ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಜೆ ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸರ್ಕಲ್ ಬಳಿ ಇರುವ ವಿವೇಕಾನಂದ ಪ್ರತಿಮೆಯಿಂದ ನಡೆಯುವ ಬೃಹತ್ ರೋಡ್ ಷೋನಲ್ಲಿ ಭಾಗವಹಿಸಿದ್ದರು.
ಅಮಿತ್ ಶಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿ ತೇಜಸ್ವಿ ಸೂರ್ಯ, ವಿಪಕ್ಷ ನಾಯಕ ಆರ್.ಅಶೋಕ್ ಅವರು ತೆರೆದ ವಾಹನದಲ್ಲಿ ಪಾಲ್ಗೊಂಡರು. ಕಾರ್ಯಕರ್ತರು ಮತ್ತು ಜನರು ಬೃಹತ್ ಧ್ವಜಗಳನ್ನು ಬೀಸುತ್ತ ಸಾಗಿದರು.
‘ಮೋದಿ ಮೋದಿ’, ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗುತ್ತ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ರೋಡ್ ಷೋದಲ್ಲಿ ಪಾಲ್ಗೊಂಡಿದ್ದರು. ಹಿರಿಯರ ಜೊತೆ ಯುವಕರು ಅತ್ಯುತ್ಸಾಹದಿಂದ ಭಾಗವಹಿಸಿದ್ದು ಕಂಡುಬಂತು. ತೇಜಸ್ವಿ ಸೂರ್ಯರನ್ನು 5 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಮನವಿ ಮಾಡಲಾಯಿತು.
ಅಮಿತ್ ಶಾ ಅವರು ಕೈಯಲ್ಲಿ ಕಮಲದ ಚಿಹ್ನೆಯೊಂದಿಗೆ ಪಾಲ್ಗೊಂಡರಲ್ಲದೆ, ಕಾರ್ಯಕರ್ತರು ಮತ್ತು ಜನರ ಕಡೆಗೆ ಹೂವಿನ ಪಕಳೆಗಳನ್ನು ಎಸೆಯುತ್ತ ಜನೋತ್ಸಾಹ ಹೆಚ್ಚಿಸುತ್ತ ಸಾಗಿದರು.