ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಶಿಕ್ಷಕರ ದಿನಾಚರಣೆಯನ್ನು ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸಸ್ ' ಸೆಪ್ಟೆಂಬರ್ 21ರಂದು ಆಯೋಜನೆ ಮಾಡಲಾಗಿತ್ತು""
ಬೆಂಗಳೂರು,: ಸೆಪ್ಟೆಂಬರ್ 21, 2024: ಶಿಕ್ಷಕರ ದಿನಾಚರಣೆ ಯನ್ನು ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸಸ್ ಶಿಕ್ಷಕರ ದಿನಾಚರಣೆಯ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಪ್ರೊ ಜಿ ಪದ್ಮನಾಭನ್ ಹಾಗೂ ಮಾಜಿ ಸಚಿವರು ಹಾಗೂ ಶಾಸಕರಾದ ಮತ್ತು ಪದ್ಮಶ್ರೀ ಸಂಸ್ಥೆಯ ಸಂಸ್ಥಾಪಕರಾದ ಡಾ ಸಿ ಎನ್ ಅಶ್ವಥ್ ನಾರಾಯಣ್ ರವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ತದನಂತರ ಸಮಾಜಕ್ಕೆ ಶಿಕ್ಷಕರು ಯುವ ಪೀಳಿಗೆಗೆ ತುಂಬಾ ಅವಶ್ಯಕತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿವಂತಹ ಗುರುಗಳು ಹಾಗೆ ಅವರು ಯಾವ ಹಂತದಲ್ಲಿ ಇರಲಿ ಅವರ ಜೀವನವನ್ನು ರೂಪಿಸುವಲ್ಲಿ ಬಹಳ ಮಹತ್ತರ ಕೊಡುಗೆ ಶಿಕ್ಷಕರದು. ಒಬ್ಬ ತಾಯಿ ಮಕ್ಕಳಿಗೆ ಸಂಸ್ಕಾರ ಕೊಡುವಲ್ಲಿ ಎಷ್ಟು ಅವಶ್ಯಕತೆನೋ ಅಷ್ಟೇ ಮುಂದಿನ ಭವಿಷ್ಯ ರೂಪಿಸಿವಲ್ಲಿ ಅಷ್ಟೇ ಶ್ರಮ ವಹಿಸಿ ಭವಿಷ್ಯವನ್ನು ಕತ್ತಲಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ಇಂತಹ ಶಿಕ್ಷಕರು ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ ಇಂತಹ ನಮ್ಮ ಶಿಕ್ಷಕ ಬಂಧುಗಳಿಗೆ ನಾವು ನಮ್ಮ ಸಂಸ್ಥೆಯಿಂದ ಅಕ್ಕಪಕ್ಕದ ಶಾಲಾ ಕಾಲೇಜಿನ ಶಿಕ್ಷಕರಿಗೆ ಈ ದಿನ ಗೌರವವನ್ನು ಸಲ್ಲಿಸುವುದು ನಮ್ಮ ಭಾಗ್ಯ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಅಶ್ವಥ್ ನಾರಾಯಣ್ ತಿಳಿಸಿದರು
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಇನ್ನು ಮುಂತಾದವರು ಪಾಲ್ಗೊಂಡಿದ್ದರು