ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಎಚ್ ಪಿಸಿಎಲ್, ಪೆಟ್ರೋಮಿನ್ ನಿಂದ 16 ಎಕ್ಸ್ ಪ್ರೆಸ್ ಸೇವಾ ಕೇಂದ್ರಗಳ ಪ್ರಾರಂಭ
ಬೆಂಗಳೂರು, ಚೆನ್ನೈನಲ್ಲಿ ಕಾರ್ಯಾರಂಭಿಸಲಿವೆ ಎಕ್ಸ್ ಪ್ರೆಸ್ ಸರ್ವಿಸ್ ಸೆಂಟರ್ ಗಳು
ಭಾರತದಲ್ಲಿ ಆಟೋಮೊಬೈಲ್ ಸೇವಾ ಉದ್ಯಮದಲ್ಲಿ ಕ್ರಾಂತಿ
ಬೆಂಗಳೂರು 16th Octomber 2023: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL India), ಸೌದಿ ಅರೇಬಿಯಾ ಮೂಲದ ಪೆಟ್ರೋಮಿನ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ತನ್ನ ಮೊದಲ ಹಂತದ 16 ಎಕ್ಸ್ ಪ್ರೆಸ್ ಸೇವಾ ಕೇಂದ್ರಗಳನ್ನು ಬೆಂಗಳೂರು ಮತ್ತು ಚೆನ್ನೈನಲ್ಲಿ ಪ್ರಾರಂಭಿಸಿದೆ. ಇದು ದೇಶದಲ್ಲೇ ಮೊದಲನೆಯದಾಗಿದೆ. ಎಚ್ ಪಿ ಪೆಟ್ರೋಮಿನ್ ಎಕ್ಸ್ ಪ್ರೆಸ್ ಸೆಂಟರ್ ಗಳನ್ನು ನಗರದಲ್ಲಿನ ಎಚ್ ಪಿ ಪೆಟ್ರೋಲ್ ಬಂಕ್ ಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದು, ದೇಶದಲ್ಲೇ ಆಟೋಮೊಬೈಲ್ ಸೇವೆಯನ್ನು ಗ್ರಹಿಸುವ ಮತ್ತು ನಿರ್ವಹಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 11, 2023 ರಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಹಾಗೂ ಸೌದಿ ಅರೇಬಿಯಾದಲ್ಲಿ ಲೂಬ್ರಿಕಂಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಪೆಟ್ರೋಮಿನ್ ಕಾರ್ಪೊರೇಶನ್ ಮತ್ತು ಎಚ್ ಪಿಸಿಎಲ್ ಇಂಡಿಯಾ ನಡುವೆ ಸಹಿ ಹಾಕಲಾದ ಒಪ್ಪಂದದ ಭಾಗವಾಗಿ ಈ ಯೋಜನೆ ರೂಪುಗೊಂಡಿದೆ. ಆಟೋಮೊಬೈಲ್ ಸೇವಾ ವಿಭಾಗದಲ್ಲಿ ಟೆಕ್ ಚಾಲಿತ ಇಕೋಸಿಸ್ಟಮ್ ನಿರ್ಮಿಸಲು ವ್ಯವಹಾರ ಪಾಲುದಾರ ಸ್ಪೇರ್ ಐಟಿ ಯೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಮಿನ್ ಕಾರ್ಪೊರೇಶನ್ ಈಗಾಗಲೇ ತಂತ್ರಜ್ಞಾನ ವ್ಯವಹಾರವನ್ನು ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಸಹಯೋಗವನ್ನು ರೂಪಿಸಲಾಗಿದೆ.
