ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""30ನೇ ವರ್ಷ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡ ವೀರಶೈವ ಮುಖಂಡ ಸದಾ ಶಿವಯ್ಯ""
ಪೀಣ್ಯ ದಾಸರಹಳ್ಳಿ : ಬಾಗಲಗುಂಟೆ ಭಾಗದ ವೀರಶೈವ ಮುಖಂಡರಾದ ಸದಾ ಶಿವಯ್ಯ ಹಾಗೂ ರೇಣುಕಾ ಮದುವೆಯಾಗಿ 30 ವರ್ಷ ವಾರ್ಷಿಕೋತ್ಸವವನ್ನು ಇಂದು ಅವರ ನಿವಾಸದಲ್ಲಿ ವೀರಶೈವ ಬಾಂಧವರು ಮತ್ತು ಬಂಧು ಬಳಗದವರು ದಂಪತಿಗಳಿಗೆ ಶುಭಾಷೆಗಳನ್ನು ಕೋರುವುದರ ಮೂಲಕ ಹೂವಿನ ಹಾರ ಹಣ್ಣಿನ ಬುಟ್ಟಿ ಶಾಲು ಕೊಟ್ಟು ದಂಪತಿಗಳನ್ನು ಆಶೀರ್ವಾದ ಮಾಡಿ ನಿಮ್ಮ ಮುಂದಿನ ಜೀವನ ದಿನಗಳು ಇಬ್ಬರ ಆರೋಗ್ಯ ಚೆನ್ನಾಗಿ ಇರಲಿ ಎಂದು ದೇವರು ಆಶೀರ್ವಾದ ನೀಡಲಿ ಎಂದು ಹಲವಾರು ವೀರಶೈವ ಮುಖಂಡರುಗಳು ಶುಭಕೋರಿ ಆಶೀರ್ವದಿಸಿದರು ಹಾಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಚಿಕ್ಕಬಾಣವರ ವಿಶ್ವ ವೀರಶೈವರ ವೇದಿಕೆ ಅಧ್ಯಕ್ಷರಾದ ಎಂಎಚ್ ಪಾಟೀಲ್ ಹಾಗೂ ಮತ್ತಿತರರುಮುಖಂಡರುಗಳುಪಾಲ್ಗೊಂಡಿದ್ದರು