ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಕೋವಿಡ್ ಲಸಿಕೆ ವಿಚಾರದಲ್ಲಿ ಸ್ವಾವಲಂಬಿ ಆಗಲು ಪ್ರಧಾನಿ ನರೇಂದ್ರ ಮೋದಿಜೀ ಅವರ ಪ್ರಯತ್ನದಿಂದ ಸಾಧ್ಯವಾಯಿತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಅವರು ತಿಳಿಸಿದರು.
ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಇಂದು ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. 25 ನಗರದಲ್ಲಿ ಮೆಟ್ರೋ ವಿಸ್ತರಣೆ ನಡೆದಿದೆ ಎಂದು ವಿವರಿಸಿದರು.
ಸಂವಾದದಲ್ಲಿ ಭಾಗವಹಿಸಿದ ಅವರು, ಪ್ರಶ್ನೆಗಳಿಗೆ ಉತ್ತರಿಸಿದರು. ಬಿಜೆಪಿ- ಎನ್‍ಡಿಎ ಸರಕಾರದಲ್ಲಿ ವಿಮಾನನಿಲ್ದಾಣಗಳ ಸಂಖ್ಯೆ ಗಮನಾರ್ಹವಾಗಿ ಏರಿದೆ ಎಂದ ಅವರು, 2028ರಲ್ಲಿ ಮತದಾನ ಮಾಡುವವರು ಉತ್ತಮ ಬೆಂಗಳೂರಿಗಾಗಿ ಮತ್ತು ಅತ್ಯುತ್ತಮ ಕರ್ನಾಟಕಕ್ಕಾಗಿ ಮತದಾನ ಮಾಡುವಂತೆ ಅವರು ಮನವಿ ಮಾಡಿದರು.
ಜಿಎಸ್‍ಟಿ ವ್ಯಾಪ್ತಿಗೆ ಬರಲು ಉದ್ಯಮಿಗಳು ಈಗ ಹಿಂಜರಿಯುತ್ತಿಲ್ಲ ಎಂದು ಅವರು ಹೇಳಿದರು. ಜಿಎಸ್‍ಟಿ ಸರಳಗೊಳಿಸಿದ ಕಾರಣ ಉದ್ಯಮಿಗಳು ಅದರ ಲಾಭ ಪಡೆಯುವಂತೆ ಅವರು ಕೋರಿದರು.
ಸಿಲಿಕಾನ್ ಸಿಟಿ ಕಾಲೇಜಿನ ಚಯರ್‍ಮನ್ ಚಂದ್ರಶೇಖರ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಬಿಜೆಪಿ ಪ್ಯಾನೆಲಿಸ್ಟ್ ಶರತ್ ಹೆಗಡೆ, ಎಬಿವಿಪಿ ಸದಸ್ಯರಾದ ತ್ರಿಶೂಲ್ ರೆಡ್ಡಿ, ರಾಜ್ಯ ವಕ್ತಾರರಾದ ಅಕ್ಷಯ್ ರೈ, ಸುರಭಿ ಹೊದಿಗೆರೆ ಉಪಸ್ಥಿತರಿದ್ದರು.