ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಅಸ್ಪøಶ್ಯತೆ ನಿವಾರಿಸಲು ಶ್ರಮಿಸಿ: ಗೋವಿಂದ ಕಾರಜೋಳ
ಬೆಂಗಳೂರು ಕರ್ನಾಟಕದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಅಸ್ಪøಶ್ಯತೆ ಆಚರಣೆ ಇನ್ನೂ ಇದೆ. ಇದೊಂದು ದೊಡ್ಡ ಕಳಂಕ. ಇದನ್ನು ಹೋಗಲಾಡಿಸಲು ನಾವೆಲ್ಲರೂ ಪ್ರಯತ್ನ ಮಾಡಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸಂವಿಧಾನಕರ್ತೃ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮ ಗುರುಗಳು, ಮಠಾಧೀಶರು, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅಸ್ಪøಶ್ಯತೆ ಹೋಗಲಾಡಿಸಲು ಕಟ್ಟುನಿಟ್ಟಾಗಿ ಪ್ರಯತ್ನ ಮಾಡಬೇಕೆಂದು ಅವರು ಆಶಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ದೇಶದ ಉದ್ದಗಲಕ್ಕೆ ನಾವು ಆಚರಿಸುತ್ತೇವೆ. ಕೇವಲ ಆಚರಣೆಯಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವ ಉದ್ದೇಶಕ್ಕಾಗಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು ಎಂಬುದನ್ನು ನಾವು ಅರ್ಥ ಮಾಡಿಕೊಂಡು ಅಸ್ಪøಶ್ಯತೆ ಆಚರಣೆಯನ್ನು ಸಂಪೂರ್ಣ ದೂರ ಮಾಡಬೇಕಿದೆ ಎಂದು ತಿಳಿಸಿದರು.
ಕೊಳಕು ಮನಸ್ಸುಗಳಷ್ಟೇ ಅಸ್ಪøಶ್ಯತೆ ಆಚರಿಸುತ್ತವೆ ಎಂದು ಹಿರಿಯರು ಹೇಳಿದ್ದಾರೆ. ಅಸ್ಪøಶ್ಯತೆ ಆಚರಣೆಯಿಂದ ದೇವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಶೋಷಿಸುವುದರ ವಿರುದ್ಧ ಬಸವಣ್ಣನವರು ಸಿಡಿದೆದ್ದು, ಅಸ್ಪøಶ್ಯತೆ, ಬಡವ- ಬಲ್ಲಿದನೆಂಬ ಭೇದ ಇಲ್ಲದ ಸುಂದರ ಸಮಾಜ ನಿರ್ಮಿಸಲು ಪಣ ತೊಟ್ಟಿದ್ದರು ಎಂದು ವಿಶ್ಲೇಷಿಸಿದರು.
ನಾವು ಸಮಾಜ ಸುಧಾರಣೆಯತ್ತ ಹೆಜ್ಜೆ ಹಾಕಬೇಕಿದೆ. ಎಲ್ಲರೂ ಕೂಡ ಅಸ್ಪøಶ್ಯತೆ ನಿವಾರಣೆಗೆ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮತ್ತು ಕಾರ್ಯಾಲಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News