ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ  ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಧುನಿಕತೆ ಮತ್ತು ನಾಗರೀಕರಣ ಸವಾಲುಗಳು ಮತ್ತು ಪರಿಹಾರಗಳು ಎಂಬ ವಿಷಯ ಕುರಿತು ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು""
 ಬೆಂಗಳೂರು:  ಒಂದು ದಿನದ ವಿಚಾರ ಸಂಕೀರ್ಣಕ್ಕೆ ದೀಪ ಬೆಳಗಿಸುವ ಮೂಲಕ ಕೃಷಿ ತಜ್ಞರು ಸಂಸ್ಕೃತಿ ಹಾಗೂ ಸಮಾಜ ಚಿಂತಕರು ಆಗಿರುವ ಕೆಪಿ ಸುರೇಶ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.. ಬಿ ಚಂದ್ರಶೇಖರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಿ.ಕೆ. ನಟರಾಜ್ ಮತ್ತು ಡಾ. ಪ್ರೇಮಾವತಿ ಎಸ್ ಕೆ ಹಾಗೂ ಡಾ. ಎಂ. ಪ್ರಕಾಶ್  ಚಾಲನೆಗೆ ಕೈ ಜೋಡಿಸಿದರು.
 ನಂತರ ಕೆ.ಪಿ. ಸುರೇಶ್ "ಜಾತಿರಚನೆ ಮತ್ತು ಪಿತೃ ಪ್ರಭುತ್ವದಿಂದ ಕೂಡಿದ ಸಮಾಜದಲ್ಲಿ ಮಹಿಳೆಯರು ಹಾಗೂ ದಲಿತರಿಗೆ ಎಂದಿಗೂ ಶೋಷಣೆಗೆ ಒಳಗಾಗಿರುವ ವರ್ಗವಾಗಿದ್ದು ಪಾಶ್ಚಮಾತ್ಯರ ಪಕ್ಷ  ಚಿಂತನೆಗಳು ಆಧುನಿಕತೆ ಮತ್ತು ನಗರೀಕರಣಗಳ ಪರಿಣಾಮದಿಂದ ಜನಸಾಮಾನ್ಯರಲ್ಲಿ ಪ್ರಸ್ತುತ ಆಧುನಿಕ ಆಲೋಚನೆಗಳು ಬೆಳೆಯಲು ಸಾಧ್ಯವಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಮತ್ತೋರ್ವ ಅತಿಥಿಯಾದ ಕನ್ನಡ ಪ್ರಾಧ್ಯಾಪಕರು ಡಾ.ಕೆ ವೈ ನಾರಾಯಣಸ್ವಾಮಿ ಅವರು ಪ್ರಸ್ತುತ ನಗರಿಕರಣದ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ವಿಷಯ  ಆಯ್ಕೆಯು ಬಹು ಸೂಕ್ತವಾಗಿದ್ದು ಸಂಶೋಧನಾತ್ಕಕ ಕೃತಿಗಳು ಮತ್ತು ಲೇಖನಗಳು ಮಂಡಿಸುವ ಅವಶ್ಯ ಎಂದು ತನ್ನ ಅನುಭವಗಳನ್ನು ಸಾಕಷ್ಟು ಉದಾಹರಣೆಗಳ ಮೂಲಕ ತಿಳಿಸಿದರು .
ಇದೇ ಸಂದರ್ಭದಲ್ಲಿ ಮತ್ತೊಬ್ಬ ಅತಿಥಿಯಾದ ನಿವೃತ್ತಿ ಕನ್ನಡ ಪ್ರಾಧ್ಯಾಪಕರಾದ ಕೆ .ಕೃಷ್ಣಪ್ಪನವರು ನಾಗರಿಕತೆ ಎಂಬುದು ಸಿಂಧೂ ನದಿಯ ನಾಗರಿಕತೆಯಿಂದ ಪ್ರೇರಣೆಯಾಗಿದ್ದು ಹಳ್ಳಿಗಳಿಂದ ಪಟ್ಟಣಗಳು  ಪಟ್ಟಣಗಳಿಂದ ನಗರಗಳು ಆಧುನಿಕತೆಗೆ ನಾಂದಿಯಾಗಿದೆ .ಈಗಿನ ಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಡೆ  ಚಾಪು ಮೂಡಿಸುವಂಥದ್ದಾಗಿದೆ ಎಂದು ತಿಳಿಸಿದರು .
