ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬೆಂಗಳೂರಿನ ಜವಾಹರ್ ಬಾಲ ಭವನ ಕಬ್ಬನ್ ಪಾರ್ಕ್ ಚೇರ್ಮನ್ ಆಗಿ ಬಿ ಆರ್ ನಾಯ್ಡು ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷ ""
ಬೆಂಗಳೂರು: ರಾಜ್ಯದ ಹೃದಯ ಭಾಗದಲ್ಲಿರುವ ಹೈಕೋರ್ಟ್ ಹಿಂಭಾಗ ಇರುವ ಜವಾಹರ್ ಬಾಲ ಭವನ ಕಬ್ಬನ್ ಪಾರ್ಕ್ ಚೇರ್ಮನ್ ಆಗಿ  ಬಿ ಆರ್ ನಾಯ್ಡು ಅಧಿಕಾರ ಸ್ವೀಕಾರ ಮಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ  ಡಾಕ್ಟರ್ ಬಳ್ಳಾರಿ ಎಂ ಡಿ. ರವರು ಶಾಲು ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಶುಭ ಕೋರಿದರು ಈ ಸಂದರ್ಭದಲ್ಲಿ  ಸಿಹಿ ಹಂಚಿ  ಹಾಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಅಧಿಕಾರದ ಅವಕಾಶಗಳು ಸಿಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಬಿ ಆರ್ ನಾಯ್ಡು ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಗೂ ಹಾಗೂ ಡಿಸಿಎಂ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿರಾದ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು ತದ‌ ನಂತರ ಜವಾಹರ್ ಬಾಲಭವನ ಮುಖ್ಯಸ್ಥನಾಗಿ ನನಗೆ ಕೊಟ್ಟಿರುವಂತಹ ಅಧಿಕಾರವನ್ನು ಅಭಿವೃದ್ಧಿಯ ಕಡೆ ಕೊಂಡೊಯ್ಯುವಂತಹ ಕೆಲಸವನ್ನು  ಪ್ರಾಮಾಣಿಕವಾಗಿ ಮಾಡುತ್ತೇನೆಂದು ಈ ಸಂದರ್ಭದಲ್ಲಿ ತಿಳಿಸಿದರು ಹಾಗೆ ಹಲವಾರು ಮುಖಂಡರು ಅಧಿಕಾರಿಗಳು ಬಂದು ಶಾಲು ಹಾಗೂ ಹಾರ ಹಾಕಿ‌ ಸಿಹಿ ಹಂಚಿ ಶುಭ ಕೋರಿದರು ಕಚೇರಿಯ ಸಿಬ್ಬಂದಿ ವರ್ಗದವರು ಶುಭಕೋರಿ ಬರಮಾಡಿಕೊಂಡರು 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News