ಲೂಬ್ರಿಕಂಟ್ ಮಾರುಕಟ್ಟೆಯಲ್ಲಿನ ಎರಡು ಜಾಗತಿಕ ದೈತ್ಯರ ನಡುವಿನ ಸಹಯೋಗ ಬ್ರ್ಯಾಂಡಿಂಗ್, ಪ್ರಧಾನ ಸ್ಥಳ ಮತ್ತು ಪ್ರವೇಶ, ಖಚಿತವಾದ ಗುಣಮಟ್ಟ, ಸಮಂಜಸವಾದ ಬೆಲೆ ಮತ್ತು ವಾರದ ಎಲ್ಲ ದಿನಗಳು ಸೇವೆಯ ಲಭ್ಯತೆ ವಿಷಯದಲ್ಲಿ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಈ ಉದ್ಯಮ ಮಾದರಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 5000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.
ಎಚ್ ಪಿಸಿಎಲ್ ಇಂಡಿಯಾ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪಿ.ಕೆ.ಜೋಶಿ, ಪೆಟ್ರೋಲಿಯಂ ಕಾರ್ಪೊರೇಶನ್ ನ ಜಿಸಿಇಒ ಕಲ್ಯಾಣ ಶಿವಜ್ಞಾನಂ, ಪೆಟ್ರೋಮಿನ್ ಇಂಡಿಯಾ ಹಾಗೂ ಸೌತ್ ಈಸ್ಟ್ ಏಷಿಯಾ ಸಿಇಒ ಸಂಜಯ್ ನಿಗಮ್, ಪೆಟ್ರೋಮಿನ್ ಇಂಡಿಯಾ ಎಂಡಿ ಅಶ್ನತ್ ಚೋಪ್ರಾ, ಎಚ್ ಪಿಸಿಎಲ್ ಇಂಡಿಯಾ ಮಾರ್ಕೆಟಿಂಗ್ ಡೈರೆಕ್ಟರ್ ಅಮಿತ್ ಗಾರ್ಗ್ ಹಾಗೂ ಎಚ್ ಪಿಸಿಎಲ್ ಬೋರ್ಡ್ ಆಫ್ ಡೈರೆಕ್ಟರ್ಸ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
1000 ಕೇಂದ್ರಗಳನ್ನು ತೆರೆಯುವ ಯೋಜನೆ
ಮುಂದಿನ ಕೆಲವು ವರ್ಷಗಳಲ್ಲಿ ದೇಶಾದ್ಯಂತ 1000 ಎಚ್ ಪಿ ಪೆಟ್ರೋಮಿನ್ ಎಕ್ಸ್ ಪ್ರೆಸ್ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗಿದೆ. ಪ್ರಸ್ತುತ 16 ಕೇಂದ್ರಗಳಲ್ಲಿ ಎಕ್ಸ್ ಪ್ರೆಸ್ ಸೇವೆಗಳನ್ನು ತೆರೆಯಲಾಗಿದೆ. ಎಕ್ಸ್ ಪ್ರೆಸ್ ಕೇಂದ್ರಗಳು ವಾಕ್- ಇನ್ ಗ್ರಾಹಕ, ಮೂಲ ನಿರ್ವಹಣಾ ಸೇವೆಗಳನ್ನು 30 ನಿಮಿಷಗಳ ದಾಖಲೆ ಸಮಯದಲ್ಲಿ ಪೂರ್ಣಗೊಳಿಸುತ್ತದೆ. ಸ್ಪೇರ್ ಐಟಿ ಒದಗಿಸಿದ ಅಪ್ಲಿಕೇಶನ್ ಸೇವೆಯನ್ನು ಸುಗಮಗೊಳಿಸಿದೆ. ಈ ತಂತ್ರಜ್ಞಾನ ಆಧಾರಿತ ವಾಹನ ಸೇವಾ ಕೇಂದ್ರಗಳು ಮೌಲ್ಯ ಆಧಾರಿತ, ಉತ್ತಮ ಗ್ರಾಹಕ ಅನುಭವವನ್ನು ನೀಡುತ್ತದೆ. ಸಾಮಾನ್ಯ ನಿರ್ವಹಣೆಯ ಅಗತ್ಯತೆಗಳನ್ನು ಪರಿಹರಿಸುವಲ್ಲಿ ಗುಣಮಟ್ಟದ ಸೇವೆ ಒದಗಿಸುತ್ತದೆ.
