ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬೆಂಗಳೂರು ಎ ಎಸ್ ಆರ್ ಸಿ ಟಿ ಬಸ್ ನಿಲ್ದಾಣದಲ್ಲಿ ಎಟಿಎಂ ಉದ್ಘಾಟನೆ 
ಬೆಂಗಳೂರು:  ಕೆಂಪೆಗೌಡ ಬಸ್ ನಿಲ್ದಾಣ‌ದ
ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಬ್ಯಾಂಕ್ ಎ‌ಟಿಎಂ ಸೌಲಭ್ಯವಿರಲಿಲ್ಲ. 
ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ತುರ್ತು‌ ಕೆಲಸಕ್ಕಾಗಿ‌ ಹಣ‌ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಇಂದು ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ‌ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1 ರ ಮುಖ್ಯ ರಸ್ತೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಅನ್ನು ಪ್ರಾರಂಭಿಸಲಾಗಿಯಿತು. 
ಶ್ರೀ.ಅಕ್ರಂ‌ಪಾಷ ಭಾಆಸೇ, ,ವ್ಯವಸ್ಥಾಪಕ ‌ನಿರ್ದೇಶಕರು ,ಕೆ‌ ಎಸ್ ಆರ್ ಟಿ‌ ಸಿ‌ ರವರು ಸದರಿ ಶಾಖೆಯನ್ನು ಉದ್ಘಾಟಿಸಿದರು.  ಶ್ರೀ ಉಮೇಶಕುಮಾರ್ ಸಿಂಗ್ ಪ್ರಾದೇಶಿಕ ಮುಖ್ಯಸ್ಥರು, ಇಂಡಿಯನ್ ಈವರ್ ಸೀಸ್ ಬ್ಯಾಂಕ್, ಬೆಂಗಳೂರು ವಲಯ, ಶ್ರೀ ಸಂತೋಷ ಕುಮಾರ್ ಪಾಂಡೆ, ಎಜಿಎಂ, IOB, ರವರು, ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದ ಪರಿವೀಕ್ಷಣೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕರು ಮುಂಗಡ ಟಿಕೇಟ್ ಕಾಯ್ದಿರಿಸುವ ಕೇಂದ್ರ, ವಾಣಿಜ್ಯ ಮಳಿಗೆಗಳು, ಒಪ್ಪಂದ‌ ಮೇರೆಗೆ‌ ನೀಡುವ ವಾಹನ ಕೇಂದ್ರ, ಬಸ್ ನಿಲ್ದಾಣದ ಸ್ವಚ್ಛತೆಯನ್ನು ಪರಿವೀಕ್ಷಣೆ ನಡೆಸಿದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News