ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


ದೇಶದಲ್ಲೇ ಪ್ರಪ್ರಥಮ ಬಾರಿಗೆ

ಹುಬ್ಬಳ್ಳಿ ಕ್ಲಸ್ಟರ್ನಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆಯ (ಎಇಕ್ಯೂಯುಎಸ್) 
ನೂತನ ಫಾಸ್ಟ್ ಮೂವಿಂಗ್ ಕನ್ಯೂ÷್ಸಮರ್ ಗೂಡ್ಸ್ (ಎಫ್ಎಂಸಿಜಿ)

ಭಾರತದ ಪ್ರಮುಖ ಕೈಗಾರಿಕಾ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ರಾಜ್ಯದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಗ್ರಾಹಕ ಕ್ಲಸ್ಟರ್ನಲ್ಲಿ ತನ್ನ ಎಫ್ಎಂಸಿಜಿ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಮ್ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಉತ್ಪಾದನಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಬೆಂಗಳೂರಿನಲ್ಲಿ ನಡೆದ ಈ ಉತ್ಪಾದನಾ ವ್ಯವಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಾನ್ಯ ಬೃಹತ್ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿರಾದ ಮಾನ್ಯ ಶ್ರೀ ಎಂ. ಬಿ. ಪಾಟೀಲ್, ಸಂಭಾವ್ಯ ಹೂಡಿಕೆದಾರರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರ ಗಣ್ಯರ ಪಾಲ್ಗೊಂಡಿದ್ದರು.

ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಪೂರೈಸುವ ಉತ್ಪಾದನಾ ತಾಣವಾಗಿ ಉತ್ತರ ಕರ್ನಾಟಕ ಭಾಗವನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಹುಬ್ಬಳ್ಳಿಯಲ್ಲಿನ ಗ್ರಾಹಕ ಸರಕುಗಳ ಕ್ಲಸ್ಟರ್ನಲ್ಲಿ ಈ ಉತ್ಪಾದನಾ ಪರಿಸರ ವ್ಯವಸ್ಥೆಯ ವಿಶಿಷ್ಟ ಉಪಕ್ರಮವನ್ನು ಕೈಗೆತ್ತಿಕೊಂಡು, ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

ಈ ನೂತನ ಉತ್ಪಾದನಾ ವ್ಯವಸ್ಥೆಯು ಎಫ್ಎಂಸಿಜಿ ಉತ್ಪಾದನಾ ಪ್ರಮಾಣ ಮತ್ತು ಉತ್ಪಾದನಾ ಘಟಕಗಳ ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಮೂಲಕ ಉತ್ಪಾದನಾ ಘಟಕಗಳು ರಫ್ತು ಮಾರುಕಟ್ಟೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗುರಿಯಾಗಿಸಿಕೊಂಡು ರಫ್ತು ಹೆಚ್ಚಳಕ್ಕೆ ಪೂರಕವಾಗಲಿದೆ. ಈ ಮೂಲಕ ಈ ಭಾಗದ ಅಭಿವೃದ್ಧಿಗೆ ಹೊಸ ಭವಿಷ್ಯ ಬರೆಯಲಿದೆ. ಈ ಭಾಗದ ಸುಮಾರು 400 ಕಿಲೋಮೀಟರ್ ಸುತ್ತಳತೆಯಲ್ಲಿನ ಉತ್ಪಾದನಾ ಘಟಕಗಳು ದೇಶದ ಎಫ್ಎಂಸಿಜಿ ಸರಕುಗಳ ಪೈಕಿ 35% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿವೆ. ಈ ಹಿನ್ನಲೆಯಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಈ ನೂತನ ವ್ಯವಸ್ಥೆ ಈ ಭಾಗದಲ್ಲಿ ಈ ಕೈಗಾರಿಕೆಗಳ ಬಲವರ್ಧನೆ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸಲಿದೆ ಎಂಬ ಆಶಾಭಾವನೆ ಹೊಂದಿದೆ.

ವಿಷನ್ ಗ್ರೂಪ್ ಫಾರ್ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಕ್ಲಸ್ಟರ್ ಧಾರವಾಡ ಅಧ್ಯಕ್ಷರಾಗಿರುವ ಫಿಕಿ ಕರ್ನಾಟಕ ಮಂಡಳಿಯ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಅವರು ಈ ಬೆಳವಣಿಗೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

