ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಕರ್ನಾಟಕ ಗಾಂಧಿ ಸ್ಮಾರಕ ನಿಧಿ ರಾಜ್ಯ ಎನ. ಎಸ್. ಎಸ್. ಘಟಕ ಹಾಗೂ ಯುವ ಸಬಲೀಕರಣ ಇಲಾಖೆ ಇವುಗಳ ಸಹಯೋಗದಿಂದ ಎಸ್. ಜೆ .ಆರ್. ಮಹಿಳಾ ಪದವಿ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾಯೋಜನೆಯ ಮತ್ತು ಗಾಂದೀ ತತ್ವ ಪ್ರಣೀತ ಯುವ ನಾಯಕತ್ವ ಶಿಭಿರ.""
ಬೆಂಗಳೂರು::ಕರ್ನಾಟಕ ಗಾಂಧಿ ಸ್ಮಾರಕ ನಿಧಿ ರಾಜ್ಯ ಎನ ಎಸ್ ಎಸ್ ಘಟಕ ಹಾಗೂ ಯುವ ಸಬಲೀಕರಣ ಇಲಾಖೆ ಇವುಗಳ ಸಹಯೋಗದಿಂದ ಎಸ್. ಜೆ. ಆರ್. ಮಹಿಳಾ ಪದವಿ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾಯೋಜನೆಯ ವಿಷೇಶ ಶಿಬಿರ ಮತ್ತು ಗಾಂದೀ ತತ್ವ ಪ್ರಣೀತ ಯುವ ನಾಯಕತ್ವ ಶಿಭಿರದಲ್ಲಿ ರಾಜ್ಯದ ಬೇರೆ ಬೇರೆ ವಿಶ್ವ ವಿದ್ಯಾಲಯಗಳಿಂದ ಆಯ್ಕೆಯಾದ 21 ಕಾಲೇಜುಗಳ 150 ವಿದ್ಯಾರ್ಥಿನಿಯರು ಹಳೇನಿಜಗಲ್ಲು ಗ್ರಾಮದ ತಪೋವನದ ಬಳಿ ಆಯೋಜಿಸಿದ್ದ ಶಿಭಿರದಲ್ಲಿ ಭಾಗವಹಿಸಿ ಗಾಂದೀಜಿ ಹಾಗೂ ವಿವೇಕಾನಂದರ ಚಿಂತನೆಗಳನ್ನು ಒಳಗೊಂಡ ವಿಚಾರಗಳನ್ನು ಅರಿಯುವುದರ ಜೊತೆಗೆ ಸ್ವಯಂಸೇವಕಿಯರು ಶ್ರಮದಾನ ಯೋಗ ಧ್ಯಾನ,ವ್ಯಾಯಾಮ ಶಿಸ್ತುಬದ್ದ ದಿನಚರಿಗಳನ್ನು ಪಾಲಿಸುವ ಮೂಲಕ ಯಶಸ್ವೀ ಶಿಭಿರಕ್ಕೆ ಕಾರಣರಾದರು,ಸಮಾರೋಪ ಸಮಾರಂಭದಲ್ಲಿ ಗಾಂಧೀಸ್ಮಾರಕ ನಿಧಿಯ ಅದ್ಯಕ್ಷರಾದ ನಾಡೋಜ ಊಡೆ ಪಿ ಕೃಷ್ಣ,ಮುಖ್ಯ ಅತಿಥಿಗಳಾಗಿ ಮಾತನಾಡಿ ಇಲ್ಲಿ ಭಾಗವಹಿಸಿದ ನೀವೆಲ್ಲಾ ನಿಜವಾದ ನಾಯಕಿರು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು,ತುಮಕೂರು ಹಿರೇಮಠ ತಪೋವನದ ಪೀಠಾದ್ಯಕ್ಷರಾದ ಡಾ,ಶಿವಾನಂದ ಶಿವಾಚಾರ್ಯಶ್ರೀಗಳು ವಿದ್ಯಾರ್ಥಿ ನಿಯರಶ್ರಮಮತ್ತು ಶಿಸ್ತನ್ನು ಮೆಚ್ಚಿ ಆಶೀರ್ವಚನಗಳ ಮೂಲಕ ಯುವಜನತೆಯ ಜವಾಬ್ದಾರಿಗಳನ್ನು ಎಚ್ಚರಿಸಿದರು,ಗಾಂಧೀ ಶಾಂತಿ ಪ್ರತಿಷ್ಟಾನದ ಸದಸ್ಯರಾದ ಶ್ರೀ ಯುತ ವೀರಭದ್ರಯ್ಯ ಉಪಸ್ಥಿತರಿದ್ದರು,ಕಾಲೇಜಿನ ಪ್ರಾಂಶುಪಾಲರಾದ ಡಾ,ಪ್ರೇಮ ಸಿದ್ದರಾಜು ಶಿಭಿರದ ಸಮಾರೋಪನ ನುಡಿಗಳನ್ನು ಹೇಳಿ ಇರುವ ಕಡಿಮೆ ಸೌಲಭ್ಯಗಳಲ್ಲಿಯೇ ಒಂದುವಾರ ಉತ್ತಮ ಸೇವೆ ,ಶಿಸ್ತು ಬದ್ದ ನಿಯಮ ಪಾಲುಸಿದ ಮಕ್ಕಳು ನಿಜವಾದ ನಾಯಕಿರು ಭವಿಷ್ಯದಲ್ಲಿ ಎಂತಹ ಸಮಸ್ಯೆ ಬಂದರೂ ನಿಭಾಯಿಸುವ ಗಟ್ಡಿತನ ಪಡೆದಿರುವುದಾಗಿ ಹೇಳಿದರು ಹಾಗೂ ಡಾ,ಮಂಜುಳ ಡಾ,ರೂಪ ಇವರುಗಳು ಉಪಸ್ಥಿತರಿದ್ದರು, ಸಮಾರೋಪದ ನಂತರ ವಿದ್ಯಾರ್ಥಿ ನಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಅಲ್ಲದೆ ಅತ್ಯುತ್ತಮ ಸೇವೆಸಲ್ಲಿಸಿದ ಸ್ವಯಂಸೇವಕಿಯರಿಗೆ ಪ್ರಶಸ್ತಿಫಲಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.