ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಎಸ್ ಜೆ ಆರ್ ಮಹಿಳಾ ವಿದ್ಯಾಲಯದಲ್ಲಿ ಹಿಂದಿ ಮೌಲ್ಯಮಾಪನ ಕಾರ್ಯದ ಮುಕ್ತಾಯ ದಿನದಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರ ಸಂಘದ ವತಿಯಿಂದ ಸನ್ಮಾನ ಹಾಗೂ ಪುಸ್ತಕ  ಬಿಡುಗಡೆ ಮಾಡುವ ಕಾರ್ಯಕ್ರಮ ""
ಬೆಂಗಳೂರು: ನಗರದ ಎಸ್ ಜೆ ಆರ್ ಮಹಿಳಾ ವಿದ್ಯಾಲಯದಲ್ಲಿ ಹಿಂದಿ ಮೌಲ್ಯಮಾಪನ ಕಾರ್ಯದ ಮುಕ್ತಾಯ ದಿನದಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರ ಸಂಘದ ವತಿಯಿಂದ ಸನ್ಮಾನ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .  ಕೆ..ಎಲ್.ಇ. ಕಾಲೇಜಿನ  ಅಧ್ಯಾಪಕರಾದ  ಡಾ. ಬಿ ಎಂ ಹಿರೇಮಠ್ ರವರು ಬರೆದ ಪುಸ್ತಕ 'ಜಗದೀಶ್ ಚಂದ್ರಕ್ಕೆ ಉಪನ್ಯಾಸೋ ಮೇ   ಗ್ರಾಮೀಣ ಸಂವೇದನ ' ಪುಸ್ತಕವನ್ನು ಇದೆ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರೇಮಾ ಸಿದ್ದರಾಜು ರವರು   ಬಿಡುಗಡೆ ಮಾಡಿದರು ನಂತರ  ಭಾರತ ದೇಶದ ವಿವಿಧತೆಯಲ್ಲಿ ಏಕತೆಯ ಬಗ್ಗೆ ವಿವರಿಸುತ್ತಾ  ಭಾಷೆಯ ಬಗ್ಗೆ ಪ್ರತಿಯೊಬ್ಬ ಮನುಷ್ಯನು ಒಗ್ಗಟ್ಟಿನಿಂದ ಇರಬೇಕು ಹಾಗೂ ಭಾಷೆಯ ಪ್ರಸಾರ ಮತ್ತು ಪ್ರಚಾರ ಮಾಡಬೇಕು ಹೀಗೆ ಭಾಷೆಯ ಮಹತ್ವ ಬಗ್ಗೆ  ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಡಾ. ಪ್ರೇಮಾ ಸಿದ್ದರಾಜು ರವರನ್ನು ಸನ್ಮಾನಿಸಲಾಯಿತು. ಹಾಗೂ  ಮೌಲ್ಯಾಂಕನ ಕಾರ್ಯದ ಚೇರ್ಮನ್ ಡಾ. ವಿನಯ್ ಕುಮಾರ್ ಯಾದವ್ ಅವರನ್ನು ಸನ್ಮಾನಿಸಲಾಯಿತು.. ತದನಂತರ ಡಾ. ಬಿ. ಎಂ. ಹಿರೇಮಠ್ ಅವರು ತಾವು ರಚಿಸಿರುವ "ಜಗದೀಶ್ ಚಂದ್ರ ಕೆ ಅವರ ಉಪನ್ಯಾಸದಲ್ಲಿ ಗ್ರಾಮೀಣ ಸಂವೇದನ"  ಪುಸ್ತಕದಲ್ಲಿ
ಗ್ರಾಮೀಣ ಜೀವನದಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆ, ಅಸ್ಪೃಶ್ಯತೆ, ವಿವಿಧ ರೀತಿಯ ಶೋಷಣೆ, ಶಿಕ್ಷಣ, ಬಡತನ, ಧಾರ್ಮಿಕ ಮೂಢನಂಬಿಕೆ ಮತ್ತು ಶತಮಾನಗಳಿಂದ ದಲಿತರ ಮೇಲಿನ ದೌರ್ಜನ್ಯದ ಪ್ರತ್ಯಕ್ಷ ಚಿತ್ರಣದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಬೀರಮಣಿ ಪಾಂಡೆ ಡಾ . ಇಂದುಮತಿ,, ಡಾ. ಗೀತಾ, ಸಂಗೀತ ಹಾಗೂ ನಗರ ವಿಶ್ವವಿದ್ಯಾಲಯದ ಹಲವು ಕಾಲೇಜಿನ ಹಿಂದಿ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News