ಮೊಬೈಲ್ ಅಪ್ಲಿಕೇಶನ್ ಅನ್ನು ಆಧರಿಸಿ, ಗ್ರಾಹಕರು ತಮಗೆ ಹತ್ತಿರದ ಎಕ್ಸ್ ಪ್ರೆಸ್ ಸೇವಾ ಕೇಂದ್ರಗಳನ್ನು ಆಯ್ಕೆ ಮಾಡಬಹುದು. ವಾಕ್-ಇನ್ ಅಥವಾ ಆಪ್ ಮೂಲಕ ಪೂರ್ವ ಅಪಾಯಿಂಟ್ ಮೆಂಟ್ ಆಧಾರಿತ ಸೇವೆಯನ್ನು ಪಡೆಯಬಹುದು. ಕೇಂದ್ರಕ್ಕೆ ತಲುಪಿದಾಗ ಸೇವಾ ಕೇಂದ್ರದ ಸಾಪ್ಟ್ ವೇರ್ ಜಾಬ್ ಕಾರ್ಡ್ ತಯಾರಿಸುತ್ತದೆ. ಅಗತ್ಯವಿರುವ ವಿರ್ವಹಣೆ ಮತ್ತು ಅಂದಾಜು ವೆಚ್ಚದ ಕುರಿತು ತ್ವರಿತ ಮಾಹಿತಿ ಮೊಬೈಲ್ ಗೆ ಕಳುಹಿಸುತ್ತದೆ. ತಾಂತ್ರಿಕ ಪಾಲುದಾರರು ಸುಗಮ ಗ್ರಾಹಕ ಇಂಟರ್ಫೇಸ್ ಅನ್ನು ಮತ್ತಷ್ಟು ಖಚಿತಪಡಿಸುತ್ತಾರೆ. ಇಕೋ-ವಾಶ್ ಕೇವಲ 12 ನಿಮಿಷಗಳನ್ನು ತೆಗೆದುಕೊಲ್ಳುತ್ತದೆ. ಬೇಸಿಕ್ ನಿರ್ವಹಣೆಯನ್ನು 20 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.
ತಂತ್ರಜ್ಞಾನ ಚಾಲಿತ ಇಕೋ-ಸಿಸ್ಟಮ್ ವ್ಯವಸ್ಥೆ ಆಟೋಮೊಬೈಲ್ ಉದ್ಯಮದಲ್ಲಿ ಎಲ್ಲ ಸಂಭಾವ್ಯ ಮಾದರಿಗಳು ಮತ್ತು ಬ್ರ್ಯಾಂಡ್ ಗಳೊಂದಿಗೆ ವ್ಯವಹರಿಸುವುದರಿಂದ ಬಿಡಿ ಭಾಗಗಳು ಮತ್ತು ಲೂಬ್ರಿಕಂಟ್ ಗಳಿಗೆ ಅದರ ಬ್ಯಾಕೆಂಡ್ ಸಂಪರ್ಕದೊಂದಿಗೆ ಬರುತ್ತದೆ. ಸಾಫ್ಟ್ ವೇರ್ ಗೆ ಜಾಬ್ ಕಾರ್ಡ್ ಅಳವಡಿಸುವಾಗ ಇಕೋಸಿಸ್ಟಮ್ ಸ್ವಯಂಚಾಲಿತ ಬಿಡಿಭಾಗಗಳ ಪೂರೈಕೆದಾರರ ಹೋಸ್ಟ್ ಗೆ ಸಂಪರ್ಕಗೊಳ್ಳುತ್ತದೆ. ಯಾವುದೇ ಭಾಗವನ್ನು ಬದಲಾಯಿಸುವ ಅಗತ್ಯ ಬಂದಾಗ ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಸೇವಾ ಕೇಂದ್ರಕ್ಕೆ ವಿತರಕರು ಅಪ್ಲಿಕೇಶನ್ ನಲ್ಲಿ ಪ್ರತಿಕ್ರಿಯಿಸುವುದರಿಂದ ಭಾಗಗಳ ಪೂರೈಕೆಯು ಅಷ್ಟೇ ವೇಗವಾಗಿರುತ್ತದೆ. ವಿಶೇಷವಾಗಿ ನೇಮಕಗೊಂಡ ವ್ಯಕ್ತಿಗೆ ಅದರ ತ್ವರಿತ ವಿತರಣೆಯನ್ನು ವಹಿಸಲಾಗುತ್ತದೆ.
