ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಕಾಂಗ್ರೆಸ್ ಪಕ್ಷದಿಂದ ಫ್ರೀಡಂ ಪಾರ್ಕ್ ನಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಪೀಣ್ಯ ದಾಸರಹಳ್ಳಿ ಮುಖಂಡರಾದ ಕೆ ಸಿ ವೆಂಕಟೇಶ್ ಬಾಗಿ"$ ದಾಸರಹಳ್ಳಿ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಮತ್ತು ಉಪ ಮುಖ್ಯಮಂತ್ರಿಗಳಾದ DK ಶಿವಕುಮಾರ್ ರವರ ಆದೇಶದ ಮೇರೆಗೆ ಹಾಗೂ ನಮ್ಮ ನಾಯಕರೂ ಕೆ ಸಿ ವೆಂಕಟೇಶ್ ರವರ ನೇತೃತ್ವದಲ್ಲಿ (BJP) ಯ ಅವೈಜ್ಞಾನಿಕ ಬೆಲೆಏರಿಕೆ, ಅವೈಜ್ಞಾನಿಕ ವಕ್ಫ್ ಕಾಯಿದೆ ಜಾರಿ, GST ಪಾಲುದಾರಿಕೆಯಲ್ಲಿ ಧೋರಣೆ ಮತ್ತು ದುರಾಡಳಿತದ ವಿರುದ್ಧ ಇಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಬಿವಿಎಂಪಿ ಸಮಿತಿ ಸದಸ್ಯರಾದ ಕೆ.ಸಿ ವೆಂಕಟೇಶ್*(ದೇವೇಗೌಡ್ರು )ರವರು ಪಕ್ಷದ ವಾರ್ಡ್ಅಧ್ಯಕ್ಷರುಗಳು, ಹಿರಿಯ ಹಾಗೂ ಕಿರಿಯ ಮುಖಂಡರುಗಳು, ಪದಾಧಿಕಾರಿಗಳು, ಮಹಿಳಾ ಮುಖಂಡರುಗಳು, ಯುವ ಕಾಂಗ್ರೆಸ್ ಮುಖಂಡರುಗಳು ಹಾಗೂ ಪದಾಧಿಕಾರಿಗಳ ಜೊತೆಗೂಡಿ ಭಾಗವಹಿಸಿದ್ದರು.