ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪವಿತ್ರತೆ ಮತ್ತು ಪ್ರಾಮಾಣಿಕತೆ 'ಮನುಷ್ಯ ಈ ಎರಡನ್ನು ಕಾಪಾಡಿದ್ದೆ ಆದರೆ ನಮ್ಮ ಮನುಷ್ಯ ಜೀವನದ ಪರಿಸರವನ್ನು ಉನ್ನತಿ ಕರಿಸಿದಂತೆ ""
ವಿಷಪೂರಿತ ತ್ಯಾಜ್ಯಗಳಿಂದ ಪವಿತ್ರ ನದಿಗಳಷ್ಟೇಅಲ್ಲ ಒಳಹರಿಯುವ ಅಂತರ ಗಂಗೆಯೂ ಮಲಿನಗೊಂಡಿದೆ, ಮನುಷ್ಯನ ಅಂತರಾಳದ ಜೀವಸೆಲೆಯೂ ಕೂಡ ದಿನೇದಿನೇ ವಿಷಪೂರಿತವಾಗುತ್ತಿದೆ. ಮಕ್ಕಳು, ಹೆಣ್ಣುಮಕ್ಕಳು ಮತ್ತು ದುರ್ಬಲರ ಮೇಲೆ ದಾಳಿಯಾಗುತ್ತ ಜನಸಾಮಾನ್ಯರನ್ನು ಭಯಗ್ರಸ್ಥ ಸ್ಥಿತಿಯಲ್ಲಿರುವಂತೆ ಆಗಿದೆ.
ಜಾತಿಜಾತಿಗಳ ನಡುವೆ ವೈಶಮ್ಯ, ಕಲಹ, ದ್ವೇಷ ಮತ್ತು ಅಸೂಯೆಗಳೇ ಇದಕ್ಕೆ ಕಾರಣ. ನಗರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದೇ ಒಂದು ಉದ್ಯಮ ಎಂದುಕೊಂಡು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವವರೇ ಶಿಕ್ಷಣ ತಜ್ಞರೆನಿಸಿಕೊಂಡಿದ್ದಾರೆ. ಕೆಲವೊಂದು ಶಿಕ್ಷಣ ಸಂಸ್ಥೆಗಳು, ಮಠಗಳು ಶಿಕ್ಷಣಕ್ಕೆ ಹೆಚ್ಚುಒತ್ತುಕೊಟ್ಟು ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತಿವೆ. ಸಮಾಜದಲ್ಲಿ ಬಡವ, ಬಲ್ಲಿದನೆನ್ನದೆ ಪ್ರತಿ ಮಗುವಿಗೂ ವಿದ್ಯೆ ದೊರೆತರಷ್ಟೇ ಭವಿಷ್ಯದ ಜಗತ್ತು ಸುಂದರವಾಗಲಿದೆ ಮತ್ತು ವಿಕಸನಗೊಳ್ಳುತ್ತದೆ. ಭೂಮಿಯನ್ನು ಸ್ವಲ್ಪ ಅಗೆದು ಅದರಲ್ಲಿ ಬೀಜವನ್ನು ಬಿತ್ತಿ ಪೋಷಿಸಿದರೆ ಅದರಿಂದ ಗಿಡವನ್ನು ಸುಲಭವಾಗಿ ಬೆಳೆಯುವಂತೆ ಮಾಡಿ ಸುತ್ತಲು ಒಂದು ಬೇಲಿಯನ್ನು ನಿರ್ಮಿಸಿ ಯಾರಿಂದಲೂ ಮತ್ತು ಯಾವುದರಿಂದಲೂ ನಾಶವಾಗದಂತೆ ನೋಡಿಕೊಂಡರೆ ಗಿಡ ತನ್ನ ಸ್ವಭಾವಕ್ಕೆ ಅನುಗುಣವಾಗಿ ಬೆಳೆಯುತ್ತದೆಯೋ ಹಾಗೆಯೇ ಮಗುವೂ ಸಹ ತನ್ನ ಸುತ್ತಲಿನ ಪರಿಸರ ಮತ್ತು ಮನೆಯಲ್ಲಿನ ವಾತಾವರಣದಿಂದ ತಾನೇ ಸ್ವಯಂ ಶಿಕ್ಷಣ ಪಡೆಯುತ್ತದೆ.
ಮಕ್ಕಳನ್ನು ಜಾಗೃತಗೊಳಿಸುವುದೇ ಪೋಷಕರ ಮತ್ತು ಶಿಕ್ಷಕರ ಕೆಲಸ ಸ್ವಾತಂತ್ರ್ಯ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ಹಲವಾರು ಸಮಸ್ಯೆಗಳ ಗೊಂದಲದಿಂದ ಶಿಕ್ಷಣದ ಮೂಲಭೂತ ಆಶಯ ಇಂದಿಗೂ ಈಡೇರಿಲ್ಲ ಇದೆಲ್ಲಾ ಏನೇ ಇದ್ದರೂ ನಾವು ಮಕ್ಕಳಿಗೆ ಉತ್ತಮ ಆದರ್ಶಗಳನ್ನು ಹೇಳಿಕೊಡಬೇಕು, ಒಳ್ಳೆಯ ಮಾತು, ನಡೆ-ನುಡಿ, ಸಂಸ್ಕಾರಗಳನ್ನು ತಿಳಿಸಿಕೊಡುವುದರ ಮೂಲಕ ಅವರುಗಳ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದೆ ಸಮಾಜಕ್ಕೆ ಏನಾದರು ಕೊಡುಗೆಯನ್ನು ನೀಡುವಂತಹ ಆದರ್ಶಗಳನ್ನು ನೀಡುವುದೇ ಉತ್ತಮವಾದ ಶಿಕ್ಷಣ.
ಶಿಕ್ಷಣ ಎನ್ನುವುದು ಕೇವಲ ನಿಂತ ನೀರಲ್ಲ ಅದು ಸದಾ ಹರಿಯುವ ನದಿ ಇದ್ದಂತೆ. ಇಂತಹ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿ ಸಮರ್ಥ ಶಿಕ್ಷಕರಿರುತ್ತಾರೊ ಅಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳು ಹೊರಹೊಮ್ಮುತ್ತಾರೆ ಹಾಗೆಯೇ ಎಲ್ಲಿ ಸಮರ್ಥ ಹಾಗೂ ಪ್ರಾಮಾಣಿಕ ಅಧಿಕಾರಿಗಳಿರುತ್ತಾರೊ ಅಲ್ಲಿ ಸಮರ್ಥ ಆಡಳಿತ ವ್ಯವಸ್ಥೆಯನ್ನು ಕಾಣಲು ಸಾಧ್ಯ. ಸಮನ್ವಯತೆ ಮತ್ತು ಸಹಕಾರವಿದ್ದರೆ ಅಭಿವೃದ್ಧಿ ಸಾಧ್ಯ.
ಆರ್. ಪಿ .ಎ .ಕಾಲೇಜು ಬೆಂಗಳೂರು