ಕೇಂದ್ರ ಸ್ಥಳ ಮತ್ತು ಸುಲಭ ಪ್ರವೇಶ
ನಗರದಲ್ಲಿ ಕೇಂದ್ರ ಸ್ಥಳಗಳಲ್ಲಿ ಎಕ್ಸ್ ಪ್ರೆಸ್ ಸೆಂಟರ್ ಗಳಿರುವುದು ಮತ್ತು ಸುಲಭ ಪ್ರವೇಶ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ದೇಶದಲ್ಲಿ ನಾಲ್ಕು ಚಕ್ರ ವಾಹನಗಳ ಸೇವಾ ವಿಭಾಗದಲ್ಲಿ ಕ್ರಾಂತಿಯನ್ನುಂಟುಮಾಡುವ ಭರವಸೆಯನ್ನು ನೀಡುತ್ತದೆ. ಉತ್ತಮ ಗುಣಮಟ್ಟದ ಮಾನದಂಡಗಳೊಂದಿಗೆ ಸಮಂಜಸ ವೆಚ್ಚದೊಂದಿಗೆ ಸೇವೆ ನೀಡುತ್ತದೆ. ಇದು ಗ್ರಾಹಕರನ್ನು ಎಕ್ಸ್ ಪ್ರೆಸ್ ಕೇಂದ್ರಗಳಿಗೆ ಬರುವಂತೆ ಪ್ರೇರೇಪಿಸುತ್ತದೆ. ಸರ್ವಿಸ್ ನೀಡುವಾಗ ಅಪ್ಲಿಕೇಶನ್ ವಾಹನದ ಸ್ಥಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಬದಲಿ ಅಥವಾ ರಿಪೇರಿಗಾಗಿ ಸಮಯೋಚಿತ ಸಲಹೆ ನೀಡುತ್ತದೆ. ವಾಹನದ ಸ್ಥಿತಿ ದುರಸ್ತಿ ಬಗ್ಗೆ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಲ್ಯಾಣ ಶಿವಜ್ಞಾನಂ, ’16 ಸೆವಾ ಕೇಂದ್ರಗಳ ಪ್ರಾರಂಭದೊಂದಿಗೆ ನಮ್ಮ ಪಾಲುದಾರಿಕೆಯು ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಹಯೋಗವನ್ನು ಬೆಂಬಲಿಸುತ್ತದೆ. ಜತೆಗೆ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಮುಂದುವರಿಸಲು ನಮ್ಮ ಬಲವಾದ ಬದ್ಧತೆಯನ್ನು ಪುನರುಚ್ಛರಿಸುತ್ತದೆ. ಈ ಉದ್ಯಮ ಉಜ್ವಲ ಭವಿಷ್ಯಕ್ಕಾಗಿ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ’ ಎಂದು ತಿಳಿಸಿದ್ದಾರೆ.
