ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

* ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ*
ಯಲಹಂಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು . ಹಮ್ಮಿಕೊಳ್ಳಲಾಗಿತ್ತು ಪ್ರಾಂಶುಪಾಲರಾದ  ಡಾ. ಪ್ರೊ. ಗೀತಾ ಎನ್ ರವರು ರಾಷ್ಟ್ರ ಮತ್ತು ರಾಜ್ಯ ಧ್ವಜಾರೋಹಣ ಮಾಡಿ ಮಾತನಾಡುತ್ತಾ ಕನ್ನಡ ಭಾಷೆಯ ಉಳಿವು ಭಾಷೆಯನ್ನು ಬಳಸುವುದರ ಮೂಲಕ ಮತ್ತು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಸಾಧ್ಯ ಎಂದರು. ಆದರೆ, ಈ ಕಂಪನಿಗಳಲ್ಲಿ ಕೆಳ ದರ್ಜೆಯ ಹುದ್ದೆಗಳಿಗೆ ಮಾತ್ರ ಕನ್ನಡಿಗರಿಗೆ ಆದ್ಯತೆ ನೀಡುತ್ತಿರುವುದು ದುರ್ದೈವ. ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕ ಮಾಡಬೇಕಾಗಿದೆ ಎಂದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಜಿ ಎಂ ಮೂರ್ತೆಪ್ಪ ಮಾತನಾಡಿ, ಕನ್ನಡ ಭಾಷೆಯು ಬಹು ಭಾಷಾ ಸಂದರ್ಭದಲ್ಲಿ ಭಾಷಾ ಸಂಘರ್ಷವನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯ ಮತ್ತು ವಿದೇಶಿಯರಿಗೆ ಕನ್ನಡ ಭಾಷೆಯನ್ನು ಬಳಸುವುದನ್ನು ಕಲಿಸಬೇಕು ಹಾಗೂ ಭಾಷಾಂತರ ಅಧ್ಯಯನ ಮೂಲಕ ಕನ್ನಡ ಭಾಷೆಯನ್ನು ಬೆಳಸಬಹುದು. ಸರ್ಕಾರ ಹಂತದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಬದಲಾವಣೆಯ ಅವಶ್ಯಕತೆ ಇದೆ ಎಂದರು. ಅಧ್ಯಾಪಕ-ಕಾರ್ಯದರ್ಶಿ  ಪ್ರಕಾಶ ಮಾತನಾಡಿ ಕನ್ನಡ ಭಾಷೆಯು ರಾಜರ ಆಳ್ವಿಕೆಯ ಕಾಲದಲ್ಲಿ ಬಹಳ ಪ್ರಬುದ್ಧತೆಯನ್ನು ಹೊಂದಿತ್ತು. ಈಗ ಅದನ್ನು ಉಳಿಸಿಕೊಳ್ಳುವ ಸವಾಲು ನಮ್ಮದಾಗಿದೆ ಎಂದರು. ರೇಂಜರ್ಸ್ ಸಂಚಾಲಕರಾದ  ಅನಿತಾ ಪಾಟೀಲ್ ರವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಮೆಲುಕು ಹಾಕಿದರು. ರೋವರ್ಸ್ ಸಂಚಾಲಕರಾದ ಡಾ. ಸಿ ನಾಗರಾಜರವರು ರಾಜ್ಯೋತ್ಸವ ಆಚರಣೆ ಬರೀ ನವೆಂಬರ್ ತಿಂಗಳ ಆಚರಣೆ ಆಗಬಾರದು. ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಕನ್ನಡ ಭಾಷೆಯನ್ನು ಆಡಳಿತ ಮತ್ತು ವ್ಯವಹಾರದಲ್ಲಿ ಹೆಚ್ಚಾಗಿ ಬಳಸಬೇಕೆಂದರು. ಕನ್ನಡ ಸಂಘದ ಅಧ್ಯಕ್ಷರಾದ ಡಾ. ರಿಯಾಜ್ ಪಾಷ ಮಾತನಾಡಿ ಕನ್ನಡ ಭಾಷೆಯನ್ನು ಅನ್ಯ ಭಾಷೆಗಳೊಂದಿಗೆ, ಬಳಸುವುದರೊಂದಿಗೆ ಮತ್ತು ಭಾಷಾಂತರದೊಂದಿಗೆ ಬೆಳೆಸಬೇಕಾಗುತ್ತದೆ ಎಂದು ನಿರೂಪಿಸಿದರು.   
ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ ರೆಡ್ಡಿ  ಟಿ. ರವರು   ದೈಹಿಕ ನಿರ್ದೇಶಕರಾದ ಡಾ. ಅಂಜನ್ ಕುಮಾರ್ ಬಿ. ಜೆ. ಮತ್ತು  ಉಷಾ ನಂದಿನಿರವರು .ಡಾ. ಕೃಷ್ಣಮೂರ್ತಿ ಎನ್ ಪಿ . ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News