ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಆರ್. ಪಿ. ಎ. ಸೊಸೈಟಿಯ ಮತ್ತೊಂದು ಶಾಖೆ ಗೋಲ್ಡನ್ ರೇ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಪ್ರಾರಂಭೋತ್ಸವ""
ನೆಲಮಂಗಲ: ಬೆಂಗಳೂರಿನ ಪೇರೆಂಟ್ ಎಜುಕೇಶನ್ ಸೊಸೈಟಿ ನಗರದ ರಾಜಾಜಿನಗರದಲ್ಲಿರುವ ಈ ಸಂಸ್ಥೆಯ ಸುಮಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದು ಇದು ಈಗ ನೆಲಮಂಗಲದ ಸಮೀಪದಲ್ಲಿ ಇರುವ ಗೋರಿನ ಬೆಲೆ ಗೋಲ್ಡನ್ ರೇ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾರಂಭೋತ್ಸವ ಹಾಗೂ ಮಕ್ಕಳಿಗೆ ಅಕ್ಷದ ಅಭ್ಯಾಸ ಮತ್ತು ಪರಿಸರ ದಿನಾಚರಣೆಗೆ ಬೇಲಿ ಮಠ ಮಹಾ ಸಮಸ್ತಾನ ಅಧ್ಯಕ್ಷರಾದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿಗಳು ಈ ಶಾಲೆಯ ಪ್ರಾರಂಭೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ತದನಂತರ ಮಕ್ಕಳಿಗೆ ಶಿಕ್ಷಣದ ಕೊಡುವುದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಗತ್ಯವಾಗಿದೆ ಇಂದಿನ ಮಕ್ಕಳಿಗೆ ಸಮಾಜವನ್ನು ಸೃಷ್ಟಿಸುವಂತಹ ಶಿಕ್ಷಣವನ್ನು ನೀಡುವಂತದ್ದಾಗಲಿ ಈ ನಿಟ್ಟಿನಲ್ಲಿ ಇಲ್ಲಿನ ಶಾಲೆಯು ಪ್ರಗತಿ ಸಾಧಿಸಲೆಂದು ಆಶೀರ್ವಚನ ನೀಡಿದರು
ನೆಲಮಂಗಲ ಶಾಸಕ ಶ್ರೀನಿವಾಸ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಿವಿಧ ಸಸಿಗಳು ಶಾಲಾ ಆವರಣದಲ್ಲಿ ನೆಟಿಸಲಾಯಿತು . ಈ ಕಾರ್ಯಕ್ರಮದಲ್ಲಿ ಸೋಲದೇವನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್ ನಾಯಕ್ ಸಂಸ್ಥೆಯ ಅಧ್ಯಕ್ಷ ಎಂ ಎಸ್ ಮೃತ್ಯುಂಜಯ ಉಪಾಧ್ಯಕ್ಷರಾದ ಎಂ ಆರ್ ವಿಜಯಲಕ್ಷ್ಮಿ ಖಜಾಂಚಿ ದೇವರಸೇ ಗೌಡ ಕಾರ್ಯದರ್ಶಿಗಳಾದ ನಟರಾಜ್ ಸಾಗರನಹಳ್ಳಿ ಜಂಟಿ ಕಾರ್ಯದರ್ಶಿಗಳಾದ ಜಿ.ಎಸ್. ಮೃತ್ಯುಂಜಯ ಅಕಾಡೆಮಿ ಅಧ್ಯಕ್ಷರು ಶಿವಕುಮಾರ್ ಡಾ ನಂದೀಶ್ ಆಡಳಿತ ಮಂಡಳಿ ಸದಸ್ಯರ ಜನಾರ್ಧನ್, ಗೀತಾ ಶೆಟ್ಟಿ, ಶಿವಕುಮಾರ್ ಸ್ವಾಮಿ, ಶಾಲಾ ಸದಸ್ಯ ವಿನ್ಯಾಸಕ ಪ್ರಸಾದ್ ಶೇಖರ್ ಗೌಡ ,ಮಧುಸೂದನ್ ,ವ್ಯವಸ್ಥಾಪಕ ಮುನ್ನೇಗೌಡ ಪದವಿ ಕಾಲೇಜು ಪ್ರಾಂಶುಪಾಲರಾದ ಕೆ ಕವಿತಾ ತೇಜಸ್ವಿ ಪ್ರಾಚಾರ್ಯರದ ಗೀತಾ ಸಿಬಿಎಸ್ಸಿ ಪ್ರಾಂಶುಪಾಲರು ಮಧು ಪ್ರೌಢಶಾಲಾ ಮುಖ್ಯ ಶಿಕ್ಷಕ ಕಿರಣ್ ಹೆಗಡೆ ಲತಾ ಸಿಇಒ ರಂಗನಾಥ್ ಸೇರಿದಂತೆ ಇನ್ನುಹಲವರು ಪಾಲ್ಗೊಂಡಿದ್ದರು