ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಂ ಕಾಲೇಜಿನಲ್ಲಿ ಅಂತರ ಕಾಲೇಜು ಸ್ಪರ್ಧೆಗಳ ಹಾಗೂ ಸಾಂಸ್ಕೃತಿಕ ಉತ್ಸವ ಜರುಗಿತು"
ಬೆಂಗಳೂರು: :ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ ಎರಡು ದಿನಗಳ ಅಂತರ ಕಾಲೇಜು ಸ್ಪರ್ಧೆಗಳ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ.
ನಂತರ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ ದೀಪದಂತೆ ಪ್ರಜ್ವಲಿಸುವಂತಹ ಪ್ರಜ್ಞಾವಂತ ಪ್ರಜೆಗಳಾಗಿ ಸಮಾಜಕ್ಕೆ ನೀವು ಕೊಡುಗೆ ಆಗಬೇಕು ಏಕೆಂದರೆ ವಿದ್ಯಾರ್ಥಿ ಅಂದರೆ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದಲ್ಲದೆ ಇಂತಹ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಿ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಹಾಗೆ ವಿದ್ಯಾರ್ಥಿಯ ಜೀವನವು ತುಂಬಾ ಅತ್ಯಾಮೂಲ್ಯವಾಗಿದ್ದು ಯಾವುದೇ ಕಾರಣಕ್ಕೂ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದೆಂದು ಈ ಮಾತನ್ನು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಅತಿಥಿ ಹಾಗೂ ಕಲಾವಿದ ಮತ್ತು ಚಲನಚಿತ್ರ ನಟ ಅಥರ್ವ ಈ ಹಿಂದೆ ಟೇಲ್ಸ್ ಆಫ್ ಮಹಾನಗರ ಎಂಬ ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದು ಅದಕ್ಕೆ ಈ ಕಾಲೇಜಿನ ಎಲ್ಲಾ ಆಧ್ಯಾಪಕರು ವಿದ್ಯಾರ್ಥಿಗಳು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಇದೇ ರೀತಿ ಇಂದು ಬಿಡುಗಡೆ ಆಗಿರುವ ಹಾಡಿಗೂ ಬೆಂಬಲ ನೀಡುತ್ತೀರಿ ಎಂದು ಈ ವೇದಿಕೆಯಲ್ಲಿ ನಾನು ಕಾಲೇಜಿಗೆ ಹಾಗೂ ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಭಾರಿಯಾಗಿದ್ದೇನೆ ಎಂದು ನುಡಿದರು.
ಈ ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿ ಕುಮಾರಿ ರಮೋಲ ವಿದ್ಯಾರ್ಥಿ ಜೀವನವೆಂದರೆ ಬಂಗಾರದಂತಹ ಜೀವನ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಮರುಗಳಿಸುವುದಿಲ್ಲ ಹಾಗೆ ಮುಂದಿನ ದಿನಗಳಲ್ಲಿ ಪಶ್ಚತ್ತಾಪ ಪಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಡಾ. ಚಂದ್ರಶೇಖರ್ .ಬಿ .ಕಾಲೇಜಿನಲ್ಲಿ ನಿರಂತರವಾಗಿ ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಿದೆ ಅಂತರ ಕಾಲೇಜು ವಿದ್ಯಾರ್ಥಿಗಳ ಕೂಡ ಇದರ ಸದುಪಯೋಗ ಪಡಿಸಿಕೊಳ್ಳಲೆಂದು ಈ ಕಾಲೇಜಿನಲ್ಲಿ ಅಂತರ್ ಕಾಲೇಜು ಸ್ಪರ್ಧೆಗಳ ಸಾಂಸ್ಕೃತಿಕ ಉತ್ಸಾಹವನ್ನು ಆಯೋಜನೆ ಮಾಡಿದ್ದು ಇಂತಹ ಪ್ರಯೋಜನಗಳನ್ನು ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಿ ಈ ಕಾಲೇಜಿನ ಪ್ರತಿಷ್ಠೆ ಹಾಗೂ ಗೌರವವನ್ನು ಹೆಚ್ಚು ಮಾಡುವುದು ವಿದ್ಯಾರ್ಥಿಗಳು ಏಕೆಂದರೆ ಈ ವರ್ಷದ ಪ್ರವೇಶಕ್ಕಾಗಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪಾಸ್ ಆಗಿರುವ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು ಆದರೆ ನಾವು ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ 1700 ಪ್ರವೇಶ ಕೊಟ್ಟಿದ್ದೇವೆ. ಈಗ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ನೋಟಿಸ್ ಬೋರ್ಡ್ ಹಾಕಿದ್ದರು ಕೇಳಿಕೊಂಡು ಬರುವ ವಿದ್ಯಾರ್ಥಿಯ ಸಂಖ್ಯೆ ಇನ್ನು ಹೆಚ್ಚಾಗಿದೆ . ಸಮಾಜದ ಮುಖಂಡರು ಹಾಗೂ ಬೇರೆ ಬೇರೆ ಅಧಿಕಾರಿಗಳಿಂದ ಫೋನ್ ಮಾಡುವುದರ ಮೂಲಕ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಹಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ.ನರಸಿಂಹರಾಜು.ಕೆ. ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಬಹಳ ಮುಖ್ಯ ಇದನ್ನು ಯಾರು ವಿದ್ಯಾರ್ಥಿ ದೆಸೆಯಲ್ಲಿ ಸಂಪೂರ್ಣವಾಗಿ ಪಾಲಿಸಿಕೊಂಡು ಬಂದಿದ್ದೆ ಆದರೆ ನಮ್ಮ ದೇಶಕ್ಕೆ ನಮ್ಮ ರಾಜ್ಯಕ್ಕೆ ಒಬ್ಬ ಸತ್ ಪ್ರಜೆಯಾಗುವುದರಲ್ಲಿ ಮತ್ತು ಸಮಾಜಕ್ಕೆ ಒಳ್ಳೆಯ ಪ್ರಜೆಯನ್ನು ತಂದುಕೊಟ್ಟ ಕೀರ್ತಿ ಕಾಲೇಜು ಮತ್ತು ತಂದೆ-ತಾಯಿಗಳಿಗೂ ಹೆಮ್ಮೆ ಪಡುವಂತದ್ದಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿರ್ವಹಣಾ ಸಮಿತಿಯ ಸಂಚಾಲಕರಾದ ಪ್ರೊ. ಸುರೇಶ್ .ಎಚ್. ಎನ್. ಸ್ನಾತಕೋತ್ತರ ಮತ್ತು ಕಾಮರ್ಸ್ ಮುಖ್ಯಸ್ಥರಾದ ಡಾ. ಎಜಾಜ್ ಅಹಮದ್ ಖಾನ್, ಎಂ .ಎಸ್. ಲೀಲಾ ಡಾ. ರವೀಂದ್ರ ಕಟೋಟಿ, ಡಾ. ಮುನೀರ್ ಅಹ್ಮದ್, ಡಾ. ಶ್ರೀನಿವಾಸರು ಡಾ. ಪ್ರೇಮಾವತಿ .ಎಸ್. ಕೆ., ಡಾ. ಸತೀಶ್ , ಡಾ. ಭಾರತಿ, ಡಾ. ನಾಗರಾಜ್ ಡಾ. ಅನಿತಾ, ಕೆ ಪಿ ,ಡಾ ತಾಸಿನ,ಡಾ. ಜಯ ಲಕ್ಷ್ಮಮ್ಮ ಹಾಗೂ ಪ್ರಸನ್ನ ಕುಮಾರ್ ಜಿ.ಟಿ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು ಮತ್ತು ಕಾಲೇಜಿನ ಸಿಬ್ಬಂದಿಯವರು ಮತ್ತು ಬೆಂಗಳೂರಿನ ಅಕ್ಕಪಕ್ಕದ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳು ಇನ್ನೂ ಮುಂತಾದವರು ಭಾಗವಹಿಸಿದ್ದರು