ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಎಸ್. ಜೆ.ಆರ್. ಮಹಿಳಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು""
ಬೆಂಗಳೂರು: ನಗರದ ಪ್ರತಿಷ್ಠಿತ ಮಹಿಳಾ ಕಾಲೇಜು ಆದ ಎಸ್. ಜೆ.ಆರ್. ಹಾಗೂ ಬೆಂಗಳೂರಿನ ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ ಸಂಘದ ಸಹಯೋಗದಲ್ಲಿ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ನಿವೃತ್ತಿ ಆಧ್ಯಾಪಕರಿಗೆ ಹಾಗೂ ಕನ್ನಡ ಭಾಷೆಯಲ್ಲಿ ಪಿ. ಎಚ್. ಡಿ. ಪದವಿ ಪಡೆದವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮ ಸಿದ್ದರಾಜು ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಎಚ್ಚರಿಸುವ ಮೂಲಕ ಭವಿಷ್ಯದಲ್ಲಿ ಶಿಕ್ಷಣದ ವ್ಯವಸ್ಥೆಯ ಜೊತೆಗೆ ಭಾಷೆಯು ಅಸ್ತಿತ್ವದ ಬಗ್ಗೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಾಗಿರುವ ಇಂದಿನ ದಿನ ಮಾನ್ಯಗಳಲ್ಲಿ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಪ್ರಾಧ್ಯಾಪಕರುಗಳು ಮುನ್ನೆಚ್ಚರಿಕೆಯ ಕ್ರಮಗಳ ಕುರಿತಾಗಿ ತಿಳಿ ಪಡಿಸಿದರು. ಹಾಗೆ ಇದೆ ಸಂದರ್ಭದಲ್ಲಿ ವಿಶೇಷವಾಗಿ ಉಪನ್ಯಾಸ ನೀಡಲು ಆಗಮಿಸಿದ್ದ ಬಸವರಾಜ್ ಕಲ್ಗುಡಿ ಖ್ಯಾತ ವಿಮರ್ಶಕರು ಬೆಂಗಳೂರು ವಿಶ್ವವಿದ್ಯಾಲಯ ""ಪದವಿ ಭಾಷಾ ಪಠ್ಯ ಮತ್ತು ಸವಾಲುಗಳು"" ಎಂಬ ವಿಷಯವನ್ನು ಕುರಿತು ಪ್ರಾಧ್ಯಾಪಕವನ್ನು ಉದ್ದೇಶಿಸಿ ಹಳೆಯ ತಲೆಮಾರಿನ ಪಠ್ಯ ಕೇಂದ್ರವಾಗಿದ್ದು ಆಲೋಚನೆಗಳನ್ನು 15 ವರ್ಷಗಳ ನಂತರ ಅಂದರೆ ಪಠ್ಯಗಳಾಚೆಗೆ ಆಲೋಚನೆ ಮಾಡುವ ಕ್ರಮವನ್ನು ಗೋವಿನ ಹಾಡು ಕೆ ಎಸ್ ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ ದೇವನೂರು ಮಹಾದೇವರ ಕುಸುಮಬಾಲ ಪಂಪನ ಆದಿಪುರಾಣ ವಚನ ಸಾಹಿತ್ಯವನ್ನು ಉದಾರಣೆಗೆ ಎತ್ತಿಕೊಂಡು ತಿಳಿಸಿದರು. ಮುಖ್ಯವಾಗಿ ಒಂದು ಪಠ್ಯವನ್ನು ಹಲವಾರು ಆಯಾಮಗಳಿಂದ ಅಳವಡಿಸಿಕೊಂಡು ಚಿಂತಿಸಬೇಕಾದ ವಿಧಾನಗಳ ಜೊತೆಗೆ ಆಧ್ಯಾಪಕರಾದ ಕಾವ್ಯಗಳು ವಾಕ್ಯಗಳು ಕವಿತೆಗಳಲ್ಲಿ ಕೇವಲ ಭಾವಾರ್ಥವನ್ನು ನೋಡದೆ ಅಲ್ಲ ಕವಿ ಭಾಷೆಯನ್ನು ಗಮನಿಸಿದಾಗ ವಸ್ತು ಮಹತ್ವದ ಆಗಿರುತ್ತದೆ ಆಧ್ಯಾಪಕರು ಒಂದು ಪಠ್ಯ ವನ್ನು ಬೋಧಿಸುವಾಗ ಅದರ ಭೂತ ಮತ್ತು ವರ್ತಮಾನ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ ಪ್ರಸ್ತುತವನ್ನು ತಿಳಿದಿರಬೇಕಾಗಿರುತ್ತದೆಎಂದು ತಿಳಿಸಿದರು.. ಆಧ್ಯಾಪಕರಾದ ನಾವು ಬೋಧನಾ ವಿಧಾನಕ್ಕೆ ಪೂರ್ವಕವಾಗಿರುವಂತಹ ಅನೇಕ ಮಹತ್ವದ ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರು ನಗರ ಕುಲ ಸಚಿವರು ಮೌಲ್ಯಮಾಪನ ಡಾ. ಲೋಕೇಶ್ .ವಿ. ನಗರದ ಮೌಲ್ಯಮಾಪನ ಮಾಡುವಂತಹ ಆಧ್ಯಾಪಕರಗಳಿಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸರಿಯಾದ ಉತ್ತರಗಳಿಗೆ ಸರಿಯಾದ ಅಂಕಗಳನ್ನು ಕೊಟ್ಟು ಮೌಲ್ಯಮಾಪನ ಹಾಗೂ ವ್ಯವಸ್ಥಿತ ಚೌಕಟ್ಟಿನಡೆಯಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದು ಪ್ರಾಧ್ಯಾಪಕಗಳಿಗೆ ಮನವರಿಕೆ ಮಾಡಿದರು. ಹಾಗೂ ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯರು ಪುಟ್ಟಣ್ಣ ಇವರು ಶಿಕ್ಷಕರ ಕರ್ತವ್ಯದ ಬಗ್ಗೆ ಇಂದಿನ ಶಿಕ್ಷಕರು ಮುಂದಿನ ವಿದ್ಯಾರ್ಥಿಗಳ ಬೆಳಕನ್ನು ಕೊಡುವಂತರಾಗಬೇಕು ತಮ್ಮ ಕರ್ತವ್ಯದ ಬಗ್ಗೆ ನೆನಪಿಸಿದರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಕ್ಷರಾದ ಚಳಕೆರೆ ಲಿಂಗರಾಜಯ್ಯ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಕ್ಷಣ ವ್ಯವಸ್ಥೆಗೆ ಒಡ್ಡಿರುವ ಸವಾಲುಗಳು ಬಗ್ಗ ಹಾಗೆ ಮೌಲ್ಯಗಳ ಆಧಾರವಾದ ಮಾನವೀಯ ವಾದ ಶಿಕ್ಷಣ ಹಾಗೂ ಶಿಕ್ಷಕ ಆಗಬೇಕು ರಾಷ್ಟ್ರೀಯ ಶಿಕ್ಷಣದ ನೀತಿಯ ಎಲ್ಲಾ ವಿಷಯಗಳನ್ನು ತಿಳಿದು ತಿಳಿಸುವಂತಹ ಜ್ಞಾನವನ್ನು ಬರುವಂತಹ ಹೊಸ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕಾಗುತ್ತದೆ ಹೊಸ ಹೊಸ ವಿಚಾರಗಳ ಧಾರೆಗಳನ್ನು ಮಕ್ಕಳು ನಮ್ಮ ಮುಂದೆ ಇಟ್ಟಾಗ ನಾವುಗಳಾದ ಕೌಶಲ್ಯ ತೆಯನ್ನು ಹೆಚ್ಚಿಸಿಕೊಂಡಾಗ ವಿದ್ಯಾರ್ಥಿಗಳಿಗೆ ಶಿಕ್ಷಣದ ನೀತಿಯ ನಿಯಮಗಳನ್ನ ಪಾಲನೆಗಳನ್ನ ವಿದ್ಯಾರ್ಥಿಗಳಿಗೆ ಕಂಡು ಕಟ್ಟುವ ರೀತಿಯಲ್ಲಿ ತಿಳಿ ಪಡಿಸಬೇಕಾಗುತ್ತದೆ ಎಂದರು ಈ ಸಂದರ್ಭದಲ್ಲಿ ಡಾ. ಶೀಲಾ ಮಳಿಮಠ , ಡಾ.ಸುವರ್ಣ, ಡಾ