ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸಸ್ ಪದವಿ ಪ್ರಮಾಣ ಪತ್ರವನ್ನು ಹಾಗೂ ನ್ಯಾಕ್ ಎ ++,ಪ್ರಮಾಣ ಪತ್ರವನ್ನು ಅನಾವರಣ ಮಾಡಿದರು""
ಬೆಂಗಳೂರು :ನಗರದ ಪ್ರತಿಷ್ಠಿತ ಕಾಲೇಜ್ ಆದ
ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸಸ್ ತನ್ನ ಕ್ಯಾಂಪಸ್ನಲ್ಲಿ ಅಕ್ಟೋಬರ್ 31, 2023 ರಂದು ಮಂಗಳವಾರ 18 ನೇ ಪದವಿ ದಿನವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು, CSIR-CFTRI ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, , ಶೈಕ್ಷಣಿಕ ಮೆರವಣಿಗೆಯೊಂದಿಗೆ ಮೂಲಕ ಚಾಲನೆ ನೀಡುವ ಮೂಲಕ ಪ್ರಾರಂಭವಾಯಿತು.
ಪದ್ಮಶ್ರೀ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮತ್ತು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಅವರು NAAC A++ (3.58 CGPA) ಪ್ರಮಾಣಪತ್ರವನ್ನು ಬಿಡುಗಡೆ ಮಾಡಿದರು . ಇದು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ನಿರಂತರ ಸುಧಾರಣೆಗೆ ತನ್ನ ಬದ್ಧತೆಗಾಗಿ ಪದ್ಮಶ್ರೀ ಸಂಸ್ಥೆಯ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ.
ಇದೇ ಸಂದರ್ಭದಲ್ಲಿ
ಗೌರವ ಅತಿಥಿ, CSIR-CFTRI ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಪದವಿ ದಿನವನ್ನು ಉದ್ಘಾಟಿಸಿದರು. ನಂತರ ಅವರು ಪದವೀಧರರನ್ನು ಅಭಿನಂದಿಸಿದರು. ಹಾಗೆ ಶಿಕ್ಷಣದ ವ್ಯಾಪ್ತಿ, ಮೌಲ್ಯದ ಬಗ್ಗೆ ಶಿಕ್ಷಣ ಕಲಿತವ ದೇಶದ ಅಭಿವೃದ್ಧಿ ಹಾಗೂ ತನ್ನ ಉತ್ತಮ ಜೀವನವನ್ನು ನಡೆಸಲು ಸಹಕಾರಿಯಾಗುವಂತದ್ದು ಹಾಗೆ ಕತ್ತಲಿಂದ ಬೆಳಕಿನ ಕಡೆ ಸಾಗಲು ಶಿಕ್ಷಣ ತುಂಬಾ ಅವಶ್ಯಕತೆ ಇದೆ ಹಾಗೆ ದೇಹದ ಆರೋಗ್ಯವು ಅಷ್ಟೇ ಅವಶ್ಯಕತೆ ಇದೆ ಆರೋಗ್ಯಕರವಾಗಿರುವಂತಹ ಶರೀರಕ್ಕೆ ಬೇಕಾಗಿರೋದು ರಕ್ತ ಚಲನೆ ಮುಖ್ಯ ನಮ್ಮ ಶರೀರಕ್ಕೆ ಬೇಕಾಗಿರೋದು ಹವಾಮಾನ ಹಾಗೆ ಬಗ್ಗೆ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡಿದರು. ಅವರು ತಮ್ಮ ಅನುಭವದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು ತಮ್ಮ ಜೀವನ ಹೇಗಿರಬೇಕು ಎಂಬುದರ ಕುರಿತು ಕೆಲವು ಮೌಲ್ಯಗಳನ್ನು ತಿಳಿಸಿದರು. ಹಾಗೆ ಆಹಾರ ಪದ್ಧತಿ, ಸಂಸ್ಕೃತಿ, ಸಂಪ್ರದಾಯ, ತಿಪಡಿಸಿದರು
ಪದ್ಮಶ್ರೀ ಸಂಸ್ಥೆಯ ವಿವಿಧ ವಿಭಾಗಗಳಿಂದ ಬೆಂಗಳೂರು ವಿಶ್ವವಿದ್ಯಾಲಯದ 30 ರಾಂಕ್ ಗಳನ್ನು ಮತ್ತು 9 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ನಿರ್ವಹಣೆ ಮತ್ತು ವಿಜ್ಞಾನ. ಡಾ.ಶ್ರೀದೇವಿ ಅವರು ಎಲ್ಲಾ ವಿಶ್ವವಿದ್ಯಾನಿಲಯ ರ್ಯಾಂಕ್ ಪಡೆದವರಿಗೆ ಪದಕಗಳನ್ನು ಪ್ರದಾನ ಮಾಡಿದರು.
ಮುಖ್ಯ ಅತಿಥಿ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ.ಜಯಕರ್ ಎಸ್ ಎಂ ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸಸ್ನ 374 ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡಿದರು.
,ಪದ್ಮಶ್ರೀ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಟಿ ಕೆ ನಾರಾಯಣಪ್ಪ, ಅಧ್ಯಕ್ಷ ಸತೀಶ್, ನಿರ್ದೇಶಕ ಪ್ರೊ.ರಾಜೇಶ್ ಶೆಣೈ ಮತ್ತು ಪ್ರಾಂಶುಪಾಲರಾದ ಡಾ.ಅನುರಾಧ ಎಂ ಎಂಬಿಎ ನಿರ್ದೇಶಕ ಡಾ.ಕೆ.ವೈ.ರೆಡ್ಡಿ ವಂದನಾರ್ಪಣೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು