ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸರ್ಕಾರಿ  ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ  - 2024-25ನೇ ಶೈಕ್ಷಣಿಕ ಸಾಲಿನ ಸೃಜನ ಸಂಸ್ಕೃತಿ- ಸಾಂಸ್ಕೃತಿಕ ವೇದಿಕೆ ಇತರ ಚಟುವಟಿಕೆಗಳ  ಉದ್ಘಾಟನೆ""

ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ  2024-2025 ನೇ ಶೈಕ್ಷಣಿಕ ಸಾಲಿನ ಸೃಜನ ಸಂಸ್ಕೃತಿ - ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್, ಎನ್‌ಸಿಸಿ, ರೇಂಜರ್ಸ್ ಅಂಡ್ ರೋವರ್ಸ್, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್, ಇಕೋ ಕ್ಲಬ್, ಅಡ್ವೆಂಚರ್ ಕ್ಲಬ್, ಲಲನಾ ಮಹಿಳಾ ವೇದಿಕೆ ಹಾಗೂ  ಆರ್ ಸಿ ಕೌಶಲ್ಯ ತರಬೇತಿ  ಕೇಂದ್ರವನ್ನು ಹಾಗೂ ಇತರ ಚಟುವಟಿಕೆಗಳ  ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಕಾರ್ಯಕ್ರಮದಲ್ಲಿ  ಚಲನಚಿತ್ರ ನಟ ನಾಯಕ ನೀನಾಸಂ ಸತೀಶ್ ಹಾಗೂ ಚಲನ ಚಿತ್ರ ನಟಿ ಕುಮಾರಿ ಪ್ರಾಚೀ ಗೌಡ ಹಾಗೂ ಉದ್ಯಮಿ ತ್ರಿವೇಣಿ ಹೈಟೆಕ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮಾಲೀಕರಾದ ಎಂ. ಎನ್. ಶಿವಕುಮಾರ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್ .ಬಿ. ರವರು ಉದ್ಘಾಟನೆ ಮಾಡಿದರು. 
ತದನಂತರ .ಕಾಲೇಜು ದಿನಗಳು ಜೀವನದ ಅತ್ಯಮೂಲ್ಯ ದಿನಗಳು ಈ ದಿನಗಳಲ್ಲಿ ವಿದ್ಯಾರ್ಥಿಗಳು ಓದಲೂ ಬೇಕು ಮತ್ತು ಆನಂದಿಸಲುl ಬೇಕು. ಓದು ಮತ್ತು ಆನಂದದ ಸಮತೋಲನ ಮಾಡುವ ಅಭ್ಯಾಸ ಮಾಡಿ ಕೊಳ್ಳಿ ಇದು ಜೀವನದ  ಅತ್ಯಾವಶ್ಯಕ"ವೆಂಬ ನುಡಿಗಳನ್ನು ನಟ ನೀನಾಸಂ ಸತೀಶ್  ಹೇಳಿದರು ಮತ್ತೊಬ್ಬ ಅತಿಥಿ ಚಲನಚಿತ್ರ ನಟಿಯಾದ ಕುಮಾರಿ ಪ್ರಾಚೀ ಗೌಡರವರು ಇಂದು ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಮಾತಿಗೆ ಬೆಲೆ ಕೊಡುವುದು ಸಹಜ ಆದರೆ ಅವರ ಜೊತೆಗೂಡಿ ಮಾದಕ ದ್ರವ್ಯಗಳಿಗೆ ವ್ಯಸನಗಳಿಗೆ ಹಾಗೆ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದೂ ಕರೆ ನೀಡಿದರು ಈ ಸಂದರ್ಭದಲ್ಲಿ ಅಂತಹ ಸ್ನೇಹಿತರೊಡನೆ ದೂರ ಇದ್ದು ನಿಮ್ಮ ಮುಂದಿನ ಜೀವನ ರೂಪಿಸಿಕೊಳ್ಳುವಂತಹ ಒಳ್ಳೆಯ ಆಲೋಚನೆಗಳು ಮಾಡಬೇಕಾಗಿದೆ. ಹಾಗೆ ನೋಡಿದರೆ ಉತ್ತರ ಕರ್ನಾಟಕದ  ಹೆಣ್ಣು ಮಕ್ಕಳ ಪೋಷಕರು ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ಕಲಿಸುವುದಿಲ್ಲ ಇಷ್ಟೆಲ್ಲಾ ಸೌಕರ್ಯಗಳು ಸರ್ಕಾರ ಕೊಟ್ಟಿದ್ದರೂ ಕೂಡ ಅವರು ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದು ಮನೆಯ ಕೆಲಸಗಳನ್ನು ನೋಡಿಕೊಳ್ಳಲು ಅನ್ನುವಂತಹ ಭಾವನೆಗಳು ಅವರಲ್ಲಿ ಇದೆ ಎಂದರು ಆದರೆ ಇಲ್ಲಿ ಯಾವುದೇ ತರಹದ ಅಡ್ಡಿಯಾತಂಕಗಳು ಬೆಂಗಳೂರುನಲ್ಲಿ ಅಂತಹ ಸಮಸ್ಯೆಗಳು ಇಲ್ಲಿ ಎದುರಾಗುವುದು ಇಲ್ಲ ನೀವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಐ.ಎ.ಎಸ್. ಮತ್ತು ಕೆ.ಎ.ಎಸ್. ಒಳ್ಳೆಯ ಸ್ಥಾನವನ್ನು ಶ್ರಮಪಟ್ಟು ಪಡೆದುಕೊಳ್ಳಿ ಎಂದು ಹೆಣ್ಣು ಮಕ್ಕಳಿಗೆ ಕಿವಿ ಮಾತನ್ನ ಹೇಳಿದರು.
