ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""12ನೇ ವಾರ್ಷಿಕೋತ್ಸವ ಹಾಗೂ ಕಿರು ಕಲ್ಯಾಣೋತ್ಸವ ದಾಸನಪುರ ಶ್ರೀದೇವಿ ಭೂದೇವಿ ಸಮೇತ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯಿತು""
ದಾಸನಪುರ : ತುಮಕೂರು ರಸ್ತೆ ಬೆಂಗಳೂರು ಉತ್ತರ ತಾಲೂಕು ಎಲ್ಲಿರುವ ದಾಸನಪುರ ಶ್ರೀದೇವಿ ಭೂದೇವಿ ಸಮೇತ ಶ್ರೀ ರಂಗನಾಥ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ದಲ್ಲಿ 12 ವಾರ್ಷಿಕೋತ್ಸವ ಹಾಗೂ ಇದು ಕಲ್ಯಾಣೋತ್ಸವ ಸೇವಾ ಸಮಿತಿ ಆಡಳಿತ ಮಂಡಳಿಯಿಂದ ಹಾಗೂ ಕಾರ್ಯಕಾರಿ ಸಮಿತಿಯಿಂದ ವೈಕುಂಠ ಏಕಾದಶಿ ಸೇವಾ ಸಮಿತಿ ಗಳಿಂದ ಹಮ್ಮಿಕೊಳ್ಳಲಾಗಿತ್ತು ಹಾಗೆ ಶನಿವಾರ ಬೆಳಗ್ಗೆ 5 ರಿಂದ ಸುಪ್ರಭಾತ ಸೇವೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಕುಂಕುಮಾರ್ಚನೆ, ನಿವೇದನೆ ಅಷ್ಟ ವಧಾನ ಸೇವೆ ರಾಷ್ಟ್ರ ಆಶೀರ್ವಾದ ಈ ಕಲ್ಯಾಣೋತ್ಸವ 10:30ಕ್ಕೆ ಸುಮಂಗಳಿಯರಿಂದ ಪ್ರಾರಂಭಗೊಂಡಿದ್ದು ಸುಮಾರು ಎರಡು ವರೆ ಗಂಟೆ ಗಳ ಕಾಲ ಗೋಧೂಳಿ ಲಗ್ನದಲ್ಲಿ ಸ್ವಾಮಿಯವರಿಗೆ ಉಯ್ಯಾಲೋತ್ಸವ ಹಾಗೂ ಮಹಾ ಮಂಗಳಾರತಿ ಶಯನೋತ್ಸವ ತೀರ್ಥ ಪ್ರಸಾದದ ವಿನಿಯೋಗದ ಮೂಲಕ ದಾಸನಪುರದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಂಗಾಚಾರ್ಯರು , ಕೃಷ್ಣಮೂರ್ತಿಯವರು ಡಿ .ಎನ್ , ಕುಮಾರ್ ರವರು, ಸಂಜೀವಿನಾಚಾರ್ಯ ಅರ್ಚಕರಿಂದ ಕಲ್ಯಾಣೋತ್ಸವ ಬಹಳ ವಿಜೃಂಭಣೆಯಿಂದ ವಿಶೇಷವಾಗಿ ನೆರವೇರಿತು ಈ ಕಾರ್ಯಕ್ರಮದಲ್ಲಿ ಜಯಮ್ಮ ಮತ್ತು ಶ್ರೀರಾಮಕೃಷ್ಣಪ್ಪನವರ ಮಕ್ಕಳಾದ ರಾಮ ಲಕ್ಷ್ಮಮೂರ್ತಿ ವಕೀಲರು ಕುಟುಂಬದಿಂದ ಅನ್ನ ಪ್ರಸಾದ ಸೇವೆಯನ್ನು ಮಾಡಿದರು ಎಂದು ಸೇವಾ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷರು ಆರ್ ಲಕ್ಷ್ಮಣ್ ಮೂರ್ತಿಯವರು ತಿಳಿಸಿದರು ಹಾಗೆ ಈ ಕಾರ್ಯಕ್ರಮದಲ್ಲಿ ದಾಸನಪುರ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಅಧಿಕಾರಿಗಳು ಅಕ್ಕಪಕ್ಕದ ಎಲ್ಲ ಗ್ರಾಮಸ್ಥರು ಸೇವಾ ಸಮಿತಿಯ ಸದಸ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಕ್ತಾದಿಗಳು ಯಶಸ್ವಿಯಾಗಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು