ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಶ್ರೀ ಅಹಲ್ಯ ದೇವಿಯ 300ನೇ ಜನ್ಮದಿನಾಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ನೆಲಮಂಗಲದ ಬಿಜೆಪಿ ತಾಲೂಕು ಘಟಕದಿಂದ ವಿಜೃಂಭಣೆಯಿಂದ ಆಚರಣೆ ""
ನೆಲಮಂಗಲ : ಹೆದ್ದಾರಿಯಿಂದ ನೆಲಮಂಗಲದ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರರವರಿಗ ಭವ್ಯ ಸ್ವಾಗತವನ್ನು ನೀಡುವ ಮೂಲಕ  ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಮತ್ತು ನೆಲಮಂಗಲ ತಾಲೂಕು ಕಾರ್ಯಕರ್ತರು ಬೃಹದ್ದಾಕಾರದ ಹಾರವನ್ನು ಹಾಕಿ ಬರಮಾಡಿಕೊಂಡರು  ತದನಂತರ ಜಯದೇವ ಸಮುದಾಯ ಭವನಕ್ಕೆ ಬಂದು ಶ್ರೀ ಅಹಲ್ಯ ದೇವಿಯ 300 ನೇ  ಜನ್ಮ ದಿನಾಚರಣೆಯ ಉದ್ಘಾಟನೆಯಲ್ಲಿ ಭಾಗವಹಿಸಿದ ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿ ನಮ್ಮ ಬಿಜೆಪಿ ಕೇಂದ್ರ ಸರ್ಕಾರ ಕೊಟ್ಟಿರುವಂತಹ ಯೋಜನೆಗಳು ಬಡ ಮತ್ತು ರೈತರಿಗೆ ನೀಡಿರುವಂತಹ ಯೋಜನೆಗಳನ್ನು ಪ್ರಧಾನ ಮಂತ್ರಿ ಸಹಾಯಧನ ಹಾಗೂ ದೇಶ ಕಾಯುವ ಯೋಧರಿಗೆ ಯುದ್ಧ ವಿಮಾನಗಳು ಸಲಕರಣೆಗಳು ಇನ್ನು ನೂರಾರು ದೇಶಕ್ಕೆ ಕೊಟ್ಟಿರುವಂತಹ ನಮ್ಮ ಹೆಮ್ಮೆಯ ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ  ನೀವು ಜನಸಾಮಾನ್ಯರಿಗೂ ಹಾಗೂ ಕಾರ್ಯಕರ್ತರಿಗೆ ತಿಳಿಸಿ ಸಂಘಟನೆಗೆ ಹೊತ್ತು ಕೊಡಿ ಹಾಗೆ ನಮ್ಮ ಮಾಜಿ ಮುಖ್ಯಮಂತ್ರಿಗಳು ಬಿಎಸ್ ಯಡಿಯೂರಪ್ಪನವರು ಹೆಣ್ಣು ಮಗುವಿಗೆ ಭಾಗ್ಯ ಲಕ್ಷ್ಮಿ ಹಾಗೂ ಗಂಡು ಮಕ್ಕಳಿಗೆ ಸೈಕಲ್ ಕೊಡುವ ಯೋಜನೆಗಳನ್ನು ಮತ್ತು ರೈತರ ಮತ್ತು  ಹಿಂದುಳಿದ ವರ್ಗದವರಿಗೂ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೂ  10 ಹಲವಾರು ಯೋಜನೆಗಳನ್ನು ಮತ್ತು 60 ವರ್ಷ ಮೇಲ್ಪಟ್ಟವರಿಗೆ  ಮಾಸಿಕ ಹಣವನ್ನು ಹಾಗೆ ಮಹಿಳಿಯರಿಗೆ ಹೆಚ್ಚಿನ ಮಹತ್ವ ನೀಡಿತ್ತು ನಮ್ಮ ಸರ್ಕಾರ ಇದ್ದಾಗ ರಾಜ್ಯಕ್ಕೆ ಕೊಟ್ಟಿದೆ ಈ ಸರ್ಕಾರ ಅಧಿಕಾರ ಬಂದ ನಂತರ ಬೇಜವಾಬ್ದಾರಿ ಆಡಳಿತ ಮತ್ತು ಓಲೈಕೆ ರಾಜಕಾರಣದಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಯ ಹಡೆಗಟ್ಟು ಹೋಗಿದೆ  ಹಿಂದೂ ನಾಯಕರಿಂದ ಅಲ್ಲ ಹಾಗೆ ನಮ್ಮ ಹಿಂದೂ ಸಂಘಟನೆಗಳ ಪ್ರಮುಕರ ಮೇಲೆ ಪ್ರಕರಣಗಳನ್ನು ದಾಖಲಿಸುವುದು ಅಲ್ಲದೆ ಬಿಜೆಪಿಯ ಕಾರ್ಯಕರ್ತರ ಮೇಲೆ ಹತ್ತು ಹಲವಾರು ಸಮಸ್ಯೆಗಳನ್ನ ಮಾಡುವಂಥದ್ದು ಹಾಗೆ ಜನಸಾಮಾನ್ಯರ ಬದುಕು ಕೂಡ ಬಹಳ ಕಷ್ಟವಾಗಿದೆ ಅವರ ದಿಕ್ಕನ್ನು ತಪ್ಪಿಸುವಂತಹ ಕೆಲಸವನ್ನು ಈ ರಾಜ್ಯ ಸರ್ಕಾರ ಮಾಡುತ್ತಿದೆ  ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ರಾಮಕೃಷ್ಣಪ್ಪನವರು ನೆಲಮಂಗಲ ತಾಲೂಕು ಘಟಕದ ಸಂಘಟನೆಯನ್ನು ಮಾಡಲಿಕ್ಕೆ ನಾನು ಎಲ್ಲ ಕಾರ್ಯಕರ್ತರ ಅನುಮತಿ ಮತ್ತು ಅವರಿಗೆ ಹೆಚ್ಚು ಹೆಚ್ಚು ಕಾರ್ಯಕರ್ತರು ಸಂಘಟನೆಯನ್ನು ಮಾಡಲು, ಹತ್ತಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ ಇನ್ನೂ ಮುಂದೆ ನಿಮ್ಮ ಜೊತೆಯಲ್ಲಿನೆ ಇರುತ್ತೇನೆ ಹಾಗೆ ಮುಖಂಡರುಗಳಿಗೆ ಕೂಡ ಒಗ್ಗಟ್ಟಾಗಿ ಮತ್ತು ಏನೇ ಅಡೆತಡೆಗಳು ಬಂದರೂ ಕೂಡ ಒಗ್ಗಟ್ಟು ಬಿಟ್ಟು ಹೋಗಬಾರದೆಂದು ಕಿವಿ ಮಾತನ್ನು ಕಾರ್ಯಕರ್ತರ ಗಮನಕ್ಕೆ ತಂದರು ಹಾಗೆ ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷರಾದ ಮಂಜುಳಾ ರವರು ಮಹಿಳಾ ಘಟಕ ಸಂಘಟನೆಯನ್ನು ಇನ್ನು ಹೆಚ್ಚು ಹೆಚ್ಚು ಕಾರ್ಯಕರ್ತೆಯನ್ನು ಕರೆತರುವ ಮೂಲಕ ಕಾರ್ಯಕ್ರಮವನ್ನ ಮಾಡುವ ಮೂಲಕ  ಹೆಚ್ಚು ಯೋಜನೆಗಳನ್ನ  ಬಿಜೆಪಿ ರಾಜ್ಯಕ್ಕೆ ಕೊಟ್ಟಂತಹ ಮಾಜಿ ಮುಖ್ಯಮಂತ್ರಿಗಳು ಬಿಎಸ್ ವೈ ಹಾಗೂ ಬೊಮ್ಮಾಯಿ ಮತ್ತೆ ಜಗದೀಶ್ ಶೆಟ್ಟರ್ ಸದಾನಂದ ಗೌಡರು ಮಾಡಿದಂತಹ ರಾಜ್ಯಕ್ಕೆ ಸಾಮಾನ್ಯ ಜನರಿಗೆ ತಿಳಿಪಡಿಸಿ ಸಂಘಟನೆಯನ್ನು ಮಾಡಿ ಅಂತ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರವಿ.
ಜಿಲ್ಲಾ ಮಹಿಳಾ ಅಧ್ಯಕ್ಷರಾದ  ಅನುಸೂಯ.
ಎಲ್ಲಾ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳು ಪದಾಧಿಕಾರಿಗಳು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ಶ್ ಕೆ. ಪಿ. ಬೃಂಗೀಶ್.ಮಾಜಿ ಶಾಸಕ ಎಂ ವಿ ನಾಗರಾಜ್. ಮಂಡಲದ ಅಧ್ಯಕ್ಷರು  ಜಗದೀಶ್ ಚೌದರಿ. ಮಾಜಿ ಎನ್ ಡಿ ಎ ಅಧ್ಯಕ್ಷರಾದ ಮಲ್ಲಯ್ಯದೇವನಹಳ್ಳಿ ಮಂಡಲಧ್ಯಕ್ಷ ಎಸ್. ಅಂಬರೀಷ್ ಗೌಡ. ದೊಡ್ಡಬಳ್ಳಾಪುರ ನಾಗೇಶ್   ಜಿಲ್ಲಾ ಎಸ್ ಸಿ  ಮೋರ್ಚಾ.ಅಧ್ಯಕ್ಷರನಾರಾಯಣಸ್ವಾಮಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ದಿರಾಜ್ ಮುನಿರಾಜ್.  ಹಾಗೂ ದೊಡ್ಡಬಳ್ಳಾಪುರ ಶಾಸಕ ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ.ಸುಜಾತಾ ರವೀಂದ್ರ ರಾಜ್ಯ ಪರಿಷತ್ತು ಸದಸ್ಯರು. ನೆಲಮಂಗಲ ಮಂಡಲ ಮಹಿಳಾ ಅಧ್ಯಕ್ಷರು ಮಂಜುಳಾ ಎಸುರೇಶ್.ಹೊಸಕೋಟೆ ನಗರಧ್ಯಕ್ಷರು.
ಯಶೋದಾ. ಉಪಾಧ್ಯಕ್ಷರು ರವಿಕಲಾ  .ಶೀಲಾ ಮಹಿಳಾ ಕಾರ್ಯದರ್ಶಿ. ನೆಲಮಂಗಲ ಮಂಡಲ.
 ಎಸ್ ಸಿ ಮೋರ್ಚಾ ಕಾರ್ಯದರ್ಶಿ.ಶೈಲಜಾ  ಮಂಡಲ 
ವೇದಾವತಿ ಮಂಜುನಾಥ್ ಜಿಲ್ಲಾ ಮತ್ತು ತಾಲೂಕು ಮುಖಂಡರು ಘಟಕದ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News