ಬಹಳ ಉತ್ತಮ ಭರವಸೆಗಳಿಗೆ ಸಹಕಾರಿಯಾಗುತ್ತದೆ ಏಕೆಂದರೆ ನಮ್ಮ ಬಸವೇಶ್ವರರು 12ನೇ ಶತಮಾನದಲ್ಲಿ ಕೊಟ್ಟಿರುವಂತಹ ಈ ವಚನದ ತಾತ್ಪರ್ಯತೆ ನೋಡಿದಾಗ ನಾವು ಮಾಡಿರುವಂತಹ ಕೆಲಸ ಶ್ರೇಷ್ಠತೆ ಇದ್ದಾಗ ನಾವು ಮಾಡುವಂತಹ ಶ್ರಮ ಕೂಡ ಶುದ್ಧವಾಗಿದ್ದಾಗ ಮಾತ್ರ ಸಾಧ್ಯ ನ್ಯಾಯಯುತವಾದ ಪ್ರಪಂಚ ಕಂಡುಕೊಳ್ಳುವುದು ಆಗುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ನಿವೃತ್ತಿ ನ್ಯಾಯಾಧೀಶರಾದ ಸುಭಾಷ್ ಬಿ ಅಡಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಬೆಂಗಳೂರು. ಹಾಗೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ನಿವೃತ್ತಿ ನ್ಯಾಯಾಧೀಶರಾದ ರತ್ನಕಲಾ ಹಾಗೂ ನಿರ್ದೇಶಕರು ಜನರಲ್ ಆಫ್ ಪೊಲೀಸ್ ಕರ್ನಾಟಕ ಸರ್ಕಾರ ಎಲ್ ರೇವಣಸಿದ್ದಯ್ಯ, ಎಸ್ ಎಸ್ ಮಿಟ್ಟಲ್ಲ್ ಕೋಡ್ ವಕೀಲರು ಹಾಗೂ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರು ಬೆಂಗಳೂರು ಹಾಗೂ ಶರಣ ವಕೀಲರ ವೇದಿಕೆ ಅಧ್ಯಕ್ಷರಾದ ಎಚ್ ಎಸ್ ಚಂದ್ರ ಮೌಳಿ ಹಾಗೂ ಕಾರ್ಯಧ್ಯಕ್ಷರು ಜಿಎಂ ಸಿದ್ದಪ್ಪ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸಿ ಚೆನಾಸ್ಪೂರ್ ಮತ್ತು ಬಾರ್ ಕೌನ್ಸಿಲ್ ಸದಸ್ಯರಾದ ಆರ್ ರಾಜಣ್ಣ ಮತ್ತು ಶರಣ ವಕೀಲರ ವೇದಿಕೆಯ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರುಗಳು ಮತ್ತು ಹಲವಾರು ಸಮಾಜಮುಖಿ ಚಿಂತಕರು ಪಾಲ್ಗೊಂಡಿದ್ದರು