ಈ ವಿಚಾರ ಸಂಕಿರಣದ  ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಡಾ.ಡಿ ಎನ್.ಎಸ್.ಕುಮಾರ್  ದೊಡ್ಡ ನಗರಗಳು ಮಾತ್ರವಲ್ಲದೆ ಪ್ರತಿಯೊಂದು ಪಟ್ಟಣಗಳು ಮತ್ತು ಆಧುನಿಕತೆಯನ್ನು ಅನುಸರಿಸುವದು ಕಾಣುತ್ತೇವೆ.  ಹಳ್ಳಿಗಳಲ್ಲಿ ಆಧುನಿಕ ಕಥೆ ಆವರಿಸಿದ್ದೆ ನಗರಗಳಲ್ಲಿ ಶಿಕ್ಷಣ ಮತ್ತು ಆಸ್ಪತ್ರೆಗಳಿಗೆ ಸ್ವಲ್ಪಮಟ್ಟಿಗೆ ಸುಧಾರಣೆಗಳು ಕಂಡುಕೊಂಡಿದೆ ಹಾಗೆ ಸಾಹಿತ್ಯ ವಿಚಾರಧಾರೆಗಳು ಅಭಿವೃದ್ಧಿಯತ್ತ ನಗರಗಳು ತಲೆ ಎತ್ತುತ್ತೇವೆ ಹಾಗೆ ಕೆಲವು ಪ್ರದೇಶಗಳ ಒಳಗೊಂಡಂತೆ ಅಭಿವೃದ್ಧಿ ಕುಂಠಿತವಾಗಿವೆ. ವಿಚಾರವನ್ನು  ಸಾಧಿಸಿವೆಯಾದರು ಭಾರತ ದೇಶದ ಜನರಲ್ಲಿ ನೆಮ್ಮದಿಯನ್ನು ಹೊಂದಿಲ್ಲ ಹಾಗೆ ಮಾನವೀಯ ನೆಲೆಯನ್ನು ಹೊಂದಿರುವ ಹಳ್ಳಿಗಳನ್ನು ಮತ್ತು ಪಟ್ಟಣಗಳ ನಗರಗಳಲ್ಲೂ ಆಧುನಿಕತೆ ಇದ್ದು ಸುಸ್ತುತಿ ಅಭಿವೃದ್ಧಿ ಜೊತೆ ಸಮಾನತೆಯ ಸಮಾಜವನ್ನು ಕಟ್ಟುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ  ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಚಂದ್ರಶೇಖರ್ ಆಧುನಿಕತೆ ಮತ್ತು ನಗರೀಕರಣ ಪ್ರಾಮುಖ್ಯತೆಯನ್ನು ಉದ್ಭವವಾಗಿರುವ ಸವಾಲುಗಳನ್ನು ಕುರಿತು ಚರ್ಚೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಂತಹ ನಗರಗಳು ನಮಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೈಗೆಟಿಕುವಂತವಾಗಿವೆ ಆಧುನಿಕತೆಯ ಬದಲಾವಣೆಗಳನ್ನು ನೀಡುವುದರ ಜೊತೆಗೆ ಅನೇಕ ಸಮಸ್ಯೆಗಳು ಹುಟ್ಟು ಹಾಕುತ್ತವೆ .ಇವುಗಳನ್ನು ಕುರಿತು ಕ್ರಿಯಾಶೀಲರಾಗಿ ಆಲೋಚನೆ ಮಾಡಿ ಅವುಗಳಿಂದ ಪರಿಹಾರಗಳನ್ನು ತಿಳಿಯಬೇಕಾಗಿದೆ ಎಂದರು.
 ಈ ಸಂದರ್ಭದಲ್ಲಿ ವಿಚಾರ ಸಂಕಿರಣದ ಆಯೋಜನೆಗೆ ಮುಖ್ಯ  ಕಾರಣಿಭೂತರಾದ  ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಕೆ.ನಟರಾಜ್ ಸಂಘಟನಾ ಕಾರ್ಯದರ್ಶಿ ಡಾ. ಎಸ್ ಕೆ ಪ್ರೇಮಾವತಿ ಸಂಚಿಕೆ ಸಂಪಾದಕರಾದ ಡಾ.ಎಂ. ಪ್ರಕಾಶ್ ಸಂಚಾಲಕರಾದ ಸೈಯದ್ ರೆಹಮತ್ತುಲ್ಲ ಹಾಗೂ ಸಂಗೀತ ವಿದ್ವಾಂಸ ಡಾ ರವೀಂದ್ರ  ಕಟೋಟಿ , ಡಾ.ಸುಧಾ ಮಧ್ವರಾಜ್, ಡಾ.ರುಕ್ಮಿಣಿ ,ಡಾ ಶೋಭಾ, ಸಿ. ಡಾ. ಶೋಭಾ ಎನ್. ಎಸ್, ಡಾ. ಅಂಬುಜಾಕ್ಷಿ, ಡಾ. ಸುಧಾ, ಡಾ ಮುನೀರ್ ಅಹಮದ್ ಸ್ನಾತಕೋತ್ತರ  ಮತ್ತು ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಜಾಜ್ ಅಹಮದ್ ಖಾನ್ ಹಾಗೆ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ ನರಸಿಂಹರಾಜು ಪ್ರೊ ಸುರೇಶ್, ಪ್ರೊ. ಆಶಾ, ಡಾ. ಬಸವರಾಜ್, ಡಾ.ಹರೀಶ್,  ಡಾ. ಶ್ರೀ ಲಕ್ಷ್ಮಿ, ಡಾ.. ತಾಸಿನ್, ಡಾ. ಜ್ಯೋತಿರ್ಲಿಂಗಯ್ಯ,ಡಾ. ಅಮೃತ್ ಮಾಸ್ತಿಗೌಡ, ಗೌರಮ್ಮ ,ವಿಶಾಲಾಕ್ಷಿ ಹಾಗೂ ವಿಜಯಲಕ್ಷ್ಮಿ, ಆಶಾ, ಸರ್ವ ಮಂಗಳ, ಹಾಗೂ ಪ್ರಸನ್ನ ಕುಮಾರ್ ಜಿ.ಟಿ. ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಥಮ ದರ್ಜೆ ಕಾಲೇಜಿನ ಬೋಧಕರು ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಇನ್ನು  ಮುಂತಾದವರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News