ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ತಿಂಗಳು 13 ರಿಂದ 23ರ ವರೆಗೂ ನಡೆಯಲಿರುವ ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಎಂಟಿಸಿ ಸಾರಿಗೆ ಸೌಲಭ್ಯ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ "
ಬೆಂಗಳೂರು :ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬೆಂ.ಮ.ಸಾ.ಸಂ) ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
13.06.2024, 16.06.2024, 19.06.2024 ಹಾಗೂ 23.06.2024 ಗಳಂದು ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸದರಿ ಕ್ರಿಕೆಟ್ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ.
ನಗರದ ವಿವಿಧ ಭಾಗಗಳಿಂದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ಮಾರ್ಗದ ವಿವರ ಕೆಳಕಂಡಂತಿದೆ:
| ಕ್ರ.ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ |
|---------|--------------|---------|---------|
| 1 | ಎಸ್.ಬಿ.ಎಸ್-1ಕೆ| ಎಂ.ಚಿನ್ನಸ್ವಾಮಿ ಕ್ರೀಡಾಂಗಣ | ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ) |
| 2 | ಜಿ-2 | | ಸರ್ಜಾಪುರ |
| 3 | ಜಿ-3 | | ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ) |
| 4 | ಜಿ-4 | | ಬನ್ನೇರುಘಟ್ಟ ಮೃಗಾಲಯ |
| 5 | ಜಿ-7 | | ಜನಪ್ರಿಯ ಟೌನ್ಷಿಪ್ (ಮಾಗಡಿ ರಸ್ತೆ) |
| 6 | ಜಿ-10 | | ಆರ್.ಕೆ.ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ) |
| 7 | 317 ಜಿ | | ಹೊಸಕೋಟೆ |
| 8 | 13 | | ಬನಶಂಕರಿ |