“ಹುಬ್ಬಳ್ಳಿ-ಧಾರವಾಡ ಪ್ರದೇಶವು ಅತ್ಯಂತ ಆಕಷÀðಕ ಹೂಡಿಕೆಯ ತಾಣವಾಗಿದೆ. ಈ ಭಾಗದಲ್ಲಿ ನುರಿತ, ಕೌಶಲ್ಯಯುತ ಮಾನವ ಸಂಪನ್ಮೂಲ, ಕೌಶಲ್ಯ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು, ದೇಶ ಹಾಗು ರಾಜ್ಯದ ಇತರ ಪ್ರದೇಶಗಳಿಗೆ ಅತ್ಯುತ್ತಮ ರಸ್ತೆ, ರೈಲ್ವೆ, ಹಾಗು ವಿಮಾನಯಾನ ಸಂಪರ್ಕಹೊಂದಿವೆ. ಮುಂಬರುವ ವರ್ಷಗಳಲ್ಲಿ ದೇಶದ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವು ಈ ಭಾಗಕ್ಕಿದೆ. ಆ ಮೂಲಕ “ಮೇಕ್ ಇನ್ ಕರ್ನಾಟಕ, ಮೇಕ್ ಫಾರ್ ಇಂಡಿಯಾ ಅಂಡ್ ದಿ ವರ್ಲ್ಡ್” ಕನಸನ್ನು ಈ ಭಾಗವು ನನಸಾಗಿಸಲಿದೆ. ನಾನು ಹೃತ್ಪೂರ್ವಕವಾಗಿ ಈ ಎಫ್ಎಂಸಿಜಿ ಕ್ಲಸ್ಟರ್ಗೆ ಶುಭ ಹಾರೈಸುತ್ತೇನೆ. ಜೊತೆಗೆ ಇಲ್ಲಿಗೆ ದೇಶ-ವಿದೇಶಗಳ ಅತ್ಯುತ್ತಮ ಮತ್ತು ಎಲ್ಲಾ ಎಫ್ಎಂಸಿಜಿ ಕಂಪನಿಗಳನ್ನು ಸ್ವಾಗತಿಸುತ್ತೇನೆ. ಆ ಮೂಲಕ ಹುಬ್ಬಳ್ಳಿ-ಧಾರವಾಡ ಪ್ರದೇಶದ ಅತ್ಯುತ್ತಮ ವ್ಯವಸ್ಥೆಗಳ ಲಾಭಪಡೆಯಲು ಸಾಧ್ಯವಿದೆ,” ಎಂದು ಅವರು ತಿಳಿಸಿದರು.

ಈ ಹೊಸ ಉಪಕ್ರಮವು, ಕೈಗಾರಿಕಾ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಈ ಭಾಗದ ಸಾಮಾಜಿಕ ಪ್ರಗತಿಗೆ ಮತ್ತು ನಮ್ಮ ಯುವಕರಿಗೆ ಸಾವಿರಾರು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಇದು ಬಹುದೊಡ್ಡ ಕೊಡುಗೆಯಾಗಲಿದೆ, ಎಂದು ಅವರು ವಿಶ್ಲೇಷಿಸಿದರು.

ಇಕಾಸ್ ಇನ್ಫ್ರಾ ಸಂಸ್ಥೆಯ (ಎಇಕ್ಯೂಯುಎಸ್ ಇನ್ಫ್ರಾ) ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಅಣ್ಣಪ್ಪ ಅವರು ಈ ಯೋಜನೆಯ ಬಗ್ಗೆಗಿನ ತಮ್ಮ ದೃಷ್ಟಿಕೋನವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. “ಈ ಹೊಸ ಎಫ್ ಎಂ ಸಿ ಜಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಈ ಭಾಗವನ್ನು ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ನಮ್ಮ ವಿಶಾಲ ಗುರಿಯೊಂದಿಗೆ ಅಭಿವೃದ್ಧಿಪಡಿಸಿದ್ದೇವೆ. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದೇಶದಲ್ಲಿ ಜಾಗತಿಕ ಉತ್ಕೃಷ್ಟತೆಯ ಮಾನದಂಡಗಳೊಂದಿಗೆ, ಉದ್ಯಮಗಳು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸಲು ಇವು ಅನುವು ಮಾಡಿಕೊಡುತ್ತವೆ.

ಈ ಯೋಜನೆಯ ಪ್ರಾರಂಭದೊಂದಿಗೆ, ನಾವು ಈ ಭಾಗದ ಸಮಗ್ರ ಅಭಿವೃದ್ಧಿಗೆ ಹಾಗು ಕೈಗಾರಿಕಾ ಅಭಿವೃದ್ಧಿಗೆ ದೀರ್ಘಾವಧಿಯ ಅಡಿಪಾಯವನ್ನು ಸ್ಥಾಪಿಸುತ್ತಿದ್ದೇವೆ. ಈ ಭಾಗದ ಸಮಗ್ರ ಬೆಳವಣಿಗೆ, ಉದ್ಯೋಗ ಸೃಷ್ಟಿಯಂತಹ ಸರ್ಕಾರದ ಧ್ಯೇಯಗಳಿಗೆ ಪೂರಕವಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ,” ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದ ಬೆಳಗಾವಿ, ಕೊಪ್ಪಳ ಮತ್ತು ಹುಬ್ಬಳ್ಳಿ ನಗರಗಳಲ್ಲಿ ತನ್ನ ಕೈಗಾರಿಕಾ ವಸಾಹತುಗಳಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಸುಧಾರಿತ ಪ್ಲಗ್ ಮತ್ತು ಪ್ಲೇ ಮತ್ತು ಬಿಲ್ಟ್-ಟು-ಸೂಟ್ ಮೂಲಸೌಕರ್ಯವನ್ನು ಒದಗಿಸುವಲ್ಲಿ ವಿಶ್ವದರ್ಜೆಯ ಪರಿಣತಿ ಹೊಂದಿದೆ.

ಹುಬ್ಬಳ್ಳಿ ಗ್ರಾಹಕ ಕ್ಲಸ್ಟರ್ನಲ್ಲಿರುವ ಎಫ್ಎಂಸಿಜಿ ಪರಿಸರ ವ್ಯವಸ್ಥೆಯು ಈ ಭಾಗದಲ್ಲಿ ದೇಶದಲ್ಲೇ ಮೊತ್ತ ಮೊದಲ ಹಾಗು ಏಕೈಕ ವ್ಯವಸ್ಥೆಯಾಗಿದೆ. ಎಫ್ಎಂಸಿಜಿ ಉತ್ಪಾದನೆಯಲ್ಲಿ ದೇಶವನ್ನು ಜಾಗತಿಕ ಭೂಪಟದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಗುರಿಯನ್ನು ಅಭಿವೃದ್ಧಿ ಪಡಿಡಿದೆ.


Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News