ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"" ಬೆಂ.ಮ.ಸಾ.ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಿರುವ ಬಗ್ಗೆ.""
ಬೆಂಗಳೂರು :ಪೀಣ್ಯ ಘಟಕ 09 ರಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ನಿರ್ದೇಶಕರು ರವರಾದ ಶ್ರೀಮತಿ ಶಿಲ್ಪಾ ಎಂ ರವರು ಮುಖ್ಯ ಅತಿಥಿ ಗಳಾಗಿ ಆಗಮಿಸಿ ಸಸಿ ನೆಡಿವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಉತ್ತಮ ಕಾರ್ಯ ಹಾಗೂ ಶಿಸ್ತು ಬದ್ಧ ಸಮವಸ್ತ್ರ ಧರಿಸಿದ ಚಾಲನಾ ಸಿಬ್ಬಂದಿಗಳಿಗೆ ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ನೀಡಿ ಸತ್ಕರಿಸಿ, ಪ್ರತಿಯೊಬ್ಬರಿಗೊ ಒಂದೊಂದು ಸಸಿ ನೀಡಿ ಬೆಳೆಸಲು ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾ ಪಕ(ಆ )ರಾದ ಶ್ರೀ ಪ್ರಭಾಕರ ರೆಡ್ಡಿ, ವಾಯುವ್ಯ ವಿಭಾಗದ ವಿಭಾಗೀಯ ನಿಯಂತ್ರ ನಾಧಿಕಾರಿ ಶ್ರೀ ವೇಣುಗೋಪಾಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಸ್ಯ ಯಜ್ಞ ತಂಡದ ವತಿಯಿಂದ ಕಾರ್ಯಕ್ರಮ ದಲ್ಲಿ ನೆರೆದಿದ್ದ ಎಲ್ಲ ಕಾರ್ಮಿಕರಿಗೂ ಉಚಿತವಾಗಿ ಔಷಧಿ ಸಸಿಗಳನ್ನು ವಿತರಿಸಲಾಯಿತು.