 ಮತ್ತೊಬ್ಬ ಅತಿಥಿಯಾದ ಉದ್ಯಮಿ ಹಾಗೂ  ಸಂಸ್ಥೆಯ ಮಾಲೀಕರಾದ ಏನ್. ಎಂ. ಶಿವಕುಮಾರ್ ಅವರು ನಮ್ಮ ರಾಜ್ಯದ  ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವಂತಹ  ಮುಖ್ಯಮಂತ್ರಿಗಳಲ್ಲಿ ಒಬ್ಬ ರಾದ ಎಸ್ ನಿಜಲಿಂಗಪ್ಪ ರವರು ಲ್ಯಾಂಡ್ ಫೋನ್ ಇದ್ದವು ಆ ದಿನಗಳಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ಆದರೂ ಕೂಡ ಫೋನಿನ ಬಿಲ್ಲು ಕಟ್ಟಲಾಗದ ಪರಿಸ್ಥಿತಿ ಇತ್ತು ಏಕೆಂದರೆ ಅವರುಗಳು ಪ್ರಾಮಾಣಿಕ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಆದರೆ ಅದರ ಬಿಲ್ ಕೇವಲ 40 ರೂಪಾಯಿಗಳನ್ನು ಕಟ್ಟದೆ ಆಗದೆ ಸುಮ್ಮನಾಗಿದ್ದರು ಆದರೆ ಫೋನಿನ ಸಂಪರ್ಕ ಕಡಿತಗೊಳಿಸಲಾಗಿತ್ತು ಸುಮಾರು ದಿನಗಳ ನಂತರ ಫೋನ್ ರಿಂಗ್ ಆಯಿತು ನಾನು ಹಣ ಕಟ್ಟಿಲ್ಲ ಅಂತ ಇವರು ಆಶ್ಚರ್ಯ ಆಯ್ತು ಆದರೆ  
ಸ್ವಲ್ಪ ದಿನದ ನಂತರ ಶಂಕರ್ ಬಿದ್ರೆ ಹಣವನ್ನ ಕಟ್ಟಿದ್ದಾರೆ ಎಂದು ತಿಳಿದ ನಂತರ  ನನಗೆ ಬರುವಂತಹ ಪಿಂಚಣಿ ಹಣ ಬಂದ ನಂತರ ನಾನು ಕೊಡುನೆ ಎಂದು ಶಂಕರ್ ಬಿದ್ರೆರವರಿಗೆ ಹೇಳಿದರು ಇಂತಹ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿಗಳ ಇದ್ದರು ಇಂತಹ ಪ್ರಾಮಾಣಿಕ ವ್ಯಕ್ತಿಗಳ ಮಾರ್ಗದರ್ಶನಗಳು ನಮಗೆಲ್ಲರಿಗೂ ಬೇಕು ಎಂದು ನಾವುಗಳು ಕೂಡ ಪ್ರಾಮಾಣಿಕ ವ್ಯಕ್ತಿತ್ವವನ್ನು ಹೊಂದಬೇಕು ಅಂದರೆ ನಾವು ನಮ್ಮ ಕೆಲಸದಲ್ಲಿ ನಿಷ್ಠಾವಂತರಾಗಿ ಶ್ರಮ ಪಟ್ಟಿದ್ದೆ ಆದರೆ ವಿದ್ಯಾರ್ಥಿಗಳ ಒಳ್ಳೆಯ ಅಂಕಗಳ ಅಷ್ಟೇ ಅಲ್ಲ ಒಳ್ಳೆಯ ತಿಳುವಳಿಕೆ ನೀವು ಸ್ವಯಂ ಜ್ಞಾನವನ್ನ ಪಡೆದುಕೊಳ್ಳಲು ನಿಮ್ಮ ಜೀವನದ ಯಶಸ್ವಿಗೆ‌ ಕನ್ನಡಿ ಆಗುತ್ತೀರಾ ಎಂದು ತಿಳಿಸಿದರು. 
ತದನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ.  ಚಂದ್ರಶೇಖರ್. ಬಿ. ನಮ್ಮ ಕಾಲೇಜಿನಲ್ಲಿ  ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂಖ್ಯೆಜಾಸ್ತಿ ಆಗುತ್ತದೆ ಬೇರೆ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ತುಂಬಾ ಕಷ್ಟ ಮತ್ತು ಹರಸಹಸ  ಮಾಡುತ್ತಿದ್ದಾರೆ ನಮ್ಮಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ ಹಾಗೆ ನೋಡಿದರೆ ನಮ್ಮಲ್ಲಿ ಅನುಭವವುಳ್ಳ ಆಧ್ಯಾಪಕರು ಇದ್ದಾರೆ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಎಲ್ಲಾ ರೀತಿಯ ವ್ಯವಸ್ಥೆ ಕೂಡ ಇದೆ ಪಠ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳಲ್ಲಿ  ಅಡಗಿರತಕ್ಕಂತಹ  ಪ್ರತಿಭೆಯನ್ನು  ಗುರುತಿಸಲು ವಿಭಿನ್ನ ಸಮಿತಿಗಳನ್ನು ರಚಿಸಲಾಗಿದ್ದು ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಮೂರು ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ  ವಿಶ್ವವಿದ್ಯಾಲಯ ದಿಂದ  ಕಾಲೇಜಿಗೆ ಪ್ರತಿ ವರ್ಷವೂ 10 ರ‍್ಯಾಂಕುಗಳು  ನಮ್ಮ ಕಾಲೇಜಿಗೆ ಲಭಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೃಜನ ‌ಸಂಸ್ಕೃತಿ  -ಸಾಂಸ್ಕೃತಿಕ ಸಮಿತಿ ಸಂಚಾಲಕರು ಡಾ. ಅನಿತಾ. ಕೆ. ಪಿ. ಹಾಗೂ ಸೃಜನ ಆರ್ಸಿ ವಾಣಿಜ್ಯ ಮತ್ತು  ನಿರ್ವಹಣಾ ವೇದಿಕೆ  ಏನ್ ಎಸ್ ಎಸ್ ಶೋಭಾ .ಸಿ. ದೈಹಿಕ ಶಿಕ್ಷಣ ನಿರ್ದೇಶಕರು ಡಾ.  ಶ್ರೀನಿವಾಸಲು , ಸಂಚಾಲಕರು ಎನ್. ಎಸ್. ಎಸ್. ಶ್ರೀಕಾಂತ್. ಬಿ.ಕೆ ಹಾಗೂ ಎನ್. ಸಿ. ಸಿ. ಅಧಿಕಾರಿ ಡಾ. ನದಿಯಾ. ಆರ್. ರೆಡ್ ಕ್ರಾಸ್ ಮತ್ತು  ರೆಡ್ ರಿಬ್ಬನ್ ಸಂಚಾಲಕರು ಮೋಹನ್ ಕುಮಾರ್. ಇಕೋ ಕ್ಲಬ್ ಸಂಚಾಲಕರು ಡಾ. ಜಿ. ನಾಗರಾಜ್, ರೇಂಜರ್ಸ್ ರೋವರ್ಸ್ ಸಂಚಾಲಕರು  ಡಾ. ಬಸವರಾಜ್ ,ಅಡ್ವೆಂಚರ್ ಕ್ಲಬ್ ಡಾ. ಎಚ್ ಕೆ ಸತೀಶ್, ಮಹಿಳಾ ವೇದಿಕೆ ಡಾ.ಭಾಗ್ಯಲಕ್ಷ್ಮಿ ಬಾಯಿ ಕಾಲೇಜಿನ  ಆಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News