ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಎಸ್ ಜೆ ಆರ್ ಸಿ ಮಹಿಳಾ ಪದವಿ ಕಾಲೇಜಿನಲ್ಲಿ"ಸುವರ್ಣ ಕರ್ನಾಟಕ ರಾಜ್ಯೋತ್ಸವ" ಹಾಗೂ ನಾಡು ನುಡಿ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು "" ಬೆಂಗಳೂರು: ಅರ್ಥಪೂರ್ಣವಾಗಿದ್ದ ಪ್ರಸ್ತುತ ಕಾರ್ಯಕ್ರಮಕ್ಕೆ ನಮ್ಮ ನಾಡಿನ ಖ್ಯಾತ ಕವಯಿತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಷರೀಫರವರು ಉದ್ಘಾಟಕರಾಗಿ ಆಗಮಿಸಿದ್ದರು. ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ ಎಂಬುದನ್ನು ಹಲ್ಮಿಡಿ ಶಾಸನ, ಕವಿರಾಜಮಾರ್ಗದಂಥ ಹಿನ್ನೆಲೆಯಲ್ಲಿ ತಿಳಿಸಿದರು. ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದ ಶ್ರೇಯಸ್ಸು ಶಾಂತಕವಿ. ಹುಯಿಳುಗೊಳ ನಾರಾಯಣರಾಯರು, ಕಾವ್ಯಾನಂದ, ಚನ್ನವೀರ ಕಣವಿ, ಪುತಿನ, ಕುವೆಂಪು ಅವರಂಥ ನೂರಾರು ಜನ ಕನ್ನಡದ ಕಟ್ಟಾಳುಗಳಿಗೆ ಸಲ್ಲುತ್ತದೆ ಎಂದರು. ಹಾಗೆಯೇ ಕನ್ನಡ ಭಾಷೆಯು ಧರ್ಮಾತೀತ ಭಾಷೆಯಾಗಿರುವುದರಿಂದಲೇ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ದೊರೆತಿದೆ ಎಂದು ಉಲ್ಲೇಖಿಸುತ್ತ ಕನ್ನಡ ನುಡಿಗ ದೊರೆತಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಯ ಮಹತ್ವವನ್ನು ಹಾಗೂ ಗೌರವವನ್ನು ಹೆಚ್ಚಿಸುತ್ತವೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಹುಟ್ಟೂರಿನ ಪ್ರಭಾವದಿಂದ ತಾವು ಹೇಗೆ ಕನ್ನಡ ಅಭಿಮಾನಿಯಾದರು ಎಂಬುದನ್ನು ಹೇಳುತ್ತಲೇ ಉತ್ತರ ಕರ್ನಾಟಕದ ಜನಜೀವನದ ಸ್ಥಿತಿಗತಿಯನ್ನು ಅಲ್ಲಿನ ಹೆಣ್ಣು ಮಕ್ಕಳ ಜೀವನ ವಿಧಾನವನ್ನು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ತಿಳಿಸಿಕೊಟ್ಟರು. ಅಂತಿಮವಾಗಿ ಇಂದಿನ ಕನ್ನಡ ಪಠ್ಯಗಳಲ್ಲಿ ರಾಜಕಾರಣ ತೂರದಿರಲಿ ಎಂಬ ಕಿವಿ ಮಾತನ್ನು ಹೇಳುತ್ತಾ, "ಕನ್ನಡವೇ ನಮ್ಮೆಲ್ಲರ ಉಸಿರಾಗಿರಬೇಕು" ಎಂದರು.
ಈ ಸಮಯದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳ ವೈವಿಧ್ಯತಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರ ತೀರ್ಪುಗಾರರಾಗಿ ಡಾ. ಪೂರ್ಣಿಮಾ ಎಸ್ ಕನ್ನಡ ವಿಭಾಗದ ಮುಖ್ಯಸ್ಥರು, ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ಡಾ.ಮಮತಾ ಸಾಲಿಮಠ, ಎಸ್ ಜೆ ಆರ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳು ಭಾಗಿಯಾಗಿದ್ದರು. ವಿದ್ಯಾರ್ಥಿನಿಯರು ವಿವಿಧ ಜಿಲ್ಲೆಗಳ ಪರಂಪರೆಯ ವೈವಿಧ್ಯತೆಗಳನ್ನು ಸೊಗಸಾಗಿ ಪ್ರದರ್ಶಿಸಿ ತೀರ್ಪುಗಾರರ ಅಪಾರ ಮೆಚ್ಚುಗೆಗೆ ಪಾತ್ರರಾದರು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾದ ಗೋ ಸಂರಕ್ಷರು, ಕನ್ನಡ ಪರ ಚಿಂತಕರಾಗಿದ್ದ ಮಹೇಂದ್ರ ಮುನ್ನೊತ್ ಅವರು ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿ ಗೋವುಗಳ ಸಂರಕ್ಷಣೆಗೆ ಸಂಬಂಧಿಸಿದ ಅಭಿಮಾನದ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ನಟರು ರಂಗಕರ್ಮಿಗಳೂ ಕಲಗಂಗೋತ್ರಿ ನಾಟಕ ತಂಡದ ಸಂಸ್ಥಾಪಕರೂ ಆದ ಡಾ.ಬಿ. ವಿ. ರಾಜಾರಾಂ ಅವರು ಕನ್ನಡ ಭಾಷೆಯ ಉಳಿಕೆ ಬಳಕೆಗೆ ಕನ್ನಡಿಗರಾದ ನಾವುಗಳು ಏನೇನು ಮಾಡಬೇಕೆಂಬುದನ್ನು ಕನ್ನಡಿಗರ ಕರ್ತವ್ಯಗಳ ಕುರಿತಾಗಿ ಎಚ್ಚರಿಸಿದರು. ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಎಸ್ .ಆರ್ ವೀರಭದ್ರಯ್ಯನವರು ಮತ್ತು ಸಂಸ್ಥೆಯ ಸದಸ್ಯರಾದ ಮೃತ್ಯುಂಜಯ ಬೂದಿಹಾಳಮಠ, . ಸಿದ್ದಲಿಂಗೇಶ್ವರ ಗುಂಡಗಟ್ಟಿ . ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ದರಾಜುರವರು ಕನ್ನಡ ವಿಭಾಗದ ಮುಖ್ಯಸ್ಥೆ ಪುಷ್ಪ ಹಾಗೂ ಕಾವ್ಯ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು