ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

''ಬಸವಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ  ಶಿವಕುಮಾರ್ ಸ್ವಾಮೀಜಿಯವರ 118ನೇ ಜನ್ಮ ದಿನಾಚರಣೆಯನ್ನು ಆಯೋಜಿನೆ ಮಾಡಲಾಗಿತ್ತು."" 

ಪೀಣ್ಯ ದಾಸರಹಳ್ಳಿ: ಕರ್ನಾಟಕ ರತ್ನ ಪದ್ಮಭೂಷಣ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ್ ಮಹಾಸ್ವಾಮಿಗಳ 118ನೇ ಜನ್ಮ ಜಯಂತಿ ಗುರುವಂದನಾ ಕಾರ್ಯಕ್ರಮಕ್ಕೆ ದಾಸರಹಳ್ಳಿ ಶಾಸಕರಾದ  ಎಸ್.ಮುನಿರಾಜು ರವರು ಹಾಗೂ ಸೌಂದರ್ಯ ಸಂಸ್ಥೆಯ ಮಾಲೀಕರಾದ ಸೌಂದರ್ಯ ಮಂಜಪ್ಪ ಬೆಂಗಳೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ ಬೆಂಗಳೂರು  ಬಿಜೆಪಿ ಉತ್ತರ ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ ಎಚ್ ರಾಜು ಅಶ್ವತಪ್ಪ ಕೃಷ್ಣಮೂರ್ತಿ ಆನಂದ್ ರೆಡ್ಡಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ತದನಂತರ ಪೂಜ್ಯರು ನಾಡಿಗೆ ನೀಡಿದ ಶಿಕ್ಷಣ ಜ್ಞಾನ ದಾಸೋಹ ಎಲ್ಲ ಸಮುದಾಯದ ಬಡ ಮಕ್ಕಳಿಗೆ  ಶಿಕ್ಷಣ ಮತ್ತು ಜ್ಞಾನ  ಕೊಟ್ಟಿರುವಂಥದ್ದಲ್ಲದೆ ವಿದ್ಯಾರ್ಥಿಗಳಿಗೆ ಶಿಸ್ತು ಪಾಲನೆ ‌ ಚಿಂತನೆ ಮತ್ತು ವೈಚಾರಿಕ ಸಿದ್ಧಾಂತಗಳನ ಅಳವಡಿಸಿಕೊಳ್ಳಲು ಮಠದಲ್ಲಿ  ನನಗೆ ಬೇಕಾಗಿರುವ ಅನುಕೂಲಗಳನ್ನು ಮಾಡಿಕೊಟ್ಟಿದೆ ಮಠಕ್ಕೆ ಬರುವಂತಹ ಪೋಷಕರಿಗೂ ಹಾಗೂ ಭಕ್ತಾದಿಗಳಿಗೆ  ದಾಸೋಹವನ್ನು ನೀಡುತ್ತಾ ಬರುತ್ತೆದೆ  ಎಂದು ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ್ ಸ್ವಾಮೀಜಿಯವರ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News