ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸರ್ಕಾರಿ ಆರ್ ಸಿ ಕಾಲೇಜಿನಲ್ಲಿ ಬೃಹತ್‌  ಸ್ವಯಂಪ್ರೇರಿತ ರಕ್ತದಾನ ಶಿಬಿರ -2023 ಏರ್ಪಡಿಸಲಾಗಿತ್ತು""

ಬೆಂಗಳೂರು:“ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಿದಂತಾಗುತ್ತದೆ” ಎಂದು ಲೆ. ಕರ್ನಲ್‌ ದಾಮೋದರನ್‌ ಪಿ.ಪಿ., ಕಮಾಂಡಿಂಗ್‌ ಆಫೀಸರ್‌, 3 ಕರ್ನಾಟಕ ಬೆಟಾಲಿಯನ್‌ ಎನ್.ಸಿ.ಸಿ., ಅಭಿಪ್ರಾಯಪಟ್ಟರು. ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ,ಇತ್ತೀಚೆಗೆ ನಗರದ ಸರ್ಕಾರಿ ರಾಂನಾರಾಯಣ್‌ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬೃಹತ್‌  ಸ್ವಯಂಪ್ರೇರಿತ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು “ ಎನ್.ಸಿ.ಸಿ. ಕೆಡೆಟ್ಸ್‌ಗಳು ಹಾಗೂ ಇತರೆ ವಿದ್ಯಾರ್ಥಿಗಳು ರಕ್ತದಾನ ಮಾಡಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು” ಎಂದು ನುಡಿದರು.
ರೋಟರಿ ಕ್ಲಬ್‌ ಬೆಂಗಳೂರು ಶಂಕರ ಪಾರ್ಕ್‌ ನ ಅಧ್ಯಕ್ಷರಾದ ರೋ. ಗಿರೀಶ್‌ ಡಿ. ಕುಲಕರ್ಣಿ ಯವರು ಮಾತನಾಡಿ “ಯುವಕರು ರಕ್ತದಾನದಂತಹ ಮಹಾ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿಯನ್ನು ತೋರಿಸಬೇಕೆಂದು” ನುಡಿದರು.
ಹೆಚ್.ಡಿ.ಎಫ್.ಸಿ. ಬ್ಯಾಂಕ್‌ ಆಪರೇಷನ್ಸ್‌, ಬೆಂಗಳೂರು ನ ಉಪಾಧ್ಯಾಕ್ಷರಾದ  ಲಕ್ಷ್ಮಿನಾರಾಯಣ ವೈ. ರವರು ಯುವ ವಿದ್ಯಾರ್ಥಿಗಳಿಗೆ ಪ್ರೇರಣಾನುಡಿಗಳನ್ನಾಡಿದರು. ಈ ಶಿಬಿರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಚಂದ್ರಶೇಖರ ರವರು ವಹಿಸಿದ್ದರು. 
ಈ ಶಿಬಿರದಲ್ಲಿ ಒಟ್ಟು 300 ಯೂನಿಟ್‌ ರಕ್ತ ಸಂಗ್ರಹಣೆಯಾಯಿತು. ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಸಂಕಲ್ಪ್‌ ಫೌಂಡೇಶನ್‌ನ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. 
ಲೆ. ಕರ್ನಲ್‌ ಅನಿಲ್‌ ಕುಮಾರ್‌ ಪಿ.ಪಿ., ಆಡಳಿತಾಧಿಕಾರಿಗಳು,  3 ಕರ್ನಾಟಕ ಬೆಟಾಲಿಯನ್‌ ಎನ್.ಸಿ.ಸಿ., ರೋ. ಜಗದೀಶ್‌, ಕಾರ್ಯದರ್ಶಿಗಳು,  ರೋಟರಿ ಕ್ಲಬ್‌ ಬೆಂಗಳೂರು ಶಂಕರ ಪಾರ್ಕ್‌, ರೋ. ರಾಮಮೂರ್ತಿ, ನಿರ್ದೇಶಕರು, ಸಾಮಾಜಿಕ ಸೇವೆಗಳು,  ರೋಟರಿ ಕ್ಲಬ್‌ ಬೆಂಗಳೂರು ಶಂಕರ ಪಾರ್ಕ್‌, ರೋ. ವಿ.ಆರ್.‌ ತ್ರಿಪುರಾ, ನಿಕಟ ಪೂರ್ವ ಅಧ್ಯಕ್ಷರು, ರೋಟರಿ ಕ್ಲಬ್‌ ಬೆಂಗಳೂರು ಶಂಕರ ಪಾರ್ಕ್‌, ಭಾರತೀಯ ರೆಡ್‌ ಕ್ರಾಸ್‌ ಸಂಯೋಜಕರಾದ  ಸತೀಶ,  ನರೇಶ್‌ ಬಾಬು, ರಕ್ತನಿಧಿ ವೈದ್ಯಾಧಿಕಾರಿಗಳು,  ಮಧುಮತಿ ರಾವ್‌, ಸಹ-ಉಪಾಧ್ಯಕ್ಷರು, ಹೆಚ್.ಡಿ.ಎಫ್.ಸಿ. ಬ್ಯಾಂಕ್‌ ಆಪರೇಷನ್ಸ್‌, , ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಏಜಾಜ್‌ ಅಹಮದ್‌ ಖಾನ್‌, ಯುವ ರೆಡ್‌ ಕ್ರಾಸ್‌ ಸಂಚಾಲಕರಾದ ಡಾ. ಎಂ.ಜಿ.ಹರೀಶ್‌, ಎನ್.ಸಿ.ಸಿ. ಅಧಿಕಾರಿಗಳಾದ ಲೆ. ಡಾ. ಪ್ರಕಾಶ್‌ ಎಂ., ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News