ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಅನುದಾನ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ -ಶಾಸಕ ಎಸ್ ಮುನಿರಾಜು"
ಪೀಣ್ಯ ದಾಸರಹಳ್ಳಿ :ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಕ್ಷೇತ್ರಗಳಿಗೆ ಸರಕಾರ 500 ಕೋಟಿ ಅನುದಾನ ನೀಡಿದೆ ಆದರೆ ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಇರುವುದರಿಂದ ಅನುದಾನ ಬಿಡುಗಡೆ ಮಾಡಿದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಆರೋಪಿಸಿದ್ದಾರೆ.
ಅವರು ಭುವನೇಶ್ವರಿ ನಗರದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ನೀಡಿದ 25ಕೋಟಿ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲಾಗಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಜೊತೆಗೆ ಮಲತಾಯಿ ಧೋರಣೆ ಮಾಡುತ್ತಿದೆ ಇದನ್ನೆಲ್ಲಾ ಬಿಟ್ಟು ಕ್ಷೇತ್ರದ ಜನರ ಹಿತ ದೃಷ್ಟಿಯಿಂದ ಅನುದಾನ ಬಿಡುಗಡೆ ಮಾಡಬೇಕು ಈ ವಿಷಯವನ್ನು ಬಿಬಿಎಂಪಿ ಆಯುಕ್ತರಿಗೆ ಮತ್ತು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರಿಗೂ ಪತ್ರ ಬರೆದಿದ್ದೇನೆ ಉಪಮುಖ್ಯ ಡಿಕೆ ಶಿವಕುಮಾರ್ ಅವರು ನನ್ನ ಕ್ಷೇತ್ರಕ್ಕೆ ಬಂದು ಇಲ್ಲಿನ ರಸ್ತೆಗಳು ಚರಂಡಿ ಬೀದಿ ದೀಪ ಉದ್ಯಾನ (ಪಾರ್ಕ್) ಅವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ನೋಡಲಿ ನೋಡಿದ ಮೇಲೆ ಅನುದಾನ ಬಿಡುಗಡೆ ಮಾಡ್ಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಏಷ್ಯಾದ 2ನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು ದಾಸರಹಳ್ಳಿ ಕ್ಷೇತ್ರ ವಿಶೇಷವಾಗಿ ಇಲ್ಲಿ ಬಡವರು ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ವಾಸ ಮಾಡುತ್ತಿದ್ದಾರೆ ಬೆಂಗಳೂರಿನಲ್ಲಿ ಈ ಕ್ಷೇತ್ರದಿಂದ ಸಾವಿರಾರು ಕೋಟಿ ತೆರಿಗೆ ಸಂದಾಯವಾಗುತ್ತದೆ ಒಟ್ಟಿನಲ್ಲಿ ಶೇಕಡಾ 78ರಷ್ಟು ತೆರಿಗೆ ಸಂದಾಯ ವಾಗುತ್ತಿರುವುದು ಈ ಕ್ಷೇತ್ರಕ್ಕೆ ತಾರತಮ್ಯ ಮಾಡದೆ ಅನುದಾನ ಶೀಘ್ರದಲ್ಲಿ ಬಿಡುಗಡೆ ಮಾಡಿರಿ ಎಂದು ಶಾಸಕ ಎಸ್ ಮುನಿರಾಜು ಇದೆ ವೇಳೆ ಮನವಿ ಮಾಡಿದ್ದಾರೆ.