ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
*ವಿಶ್ವಗುರು ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಜೀ*
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದ ವಿಶ್ವಗುರು ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕೆಂದು ಶಾಸಕರಾದ ಎಸ್.ಮುನಿರಾಜ ರವರ ಅಧ್ಯಕ್ಷತೆಯಲ್ಲಿ ನಾರಿ ಶಕ್ತಿ ಸ್ಕೂಟಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು..
ಈ ಸಂದರ್ಭದಲ್ಲಿ ದಾಸರಹಳ್ಳಿ ಮಹಿಳೆಯರ ಧ್ವನಿ ಸೂರಜ್ ಪೌಂಡೇಶನ್ ಸಂಸ್ಥಾಪಕರಾದ ಸುಜಾತ ಮುನಿರಾಜ ರವರು ಈ ನಾರಿ ಶಕ್ತಿ ಸ್ಕೂಟಿ ಜಾತವನ್ನ ಶಾಲೆಯಲ್ಲಿ ಚಾಲನೆಯನ್ನು ನೀಡಿದರು ನಂತರ ""ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎನ್ನುವ ಘೋಷಣೆ"" ಮೂಡಿಬಂತು.
ಇದೆ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಉಮಾದೇವಿ ನಾಗರಾಜು ಮಹಿಳಾ ಹಿರಿಯ ಮುಖಂಡರಾದ ವಿಜಯಮ್ಮ ಸುಜಾತ ರವರು ಮಂಡಲ ಅಧ್ಯಕ್ಷರಾದ ಸೋಮಶೇಖರ್ ರವರು ಹಾಗೂ ಎಲ್ಲಾ ಮಹಿಳಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು..