ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


"" ಬೆಂಗಳೂರು ಮಹಾ ಶಾಲೆಗೆ ಸಮಸ್ತೆಯ ನಿರ್ವಾಹಕ (ಉಳಿಕೆ ಮೂಲ) ವೃಂದದ ಹುದ್ದೆಗೆ ನೇಮಕಾತಿ ಆದೇಶ ವಿತರಣೆ   ""ಸಂಸ್ಥೆಯ ನೌಕರರ ಮಾಸಿಕ ವೇತನ ಚೀಟಿ ಮತ್ತು ಫಾರಂ-16 ಅನ್ನು ತಮ್ಮ ಮೊಬೈಲ್ ನಲ್ಲಿಯೇ ಪಡೆಯುವ ಸೌಲಭ್ಯಗಳನ್ನು ಜಾರಿಗೆ ತರಲಾಗುತ್ತಿರುವ  ಕುರಿತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ 2ನೇ ಹಂತದಲ್ಲಿ (ಉಳಿಕೆ ಮೂಲ ವೃಂದದ) ಮೀಸಲಾತಿಯಡಿ 2285 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿದ್ದು, ದಿನಾಂಕ:12.05.2025 ರಂದು ಸುಮಾರು 100 ಅಭ್ಯರ್ಥಿಗಳಿಗೆ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ  ಶ್ರೀ ರಾಮಲಿಂಗಾರೆಡ್ಡಿ ರವರು ನೇಮಕಾತಿ ಆದೇಶ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು. 
ಕ್ರ.ಸಂ ವಿವರ ಸಂಖ್ಯೆ
1 ಜಾಹೀರಾತು ಪಡಿಸಿರುವ ಹುದ್ದೆಗಳ ಸಂಖ್ಯೆ 2286
2 ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ 23021
3 ಶೇ. 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಹಾಗೂ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ ಕರೆಸಲಾದ ಅಭ್ಯರ್ಥಿಗಳ ಸಂಖ್ಯೆ 4722
4 ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಯಲ್ಲಿ ಅರ್ಹತೆಗೊಂಡ ಅಭ್ಯರ್ಥಿಗಳು 4267
5 ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ 2285

ವೇತನ ಚೀಟಿ ಮತ್ತು ಫಾರಂ-16 ಅನ್ನು ಗಳನ್ನು emslog.in ತಂತ್ರಾಂಶದಲ್ಲಿ ಪ್ರಕಟಿಸುವುದರಿಂದ ಸಂಸ್ಥೆಗೆ/ನೌಕರರಿಗೆ ಆಗುವ ಅನುಕೂಲಗಳು:-
• ಮಾಸಿಕ ವೇತನ ಚೀಟಿ ಮತ್ತು ಫಾರಂ-16 ಗಳು ವಾರ್ಷಿಕ ಹಾಗೂ ಆದಾಯ ತೆರಿಗೆ ಕಡಿತದ ಆದಾಯದ ಪುರಾವೆಯಾಗಿರುವುದರಿಂದ ಪ್ರತಿಯೊಬ್ಬ ನೌಕರರ ವೈಯಕ್ತಿಕವಾಗಿ ತಂತ್ರಾಂಶದ ಮೂಲಕ ನೇರವಾಗಿ ತಮ್ಮ ಮೊಬೈಲ್ ನಲ್ಲಿಯೇ ವೇತನ ಚೀಟಿ ಮತ್ತು ಫಾರಂ-16 ಗಳನ್ನು ವೀಕ್ಷಣೆ ಮಾಡಬಹುದು ಹಾಗೂ ಮುದ್ರಣ ಮಾಡಿಕೊಳ್ಳಬಹುದು. ಪ್ರಸುತ್ತ ತಂತ್ರಾಂಶದ ಮೂಲಕ ಪಡೆದುಕೊಳ್ಳುವುದರಿಂದ ವೇತನ ಚೀಟಿ ಮತ್ತು ಫಾರಂ-16ಗಳ ಮುದ್ರಣದ ಸಾಮಾಗ್ರಿ, ಸಮಯ ಹಾಗೂ ಮಾನವ  ಗಂಟೆಗಳನ್ನು ಉಳಿಸಬಹುದು.
• ಈ ತಂತ್ರಾಂಶವು ಜಾರಿಗೆ ತರುವ ಮೂಲಕ ನವೆಂಬರ್-2024 ರಿಂದ ಪ್ರಸುತ್ತ ಮಾಹೆಯವರೆಗೂ ವೇತನ ಚೀಟಿಗಳನ್ನು ಹಾಗೂ ಪ್ರಸುತ್ತ ವರ್ಷದಿಂದ ಹಿಂದಿನ ಒಂದು ವರ್ಷದ ಫಾರಂ-16 ಗಳನ್ನು ಪಡೆಯಬಹುದು.
ಈ ಸಂದರ್ಭದಲ್ಲಿ  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ  ರಾಮಚಂದ್ರನ್ ಆರ್, ಭಾ.ಆ.ಸೇ., ನಿರ್ದೇಶಕರು (ಭದ್ರತಾ & ಜಾಗೃತ)ರಾದ  ಅಬ್ದುಲ್ ಅಹದ್, ಭಾ.ಪೋ.ಸೇ. ರವರು, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ)ರಾದ  ಶಿಲ್ಪಾ.ಎಂ., ಭಾ.ಆ.ಸೇ. ರವರು ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
 ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್., ಭಾ.ಆ.ಸೇ; ಶ್ರೀಮತಿ. ಶಿಲ್ಪಾ ಎಂ., ಭಾ.ಆ.ಸೇ, ನಿರ್ದೇಶಕರು (ಮಾ.ತಂ) ಮತ್ತು ಸುನೀತ ಜೆ ಹಾಗೂ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು




Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News