ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು ಆಸ್ಪತ್ರೆ (ಜಯನಗರ ಮತ್ತು ಕೆಂಗೇರಿ ಶಾಖೆಗಳು), "ಪಿ ಐ ಎ ಮ್ಯಾರಥಾನ್ 2025" ಆಯೋಜಿಸಿ ಉದ್ಯೋಗಿಗಳ ಆರೋಗ್ಯ ಅರಿವು ಜಾಗೃತಗೊಳಿಸಿದರು
,
ಬೆಂಗಳೂರು ಆಸ್ಪತ್ರೆ (ಜಯನಗರ ಮತ್ತು ಕೆಂಗೇರಿ ಶಾಖೆಗಳು), ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ (PIA) ಸಹಯೋಗದಲ್ಲಿ, ಪಿ ಐ ಎ ಮ್ಯಾರಥಾನ್ 2025" ಅನ್ನು ಜೂನ್ 7ರ ಶನಿವಾರ ಯಶಸ್ವಿಯಾಗಿ ಆಯೋಜಿಸಿದರು. ಈ ಆರೋಗ್ಯ ಕೇಂದ್ರೀಕೃತ ಕಾರ್ಯಕ್ರಮವು 3ಕೆ, 5ಕೆ ಮತ್ತು 10ಕೆ ಓಟಗಳ ರೂಪದಲ್ಲಿ ಪೀಣ್ಯ ಕೈಗಾರಿಕಾ ಸಂಘದ ಸದಸ್ಯರು ಮತ್ತು ತಯಾರಿಕಾ ಕ್ಷೇತ್ರದ ಉದ್ಯೋಗಿಗಳಿಗಾಗಿ ವಿಶೇಷವಾಗಿ ರೂಪುಗೊಂಡಿದ್ದು, "ಪೀಣ್ಯ ಒಟ್ಟಿಗೆ ಓಡುತ್ತದೆ – ಉದ್ಯಮಿಗಳು, ಉದ್ಯೋಗಿಗಳು ಮತ್ತು ಶಕ್ತಿ" ಎಂಬ ಉತ್ಸಾಹದಲ್ಲಿ ಜರುಗಿತು .
ಈ ಮ್ಯಾರಥಾನ್‌ನಲ್ಲಿ 1200ಕ್ಕೂ ಹೆಚ್ಚು ಜನರು ಉತ್ಸಾಹಭರಿತವಾಗಿ ಭಾಗವಹಿಸಿದ್ದು, ಕೈಗಾರಿಕಾ ಸಮುದಾಯದ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯತ್ತಿನ ಮೇಲೆ ಅವರ ಕಟ್ಟುನಿಟ್ಟಾದ ಬದ್ಧತೆಯನ್ನು ತೋರಿಸುತ್ತದೆ. ಕಾರ್ಯಕ್ರಮದ ಉದ್ದೇಶ ಉದ್ಯೋಗಿಗಳಲ್ಲಿ ಹೃದಯದ ಆರೋಗ್ಯ, ಮತ್ತು ಆರೋಗ್ಯಕರ ಜೀವನ-ಕೆಲಸದ ಸಮತೋಲನದ ಮಹತ್ವವನ್ನು ಒತ್ತಿಹೇಳುವುದು.
ಕಾರ್ಯಕ್ರಮವನ್ನು ಬೆಂಗಳೂರು ಆಸ್ಪತ್ರೆ (ಜಯನಗರ ಮತ್ತು ಕೆಂಗೇರಿ ಶಾಖೆಗಳು), ವೈದ್ಯಕೀಯ ನಿರ್ದೇಶಕ ಹಾಗೂ ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಮನ್ನೆಂ ಮತ್ತು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಆರ್ ಧ್ವಜ ಹಾರಿಸುವುದರ ಮೂಲಕ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಅಭಿಷೇಕ್ ಮನ್ನೆಂ ಅವರು ಸಮತೋಲನ ಯುಕ್ತ ಜೀವನಶೈಲಿಯ ಅಗತ್ಯತೆಯನ್ನು ಪ್ರಸ್ತಾಪಿಸಿ, 640 ಸ್ಲೈಸ್ ಸಿಟಿ ಸ್ಕ್ಯಾನ್ ತಂತ್ರಜ್ಞಾನದ ಬಗ್ಗೆ ವಿವರಿಸಿದರು. ಈ ತಂತ್ರಜ್ಞಾನವು ಹೃದಯಾಘಾತದ ಮೊದಲ ಹಂತದ ಗುರುತು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಮಹತ್ವದ ಪಾತ್ರ ವಹಿಸುತ್ತದೆ. ಕೈಗಾರಿಕಾ ಕಾರ್ಮಿಕರ ನಡುವೆ ಬೆನ್ನುಮೂಳೆಯ ಆರೋಗ್ಯದ ಪ್ರಾಮುಖ್ಯತೆಯನ್ನೂ ಅವರು ಒತ್ತಿಹೇಳಿದರು.
ಶಿವಕುಮಾರ್ ಆರ್ ಅವರು, ಉದ್ಯೋಗಿಗಳ ಆರೋಗ್ಯ ಅರಿವಿಗಾಗಿ ಬೆಂಗಳೂರು ಆಸ್ಪತ್ರೆ (ಜಯನಗರ ಮತ್ತು ಕೆಂಗೇರಿ ಶಾಖೆಗಳು), ಮತ್ತು ಪಿ ಐ ಎ ಕೈ ಜೋಡಿಸಿರುವುದು ಶ್ಲಾಘನೀಯವೆಂದು ಹೇಳಿದರು. ಈ ಮ್ಯಾರಥಾನ್ ಆರೋಗ್ಯದ ಪ್ರೇರಣೆಯಲ್ಲದೆ ಉದ್ಯೋಗಿಗಳ ತೀವ್ರ ಜೀವನ ಶೈಲಿಯಿಂದ ವಿಶ್ರಾಂತಿ ಪಡೆಯಲು ಒಂದು ಸಂತೋಷಕರ ಹಾಗೂ ಪುನಶ್ಚೇತನ ಅನುಭವವನ್ನೂ ನೀಡಿದುದಾಗಿ ಅಭಿಪ್ರಾಯಪಟ್ಟರು.