ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ 'ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆ'ಯ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು . ಬೆಂಗಳೂರು : ಬೆಂಗಳೂರು ವಿವಿ ಆವರಣದಲ್ಲಿ ಡಾ .ಎಚ್. ಎನ್. ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಒಂದು ದಿನದ ಕಾಲ ನಡೆದ ಕಾರ್ಯಾಗಾರದಲ್ಲಿ ಪರೀಕ್ಷಾ ವಿಧಾನ,ಮೌಲ್ಯಮಾಪನ ವಿಧಾನ,ಡಿಜಿಟಲ್ ಮೌಲ್ಯಮಾಪನ ಕುರಿತು ವಿಶೇಷ ವಿಚಾರ ಸಂಕೀರ್ಣ ನಡೆಸಲಾಯಿತು.ಮಧ್ಯಾಹ್ನ ಪರೀಕ್ಷಾ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಸಮಸ್ಯೆ,ಗೊಂದಲಗಳ ಬಗ್ಗೆ ಉಪನ್ಯಾಸಕರು ಮತ್ತು ನುರಿತ ವಿಷಯ ತಜ್ಞರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ತಾಂತ್ರಿಕ ದೋಷಗಳು ಸೇರಿದಂತೆ ಇನ್ನು ಅನೇಕ ಗೊಂದಲಗಳಿಗೆ ಪರಿಹಾರ ನೀಡಲಾಯಿತು.UUCMS ಪರೀಕ್ಷೆಗಳ ಬಗ್ಗೆ, ವಿದ್ಯಾರ್ಥಿಗಳು ದಾಖಲೆ ಅಪ್ಲೋಡ್ ಬಗ್ಗೆ ಕೂಡ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ವಿವಿ ಕುಲಪತಿ ಡಾ ಲಿಂಗರಾಜ್ ಗಾಂಧಿ ಉಪನ್ಯಾಸಕರ ಗಳಿಗೆ." ಪರೀಕ್ಷೆಗಳು ವಿದ್ಯಾರ್ಥಿಕೇಂದ್ರಿತವಾಗಿರಬೇಕು,ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳು ಗುಣಮಟ್ಟ ಹೆಚ್ಚಿಸುವ ಕೆಲಸವಾಗಬೇಕು.ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕೂಡ ಮತ್ತಷ್ಟು ಸುಧಾರಣೆ ತರಬೇಕಾಗಿದೆ.ಡಿಜಿಟಲ್ ಮೌಲ್ಯಮಾಪನ ನಡೆಯುತ್ತಿದ್ದರೂ ಮತ್ತಷ್ಟು ಹೊಸ ವಿನ್ಯಾಸಗಳು ಅಗತ್ಯವಿದೆ.ಪರೀಕ್ಷೆಗಳಲ್ಲಿ ಮಕ್ಕಳು ಡಿಜಿಟಲ್ ಗ್ಯಾಡ್ಜೆಟ್ಸ್,ಚೀಟಿಗಳ ಮೂಲಕ ಅಕ್ರಮವೆಸಗುವ ಪ್ರಯತ್ನಗಳನ್ನು ತಡೆಯಬೇಕು ಎಂದರು..
ಅತಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದರೂ ಫಲಿತಾಂಶಕ್ಕೆ ತಿಂಗಳುಗಟ್ಟಲೆ ಕಾಯುವಂತಾಗಬಾರದು, ಉಪನ್ಯಾಸಕರು ಆ ನಿಟ್ಟಿನಲ್ಲಿ ಮತ್ತಷ್ಟು ಸಕ್ರಿಯರಾಗಬೇಕು. ಎಂದು ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಎಸ್ ಎಂ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಉದ್ಘಾಟನಾ ಮಾಡಿದ ಅತಿಥಿಯಾದ.ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಎಸ್ ಆರ್ ನಿರಂಜನ " ವಿದ್ಯಾರ್ಥಿಗಳನ್ನು ಉತ್ತೀರ್ಣ,ಅನುತ್ತೀರ್ಣ.ಮಾಡುವುದೇ ಮೌಲ್ಯಮಾಪನದ ಉದ್ದೇಶವಲ್ಲ.ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಜವಾಬ್ದಾರಿ ಶಿಕ್ಷಕರು ಮೇಲೂ ಸಹ ಇರಲಿದೆ,ಆ ನಿಟ್ಟಿನಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು.ಅಂಕಗಳಿಂದಲೇ ವಿದ್ಯಾರ್ಥಿಗಳನ್ನು ಗುರುತಿಸುವುದು ಹಾಗೆ ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬಂದರೆ ವಿದ್ಯಾರ್ಥಿ ದಡ್ಡನಲ್ಲ,ಆ ವಿದ್ಯಾರ್ಥಿಯ ಬದಲಾವಣೆಗೆ ಶ್ರಮಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಾಗಿದೆ.ಮೌಲ್ಯಮಾಪನದಲ್ಲಿ ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಉಪನ್ಯಾಸಕರುಗಳು ಮಾಡಬೇಕದ ಅವಶ್ಯಕತೆ ಇದೆ ಎಂದು ಉಪನ್ಯಾಸಕರು,ಮೌಲ್ಯಮಾಪಕರ ಕೊರತೆ ಸಾಕಷ್ಟು ಎದುರಿಸುತ್ತಿದ್ದು,ಅದಕ್ಕೆ ಕೂಡ ಪರಿಹಾರ ನೀಡುವ ಕಾರ್ಯವಾಗಬೇಕು.ವಿಶ್ವವಿದ್ಯಾಲಯಗಳ ಉಪನ್ಯಾಸಕರ ಮೌಲ್ಯಮಾಪನ ಸಂಭಾವನೆ ಮತ್ತು ವೇತನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ವಿವಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಸಚಿವರಾದ ಎಂ, ಶೇಕ್ ಲತೀಫ್ ಹಾಗೂ,ಕುಲಸಚಿವ (ಮೌಲ್ಯಮಾಪನ) ಶ್ರೀನಿವಾಸ್ ಸಿ, BUCTA ಅಧ್ಯಕ್ಷ ಡಾ.ತಮ್ಮಯ್ಯ ಆರ್ ಬಿ,ಪ್ರದಾನ ಕಾರ್ಯದರ್ಶಿ ಡಾ.ಮಹಮದ್ ಫಾರೂಕ್ ಪಾಷ ಸೇರಿದಂತೆ ವಿವಿದ ಕಾಲೇಜುಗಳ ಪ್ರಾಂಶುಪಾಲರು, ಹಾಗೂ ಉಪನ್ಯಾಸಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು