ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಖಾಯಂ ಯಾತಿ ಮಾಡಿ ಎಂದು ಅನಿರ್ದಿಷ್ಟ ಮುಷ್ಕರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು""
ಬೆಂಗಳೂರು: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಾದ್ಯಂತ ಮುಷ್ಕರವನ್ನು ಆಯಾ ಜಿಲ್ಲೆಗಳ ಜಿಲ್ಲಾ ಕಚೇರಿ ಮುಂದೆ ನವಂಬರ್ 23 ರಿಂದ ಮುಷ್ಕರ ವನ್ನು ಮಾಡುತ್ತಿದ್ದಾರೆ ಹಾಗೆ ಡಿಸೆಂಬರ್ 7 ದಿನಾಂಕದಂದು ಬೆಳಗಾವಿ ಅಧಿವೇಶನ ನಡೆಯುವ ವೇಳೆ ಇಡೀ ರಾಜ್ಯದ ಜಿಲ್ಲಾ ವಾರು ಅತಿಥಿ ಉಪನ್ಯಾಸಕರು ಸೇರಿ ಮುಷ್ಕರವನ್ನು ಬೆಳಗಾವಿ ಸದನದ ಮುಂದೆ ಹಮ್ಮಿ ಕೊಂಡಿದ್ದರು. ಆದರೂ ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಎಂ ಸಿ ಈ ವೇಳೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ ಆದರೂ ಅತಿಥಿ ಉಪನ್ಯಾಸಕರು ಈ ದಿನದವರೆಗೂ ಮುಷ್ಕರದಲ್ಲಿ ತೊಡಗಿದ್ದಾರೆ ರಾಜ್ಯದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಬೋಧನಾ ಕಾರ್ಯದಲ್ಲಿ ತೊಡಗಿಲ್ಲ ಎಂದು ಘಟಕದ ಎಲ್ಲಾ ಅತಿಥಿ ಉಪನ್ಯಾಸಕರು ತಿಳಿಸಿದರು .ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಅತಿಥಿ ಉಪನ್ಯಾಸಕರು ಮುಷ್ಕರವನ್ನು ಈ ಒಂದು ದಿನದ ಮಟ್ಟಿಗೆ ಬೆಂಗಳೂರಿನ ಸ್ವತಂತ್ರ ಉದ್ಯಾನ ವನದಲ್ಲಿ ಸೇರಿರುವ ಅತಿಥಿ ಉಪನ್ಯಾಸಕರು ನಾಳೆಯ ಕೂಡ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು ಈ ಮುಷ್ಕರಕ್ಕೆ ಜಂಟಿ ನಿರ್ದೇಶಕರಾದ ಅಪ್ಪಾಜಿ ಗೌಡರೂ ಯಾವುದೇ ಭರವಸೆಯನ್ನು ನೀಡದೆ ಕಾಲಾವಕಾಶ ಬೇಕೆಂದು ತಿಳಿಸಿ ಹಾಗೆ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಉಪನ್ಯಾಸಕರು ಈ ಮೂಲಕ ಪತ್ರಿಕಾ ವರದಿಗಾರರಿಗೆ ತಿಳಿಸಿದರು. ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಬೇಡಿಕೆ ನಮ್ಮನ್ನು ಖಾಯಂ ಮಾತಿ ಮಾಡುವವರೆಗೂ ನಮ್ಮ ಹೋರಾಟ ಎಂದು ತಿಳಿಸಿ ಈ ದಿನದ ಹೋರಾಟಕ್ಕೆ ನಾಂದಿಯನ್ನು ಹಾಡಿದ್ದಾರೆ