ತಂತ್ರಜ್ಞಾನ ಚಾಲಿತ ಎಕ್ಸ್ ಪ್ರೆಸ್ ಕೇಂದ್ರಗಳು ಮತ್ತು ಇಕೋಸಿಸ್ಟಮ್ ರಚನೆ ಕುರಿತು ಮಾತನಾಡಿದ ಸಂಜಯ್ ನಿಗಮ್, ‘ಆಪ್ ಆಧಾರಿತ ಇಕೋಸಿಸ್ಟಮ್ ಗ್ರಾಹಕರು, ಬಿಡಿಭಾಗಗಳ ಪೂರೈಕೆದಾರರು ಮತ್ತು ಸೇವಾ ಕೇಂದ್ರಗಳ ನಡುವೆ ತಡೆ ರಹಿತ ಸಂಪರ್ಕ ಖಚಿತಪಡಿಸುತ್ತದೆ. ಇದು ಗುಣಮಟ್ಟ ಮತ್ತು ಅನುಕೂಲತೆಯ ಅಪೂರ್ವ ಸಂಯೋಜನೆಯಾಗಿದೆ. ಎಕ್ಸ್ ಪ್ರೆಸ್ ಸೆಂಟರ್ ಗಳು ಭಾರತದಲ್ಲಿನ ವಾಹನಗಳ ನಂತರದ ಮಾರುಕಟ್ಟೆಯ ಪ್ರಸ್ತುತ ಸ್ಥಿತಿಯನ್ನು ಸಂಪೂರ್ಣವಾಗಿ ಅಡ್ಡಿಪಡಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಪೆಟ್ರೋಮಿನ್ ಇಂಡಿಯಾ ಎಂಡಿ ಅಶ್ನತ್ ಚೋಪ್ರಾ, ‘ನಾವು ನೀಡುತ್ತಿರುವ ಹಬ್ ಮತ್ತು ಸ್ಪೋಕ್ ಮಾದರಿಯು ಗ್ರಾಹಕರಿಗೆ ಸುಲಭವಾದ ಪ್ರವೇಶದೊಂದಿಗೆ ಅತ್ಯುತ್ತಮ ಮತ್ತು ಅತ್ಯಂತ ಅನುಕೂಲಕರ ಸೇವೆ ನೀಡಲು ವಿನ್ಯಾಸಗೊಳಿಸಲಾಗಿದೆ. ಎಚ್ ಪಿಸಿಎಲ್ ಔಟ್ ಲೆಟ್ ಗಳಲ್ಲಿ ನಗರದಾದ್ಯಂತ ಇರುವ ನಮ್ಮ ಸ್ಪೋಕ್ಸ್ ಕೇಂದ್ರಗಳು ಮೂಲ ನಿರ್ವಹಣಾ ಸೇವೆಯನ್ನು ಒದಗಿಸಿದರೆ ಹಬ್ ಗ್ಯಾರೇಜ್ ಗಳು ಲೈಟ್ ಮತ್ತು ಮಧ್ಯಮ ರಿಪೇರಿಗಳನ್ನು ನಡೆಸುತ್ತವೆ’ ಎಂದು ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಸಜ್ಜಾಗುತ್ತಿದೆ
ಮುಂದಿನ ಪೀಳಿಗೆಗೆ ಸೇವೆ ಒದಗಿಸುವ ಸಲುವಾಗಿ ಸೇವಾ ಕೇಂದ್ರಗಳು ಈಗಾಗಲೇ 200ಕ್ಕೂ ಹೆಚ್ಚು ತಾಂತ್ರಿಕ ಪಾಲುದಾರರನ್ನು ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆಯಲ್ಲಿ ತರಬೇತಿ ಪಡೆದವರನ್ನು ಹೊಂದಿವೆ. ವೇಗವಾಗಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆಯನ್ನು ನಿಭಾಯಿಸುವುದು ಮುಖ್ಯವಾಗಿದೆ.ಸಿಬ್ಬಂದಿಯ ಪ್ರಮಾಣೀಕೃತ ತರಬೇತಿ, ಬಿಡಿ ಭಾಗಗಳ ಲಭ್ಯತೆ, ಹೊಸ ವಿಭಾಗವನ್ನು ನಿರ್ವಹಿಸಲು ಸಿದ್ಧವಾಗಿರುವ ಸೇವಾ ಕೇಂದ್ರವನ್ನು ಹೊಂದಿರುವುದು, ಭವಿಷ್ಯದ ಇಕೋಸಿಸ್ಟಮ್ ಈಗಾಗಲೇ ಜಾರಿಯಲ್ಲಿದೆ. ಎಚ್ ಪಿ ಪೆಟ್ರೋಮಿನ್ ಎಕ್ಸ್ ಪ್ರೆಸ್ ಸೆಂಟರ್ ಗಳು ಪ್ರಸ್ತುತ ಎಲ್ಲ ರೀತಿಯ ವಾಹನಗಳು ನಾಲ್ಕು ಚಕ್ರ, ದ್ವಿ ಚಕ್ರ ವಾಹನಗಳು, ಆಟೋಗಳು ಮತ್ತು ಇವಿ ಗಳನ್ನು ಒಳಗೊಂಡು ಸರ್ವಿಸ್ ನೀಡುತ್ತದೆ.
ಪೆಟ್ರೋಮಿನ್ ಬಗ್ಗೆ
ಪೆಟ್ರೋಮಿನ್ ಕಾರ್ಪೊರೇಶನ್ ಸೌದಿ ಅರೇಬಿಯಾದ ಪ್ರಮುಖ ಬಹು-ರಾಷ್ಟ್ರೀಯ ಸಂಸ್ಥೆಯಾಗಿದೆ. ಕಂಪೆನಿ ಬಲವಾದ ಪರಿವರ್ತಕ ಶಕ್ತಿಯಾಗಿ ನಿಂತಿದೆ. ವ್ಯಕ್ತಿಗಳು ಮತ್ತು ವ್ಯವಹಾರಗಳ ಚಲನೆಗೆ ಸಮಾನವಾಗಿ ಸೇವೆ ಸಲ್ಲಿಸುವ ಸಮರ್ಥನೀಯ ಮತ್ತು ನವೀನ ಚಲನಶೀಲತೆ ಪರಿಹಾರಗಳ ಒದಗಿಸುತ್ತದೆ. ಜನರು, ಉತ್ಪನ್ನಗಳು ಮತ್ತು ಸೇವೆಗಳ ಚಲನೆಯನ್ನು ಸಕ್ರಿಯಗೊಳಿಸುತ್ತದೆ.
ಎಚ್ ಪಿಸಿಎಲ್ ಬಗ್ಗೆ
ಎಚ್ ಪಿಸಿಎಲ್ ಭಾರತದ ಪ್ರಮುಖ ಸಮಗ್ರ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿ ಒಂದಾಗಿದೆ. ಕಚ್ಚಾ ತೈಲವನ್ನು ಶುದ್ಧೀಕರಿಸುತ್ತದೆ ಮತ್ತು ಭಾರತದಾದ್ಯಂತ ವಿವಿಧ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಕೆಲವು ವಿದೇಶ ರಾಷ್ಟ್ರಗಳಿಗೂ ಕಳುಹಿಸುತ್ತದೆ. ಚಿಲ್ಲರೆ ಮತ್ತು ಎಲ್ ಪಿಜಿ ಯಿಂದ ಹಿಡಿದು ಕೈಗಾರಿಕೆಗಳು ಮತ್ತು ವಾಣಿಜ್ಯ, ಲ್ಯೂಬ್ ಗಳು, ವಾಯುಯಾನ, ಸಂಸ್ಕರಣಾಗಾರಗಳು ಮತ್ತು ಅನೇಕ ವಿಭಾಗಗಳಲ್ಲಿ ಪ್ರಗತಿ ಮತ್ತು ನಾವೀನ್ಯತೆಗೆ ಸಮರ್ಪಿತವಾಗಿದೆ.