ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಅಶೋಕ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ 29ನೇ ವರ್ಷದ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ 2024 ಆಯೋಜನೆ ಮಾಡಲಾಗಿತ್ತು""
ಪೀಣ್ಯ ದಾಸರಹಳ್ಳಿ :ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಮ್ಮಗೊಂಡನಹಳ್ಳಿ ಕೆ ಬಿ ಸಿ ಟ್ರಸ್ಟ್( ರಿ) 1972ರ ಸ್ಥಾಪಿತಗೊಂಡ ತನ್ನ ಸಂಸ್ಥಾಪಕರಾದ ದಿII ಕೆ. ಬಿ. ಚಿಕ್ಕಮುನಿಯಪ್ಪ ಸ್ವರ್ಣಾರ್ಥವಾಗಿ ಕಳೆದ 28 ವರ್ಷಗಳಿಂದ ವೈದ್ಯಕೀಯ ಶಿಬಿರಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಾ ಬಂದಿದ್ದು ಆರೋಗ್ಯ ಮತ್ತು ಶೈಕ್ಷಣಿಕ ಉಪಕ್ರಮಗಳ ಮೂಲಕ ಲಕ್ಷಾಂತರ ಜನರ ಜೀವ ನಾಡಿಗೆ ಮಹತ್ವದ ಪ್ರಭಾವ ಬೀರುವಂತಿದೆ ಹಾಗೂ ಸಮುದಾಯಗಳಿಗೂ ಉಚಿತ ಸೇವಗಳನ್ನು ನೀಡುತ್ತಾ ಇದರ ಫಲಾನುಭವಿಗಳ ಸಂಖ್ಯೆ ಸುಮಾರು 37300ಕ್ಕಿಂತಲೂ ಹೆಚ್ಚು ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಿಸಿ ಕೊಂಡ ಫಲಾನುಭವಿಗಳಾಗಿರುತ್ತಾರೆ. ಕಣ್ಣಿನ ಚಿಕಿತ್ಸೆಗೆ 2800, ಒಳಪಟ್ಟಿರುವತಹ ಮತ್ತು ಹೃದಯ ಚಿಕಿತ್ಸೆ 15, ಉಚಿತವಾಗಿ ಕನ್ನಡಕ 4950, ಶ್ರವಣ ಯಂತ್ರಗಳು 73, ಮತ್ತು ಅಂಗ ವಿಕಲ ಸಹಾಯೋಪಕರಣಗಳು 37, ಹಾಗೆ ರಕ್ತದ ಯೂನಿಟ್ ಗಳು ಸುಮಾರು 3500 ದಾನ ಮಾಡಲಾಗಿದೆ ಹಾಗೂ ಟ್ರಸ್ಟ್ ವತಿಯಿಂದ ದೇವಾಲಯ ನಿರ್ವಹಣೆ ಮತ್ತು ಕಾರ್ಗಿಲ್ ಯುದ್ಧ ಸುನಾಮಿ ಬರ ಪರಿಹಾರ ಮತ್ತು ಕೋವಿಡ್ 19 ಸಂದರ್ಭಗಳಲ್ಲಿ ಸಹಾಯ ಒದಗಿಸಿದೆ ಹಾಗೆ ತುರ್ತು ಸಂದರ್ಭಗಳಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಿದ್ದು ಸಮುದಾಯದ ಕಾರ್ಯಕ್ರಮಗಳ ಮೂಲಕ ಏಕತೆಯನ್ನು ಕಾಪಾಡುವುದು ಮತ್ತು ಉತ್ತೇಜಿನವನ್ನು ಮಾಡಿರುತ್ತದೆ ಹಾಗೆ ಪ್ರತಿ ವರ್ಷವೂ ಉಚಿತ ಆರೋಗ್ಯ ತಪಾಸಣೆ ತಪಾಸಣೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತೆ ಎಂದು ಕಾಂಗ್ರೆಸ್ಸಿನ ನಗರ ಸಭೆಯ ಮಾಜಿ ಅಧ್ಯಕ್ಷರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಕೆ ಸಿ ಅಶೋಕ್ ರವರು ತಿಳಿಸಿದರು. ತದನಂತರ ಇವರ ಕುಟುಂಬ ಸಮೇತ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರು
ಇದೇ ಸಂದರ್ಭದಲ್ಲಿ ದೇವಿಕಾ ಅಶೋಕ್ ಮತ್ತು ಡಾ. ದೀಪಶ್ರೀ ಅಭಿಷೇಕ್ ಹಾಗೆ ಕಾಲೇಜಿನ ಸಿಬ್ಬಂದಿ ವರ್ಗದವರು ರಾಮಯ್ಯ ವೈದ್ಯಕೀಯೈ ಕಾಲೇಜಿನ ವೈದ್ಯರು ಅಲ್ಲಿನ ಸಿಬ್ಬಂದಿ ವರ್ಗದವರು ಸಹಕಾರದೊಂದಿಗೆ ವಿಜೃಂಭಣೆಯಿಂದ ಈ ಕಾರ್ಯಕ್ರಮವು ಜರುಗಿತು ಈ ಕಾರ್ಯಕ್ರಮದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ನಾಗಭೂಷಣ್ ಹಾಗೂ ಕಾಂಗ್ರೆಸ್ ಮುಖಂಡರಾದ ದೇವೇಗೌಡ ಕಾಂಗ್ರೆಸ್ಸಿನ ಮಹಿಳಾ ಮುಖಂಡರುಗಳು ಹಾಗೂ ಈ ಭಾಗದ ಕಾರ್ಯಕರ್ತರು ಪಾಲ್ಗೊಂಡಿದ್ದರು