ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬೆಂಗಳೂರು :  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಮಾರ್ಗ ಸಂಖ್ಯೆ 500-HS (ಸರ್ಜಾಪುರ – ಹೆಬ್ಬಾಳ), ಮಾರ್ಗ ಸಂಖ್ಯೆ 8D (ಸರ್ಜಾಪುರ – ಕೆಂಪೇಗೌಡ ವಿಮಾನ ನಿಲ್ದಾಣ) ಮತ್ತು ಮಾರ್ಗ ಸಂಖ್ಯೆ 368 (ಶಿವಾಜಿನಗರ ಬಸ್ ನಿಲ್ದಾಣ – ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ) ಹವಾನಿಯಂತ್ರಿತ ಮತ್ತು ಸಾಮಾನ್ಯ ಸಾರಿಗೆ ಸೇವೆಗಳನ್ನು 
ದಿನಾಂಕ 2೦.೦2.2024 ರಿಂದ ಜಾರಿಗೆ ಬರುವಂತೆ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯವರು ದಿನಾಂಕ:2೦.೦2.2024 ರಂದು ಬೆಳಿಗೆ 10:00 ಗಂಟೆಗೆ ಸರ್ಜಾಪುರ ಬಸ್‌ ನಿಲ್ದಾಣದ ಬಳಿ ಉದ್ಘಾಟಿಸಿದರು.
       


ಈ ಸಂದರ್ಭದಲ್ಲಿ ಆನೇಕಲ್  ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ.ಶಿವಣ್ಣ, ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಅರ್, ಭಾ.ಆ.ಸೇ., ನಿರ್ದೇಶಕರು (ಮಾತo) ರವರಾದ ಶ್ರೀಮತಿ ಶಿಲ್ಪ ಎಂ, ಭಾ.ಆ.ಸೇ,  ಶ್ರೀಮತಿ ಸುನೀತಾ ಎಂ, ಅಧ್ಯಕ್ಷರು, ಸರ್ಜಾಪುರ ಗ್ರಾ.ಪಂ,ಶ್ರೀ ಎ ಸತೀಶ್ ಕುಮಾರ್, ಉಪಾಧ್ಯಕ್ಷರು, ಸರ್ಜಾಪುರ ಗ್ರಾ.ಪಂ, ಆನೇಕಲ್ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು, ಮಾಜಿ ಕಾಂಗ್ರೆಸ್ ಸದಸ್ಯರು ಮತ್ತು ಸಂಸ್ಥೆಗಳ ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.
 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News