ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಎಸ್ ಜೆ ಆರ್ ಮಹಿಳಾ ಪದವಿ ಕಾಲೇಜು ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಷೇಶ ಶಿಭಿರವನ್ನು ನೆಲಮಂಗಲ ತಾಲ್ಲೂಕಿನ ಹಳೇನಿಜಗಲ್ಲು ಗ್ರಾಮದಲ್ಲಿ""
ಬೆಂಗಳೂರು : ಎಸ್ ಜೆ ಆರ್ ಮಹಿಳಾ ಪದವಿ ಕಾಲೇಜು ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಷೇಶ ಶಿಭಿರವನ್ನು ನೆಲಮಂಗಲ ತಾಲ್ಲೂಕಿನ ಹಳೇನಿಜಗಲ್ಲು ಗ್ರಾಮದಲ್ಲಿ 150 ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿದ್ದು ಇದರ ಉದ್ಘಾಟನೆಯನ್ನು ಗಾಂಧಿಭವನದ ಗೌರವ ಕಾರ್ಯದರ್ಶಿಗಳಾದ ವಿಶು ಕುಮಾರ್ ಮತ್ತು ತುಮಕೂರಿನ ರಾಮಕೃಷ್ಟಾಶ್ರಮದ ವೀರೇಶಾನಂದ ಶ್ರೀಗಳು ಉದ್ಘಾಟಿಸಿದರು
,ಕಾರ್ಯಕ್ರಮದಲ್ಲಿ ಗಾಂಧೀಭವನದ ನಿರ್ದೇಶಕರಾದ ಪ್ರೋ ಜಿ ಬಿ ಶಿವರಾಜು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮ ಸಿದ್ದರಾಜು ಇವರು ವಿದ್ಯಾರ್ಥಿನಿಯರಿಗೆ ಏಳೂ ದಿನಗಳು ಅನುಸರಿಸಬೇಕಾದ ನಿಯಮಗಳು ಕಲಿಯಬೇಕಾದ ಕಲಿಕೆಗಳು ಪಾಲಿಸಬೇಕಾದ ಶಿಸ್ತು ಶಿಭಿರದ ಉದ್ದೇಶಗಳನ್ನು ಸವಿವರವಾಗಿ ಮನವರಿಕೆ ಮಾಡಿಕೊಟ್ಟರು.ಏಳೂ ದಿನಗಳು ಶಿಭಿರದಲ್ಲಿ ನಾಡಿನ ಶ್ರೇಷ್ಠ ಚಿಂತಕರು ಸಾಹಿತಿಗಳು ವಿಮರ್ಶಕ ಗಣ್ಯರಿಂದ ದಿನಕ್ಕೆ ಎರಡರಂತೆ ಗಾಂಧೀಜಿ ಹಾಗೂ ವಿವೇಕಾನಂದರ ಚಿಂತನೆಗಳಿಂದ ಕೂಡಿದ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬೇಳಗ್ಗೆ 4-30 ರಿಂದ ರಾತ್ರಿ 8-30 ರ ವರೆಗೆ ಶಿಭಿರವು ಅತ್ಯಂತ ಶಿಸ್ತುಬದ್ದಾಗಿ ನಡೆದಿರುವುದು ವಿಷೇಶವಾಗಿದೆ,ಶಿಭಿರದ ಉದ್ದೇಶವನ್ನು ನಾಡಿನ ಇತರ ಎಲ್ಲಾ ವಿಶ್ವ ವಿದ್ಯಾಲಯಗಳಿಂದ ಆಯ್ಕೆಯಾಗಿ ಭಾಗವಹಿಸಿರುವ ನೂರೈವತ್ತು ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಸಾರ್ಥಕತೆಯ ಶಿಭಿರ ಎನಿಸಿದೆ, ಭಜನೆ,ವ್ಯಾಯಾಮ ,ಶ್ರಮದಾನ,ಅರಿವಿನ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ ಸ್ವಯಂಸೇವೆ, ಸ್ವಯಂ ಕಲಿಕೆ ಶಿಬಿರಾರ್ಥಿಗಳಿಗೆ ಹೊಸ ಬದುಕಿನ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿ ನಡೆದಿದೆ,ವಿದ್ಯಾರ್ಥಿಗಳೊಂದಿಗೆ ಏಳೂದಿನ ಡಾ.ರೂಪ ಎಸ್ ಎನ ಎಸ್ ಎಸ್ ಕಾರ್ಯಕ್ರಮಾದಿಕಾರಿ ಮತ್ತು ಡಾ.ಮಂಜುಳ ಎಸ್ ಎನ್ ಇವರು ಇದ್ದು ಶಿಸ್ತುಬದ್ದ ಶಿಭಿರಕ್ಕೆ ಕಾರಣರಾದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು