ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ""
(ಸಂಸತ್ತಿನ ಕಾಯಿದೆ ಪ್ರಕಾರ ಸ್ಥಾಪಿಸಲಾಗಿದೆ)


ಬೆಂಗಳೂರು,:ಜೂನ್ 27ರಿಂದ 29ರವರೆಗೆ ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಸ್ಫಿಯರ್ ಕಾರ್ಯಕ್ರಮದ 2ನೇ ಆವೃತ್ತಿಯನ್ನು ಆಯೋಜಿಸಿದ ಐಸಿಎಐ; ಈ ಕಾರ್ಯಕ್ರಮವು ಸ್ಟಾರ್ಟ್ಅಪ್ಗಳಿಗೆ ಹೂಡಿಕೆದಾರರಿಂದ ಯುಎಸ್ಡಿ 200 ಮಿಲಿಯನ್ಗಿಂತಲೂ ಹೆಚ್ಚಿನ ಹಣವನ್ನು ಒದಗಿಸುವ ಗುರಿಯನ್ನು ಹೊಂದಿದೆ
• ಈ 3 ದಿನದ ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಕ್ಷೇತ್ರದ 10,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ
23 ಮೇ, 2024: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) 2024ರ ಜೂನ್ 27 ರಿಂದ 29 ರವರೆಗೆ "ಭಾರತದ ಟೆಕ್ ಸಿಟಿ" ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಸಂಸ್ಥಾಪಕರು, ಹೂಡಿಕೆದಾರರು, ನಾಯಕರು, ಪಾಲುದಾರರು, ಯುನಿಕಾರ್ನ್ಗಳು (1 ಬಿಲಿಯನ್ ಯುಎಸ್ಡಿಗಿಂತ ಹೆಚ್ಚು ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ ಕಂಪನಿಗಳು), ಪ್ರಮುಖ ಪ್ರಭಾವಿಗಳು ಮತ್ತು ಉದ್ಯಮಿಗಳನ್ನು ಒಳಗೊಂಡು ಹುಮ್ಮಸ್ಸಿನ ಸ್ಟಾರ್ಟ್ಅಪ್ ಸಮುದಾಯವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಅವರೆಲ್ಲರೂ ಸೇರಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಹಲವಾರು ರೀತಿಯ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅರಿವು ಮೂಡಿಸುವುದು, ಹೊಸ ಪರಿಕಲ್ಪನೆ ಮಾಡಲು ಉತ್ತೇಜಿಸುವುದು, ಸಾಮರ್ಥ್ಯ ಪ್ರದರ್ಶನಕ್ಕೆ ಅನುವು ಮಾಡಿಕೊಡುವುದು ಮತ್ತು ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಬೆಂಬಲವನ್ನು ನೀಡುವುದು ಈ ಕಾರ್ಯಕ್ರಮದ ಗುರಿಯಾಗಿದೆ.
ಕಳೆದ ವರ್ಷ ಮುಂಬೈನಲ್ಲಿ ನಡೆದ ಉದ್ಘಾಟನಾ ಸ್ಟಾರ್ಟ್ಅಪ್ ಸ್ಫಿಯರ್ ಕಾರ್ಯಕ್ರಮದಲ್ಲಿ 75 ಹೂಡಿಕೆದಾರರಿಗೆ ಪ್ರಸ್ತುತಪಡಿಸಲಾದ 60 ಪಿಚ್ಗಳಿಂದ ಅಂದಾಜು ಯುಎಸ್ಡಿ 100 ಮಿಲಿಯನ್ ಫಂಡ್ ಅನ್ನು ಯಶಸ್ವಿಯಾಗಿ ಗಳಿಸಲಾಗಿತ್ತು. ಅದರ ಅದ್ಭುತ ಯಶಸ್ಸಿನ ಆಧಾರದ ಮೇಲೆ ಇನ್ನೂ ಹೆಚ್ಚಿನ ಹೂಡಿಕೆ ಒಟ್ಟು ಗೂಡಿಸುವ ಉದ್ದೇಶದಿಂದ ಈ ವರ್ಷದ ಕಾರ್ಯಕ್ರವನ್ನು ಆಯೋಜಿಸಲಾಗಿದೆ.
ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಐಸಿಎಐ ಅಧ್ಯಕ್ಷ ಸಿಎ ರಂಜೀತ್ ಕುಮಾರ್ ಅಗರ್ವಾಲ್, “ಭಾರತದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಗಮನಾರ್ಹ ಬೆಳವಣಿಗೆಯನ್ನು ಸಾರಲು ನಾನು ಹೆಮ್ಮೆಪಡುತ್ತೇನೆ. ಭಾರತವು ಈ ಕ್ಷೇತ್ರದಲ್ಲಿ ಈಗ ಜಾಗತಿಕವಾಗಿ ಮೂರನೇ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆ ಸಾಧಿಸಿದೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಆರಂಭಿಕ ಸ್ಟಾರ್ಟ್ಅಪ್ ಸ್ಫಿಯರ್ ಕಾರ್ಯಕ್ರಮದ ಯಶಸ್ಸಿನ ನಂತರ, ನಾವು ಎರಡನೇ ಕಾರ್ಯಕ್ರಮವನ್ನು ದೇಶದ ಟೆಕ್ ಮತ್ತು ಸ್ಟಾರ್ಟ್ಅಪ್ ಹಬ್ ಎಂದೇ ಪರಿಗಣಿಸಿರುವ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಸ್ಟಾರ್ಟ್ಅಪ್ ಸ್ಫಿಯರ್ 2024 ಅನ್ನು 2024ರ ಜೂನ್ 27 ರಿಂದ 29 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷ ಯುಎಸ್ಡಿ 200 ಮಿಲಿಯನ್ಗಿಂತಲೂ ಹೆಚ್ಚಿನ ಹಣ ಹೂಡಿಕೆ ಆಗಲಿರುವ ಕುರಿತು ನಾವು ನಿರೀಕ್ಷೆ ಹೊಂದಿದ್ದೇವೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮವು ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಒಟ್ಟಿಗೆ ಸೇರಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಮತ್ತು ಆ ಮೂಲಕ ಹೂಡಿಕೆಗಳನ್ನು ಪಡೆಯಬಹುದಾಗಿದೆ. ನಿಯಂತ್ರಕ ಅನುಸರಣೆ, ಹಣಕಾಸು ನಿರ್ವಹಣೆಯ ಸಲಹೆಗಾಗಿ ಸಂಬಂಧಪಟ್ಟವರು ಐಸಿಎಐ ಅನ್ನು ಸಂಪರ್ಕಿಸಬಹುದು” ಎಂದು ಹೇಳಿದರು.
ಮಾತು ಮುಂದುವರಿಸಿದ ಅಧ್ಯಕ್ಷರು ಮತ್ತಷ್ಟು ಮಾಹಿತಿ ನೀಡುತ್ತಾ, “ನಾವು 4 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದೇವೆ ಅದರಲ್ಲಿ ಸುಮಾರು 1.6 ಲಕ್ಷ ಚಾರ್ಟರ್ಡ್ ಅಕೌಂಟೆಂಟ್ಗಳು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಉಳಿದ 2.4 ಲಕ್ಷ ಸದಸ್ಯರು ಆರ್ಥಿಕ ಪರಿಸರ ವ್ಯವಸ್ಥೆಯ ಪ್ರತಿಯೊಂದು ವಿಭಾಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಆ ವಿಭಾಗಗಳಲ್ಲಿ ವೆಂಚರ್ ಕ್ಯಾಪಿಟಲ್, ಹೂಡಿಕೆ ಹಣಕಾಸು ಮತ್ತು ಖಾಸಗಿ ಈಕ್ವಿಟಿ ಹೀಗೆ ಎಲ್ಲಾ ವಿಭಾಗಗಳು ಸೇರಿವೆ. ಈಗ ಅವರ ಪರಿಣತಿಯು ಭಾರತದ ಸ್ಟಾರ್ಟ್ಅಪ್ ಯಶಸ್ಸಿನ ಕಥೆಗಳಿಗೂ ಗಮನಾರ್ಹ ಕೊಡುಗೆಯನ್ನು ನೀಡಲಿದೆ" ಎಂದು ಹೇಳಿದರು.
ಮುಂಬರುವ ದೊಡ್ಡ ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ ಐಸಿಎಐನ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಸಮಿತಿಯ ಅಧ್ಯಕ್ಷ ಸಿಎ ಧೀರಜ್ ಕುಮಾರ್ ಖಂಡೇಲ್ವಾಲ್, “ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮದಲ್ಲಿ 100 ಪ್ರದರ್ಶಕರು (ಎಕ್ಸಿಬಿಟರ್ ಗಳು) ಮತ್ತು 200 ಸ್ಟಾರ್ಟ್ಅಪ್ಗಳು ಬೆಂಗಳೂರಿನಿಂದಲೇ ತಮ್ಮ ನವೀನ ಆಲೋಚನೆಗಳನ್ನು ಅಂದಾಜು 100ರಷ್ಟು ಹೂಡಿಕೆದಾರರ ಮುಂದೆ ಇಡಲಿವೆ. ಭಾರತದಾದ್ಯಂತ ಇರುವ 100ಕ್ಕೂ ಹೆಚ್ಚು ಐಸಿಎಐ ಶಾಖೆಗಳ ಪ್ರತಿನಿಧಿಗಳು, ಪ್ರತಿಷ್ಠಿತ ಮಂತ್ರಿಗಳು, ಯುನಿಕಾರ್ನ್ಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ 15ಕ್ಕೂ ಹೆಚ್ಚು ಯುನಿಕಾರ್ನ್ಗಳು ಭಾಗವಹಿಸುವ ನಿರೀಕ್ಷೆಯಿದೆ. ಇದೆಲ್ಲವೂ ಕಾರ್ಯಕ್ರಮದ ಪ್ರತಿಷ್ಠೆ ಹೆಚ್ಚಿಸಲಿದೆ ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಹೆಚ್ಚಿಸಲಿದೆ” ಎಂದು ಹೇಳಿದರು.
ಐಸಿಎಐನ ಸ್ಟಾರ್ಟ್ಅಪ್ ಗೇಟ್ವೇ ಉದ್ಯಮಶೀಲತೆಯನ್ನು ಉತ್ತೇಜಿಸಲು, ನಾವೀನ್ಯತೆಗೆ ಪ್ರೋತ್ಸಾಹ ನೀಡಲು ಮತ್ತು ಭಾರತದ ಆರ್ಥಿಕ ಪ್ರಗತಿಗೆ ಪ್ರಮುಖ ಕೊಡುಗೆದಾರರಾಗಿ ಸ್ಟಾರ್ಟ್ಅಪ್ಗಳನ್ನು ಸಬಲೀಕರಣಗೊಳಿಸುವ ಐಸಿಎಐನ ಬದ್ಧತೆಗೆ ಸಾಕ್ಷಿಯಾಗಿದೆ. ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮವು ಸ್ಟಾರ್ಟ್ಅಪ್ ವೆಂಚರ್ಸ್ನಲ್ಲಿ ಹೊಸ ಟ್ರೆಂಡ್ ಗಳು, ಸ್ಟಾರ್ಟ್ಅಪ್ಗಳಿಗಾಗಿ ಎಐ ಮತ್ತು ಮಷಿನ್ ಲರ್ನಿಂಗ್, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಹೊಂದಾಣಿಕೆ, ಸ್ಟಾರ್ಟ್ಅಪ್ಗಳ ಡಿಜಿಟಲ್ ರೂಪಾಂತರ ಮತ್ತು ಮಾರ್ಕೆಟಿಂಗ್, ಬ್ಲಾಕ್ ಚೈನ್ ಮತ್ತು ಡೇಟಾ ಮೈನಿಂಗ್ ಇತ್ಯಾದಿ ವಿಚಾರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.
ಐಸಿಎಐ ಪ್ರಸ್ತುತ ಸ್ಟಾರ್ಟ್ಅಪ್ಗಳ ಬೆಂಬಲಕ್ಕೆ ದೃಢವಾಗಿ ನಿಂತಿದೆ. ಸ್ಟಾರ್ಟ್ಅಪ್ಗಳಿಗೆ ಉತ್ತಮ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಸುಸ್ಥಿರ ಅಭಿವೃದ್ಧಿಗೆ ಪ್ರೋತ್ಸಾಹಕರ ವಾತಾವರಣವನ್ನು ಕೂಡ ಒದಗಿಸುತ್ತದೆ. ಎಂಎಸ್ಎಂಇ ವಲಯದ ಜೊತೆಗಿನ ಬಲವಾದ ಸಂಪರ್ಕ ಹೊಂದಿರುವ ಐಸಿಎಐ, ಇತರ ಅನೇಕ ಅಮೂಲ್ಯ ಸೇವೆಗಳ ಜೊತೆಗೆ ಹಣಕಾಸು ಸಲಹಾ ಸೇವೆಗಳು, ಯೋಜನಾ ಹಣಕಾಸು ಮತ್ತು ಕಾರ್ಯನಿರತ ಬಂಡವಾಳ ನಿರ್ವಹಣೆಯ ಪರಿಣತಿಯನ್ನು ಒದಗಿಸುತ್ತದೆ. ಭಾರತದ ಕುತೂಹಲಕಾರಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ಹೊಂದಿರುವ ಐಸಿಎಐ ಸ್ಟಾರ್ಟ್ಅಪ್ಗಳ ಬೆಳವಣಿಗೆಯನ್ನು ಉತ್ತೇಜಿಸಲು ಬದ್ಧವಾಗಿದೆ ಮತ್ತು ಆರ್ಥಿಕ ಸಮೃದ್ಧಿಯನ್ನು ಉಂಟು ಮಾಡುವಲ್ಲಿ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮಕ್ಕೆ ಸ್ಟಾರ್ಟ್ಅಪ್ ಇಂಡಿಯಾ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಮತ್ತು ಕರ್ನಾಟಕ ಇನ್ನೋವೇಶನ್ ಆಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಮೂಲಕ ಪ್ರಮೋಷನ್ ಆಫ್ ಇಂಡಸ್ಟ್ರಿ ಆಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ) ಬೆಂಬಲ ನೀಡಿದೆ. ಈ ಸಹಯೋಗದ ಪ್ರಯತ್ನವು ಭಾರತದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿನ ಈ ಸಂಸ್ಥೆಯಗಳ ಬದ್ಧತೆಯನ್ನು ಸಾರುತ್ತದೆ. ಈ ಸಮಾರಂಭದಲ್ಲಿ ಜ್ಞಾನ-ಹಂಚಿಕೆ, ನೆಟ್ವರ್ಕಿಂಗ್ ಅವಕಾಶಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ನಾವು ಸ್ಟಾರ್ಟ್ಅಪ್ಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಭಾರತದ ಕುತೂಹಲಕಾರಿ ಉದ್ಯಮಶೀಲ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದೇವೆ.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News