ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ನಿರ್ದೇಶಕ ಆರ್.ಸಾಗರ್ ಅವರ ಹೊಸ ಚಿತ್ರ 'ಕೆಸರಿನ ತಾವರೆ' 
   

ಬೆಂಗಳೂರು: ಸಾಗರ್ ಅವರ ನಿರ್ದೇಶನದ  'ಅಂಜನ್' ಚಿತ್ರ ಕಳೆದ ವರ್ಷ ಬಿಡುಗಡೆ ಆಗಿ "50" ದಿನ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಉತ್ತಮವಾದ ಚಿತ್ರಕಥೆ -ಸಂಭಾಷಣೆ ಈ ಚಿತ್ರದ ಹೆಗ್ಗಳಿಕೆ, ಇದೇ ಅಂಜನ್ ಚಿತ್ರದ ಯಶಸ್ವಿಗೆ ಕಾರಣವಾಯಿತು.
      'ಅಂಜನ್ ' ಚಿತ್ರದ ನಂತರ ಆರ್ ಸಾಗರ್ ಈಗ 'ಕೆಸರಿನ ತಾವರೆ' ಎಂಬ ಕಾದಂಬರಿಯನ್ನು ಚಿತ್ರ ಮಾಡಲು ಹೊರಟಿದ್ದು ಚಿತ್ರದ ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಆಗಿದೆ.
      ಈ ಚಿತ್ರದ ವಿಶೇಷ ಏನೆಂದರೆ, 'ಫುಟ್ಬಾಲ್' ಆಟದ ಮುಖ್ಯ ಅಂಶವನ್ನು ಈ ಚಿತ್ರದಲ್ಲಿ ತೊರಿಸಲಾಗುತ್ತಿದೆ. ನಂತರ 'ಕ್ರಿಕೆಟ್, ಬೆಟ್ಟಿಂಗ್, ಜೂಜು ಮನುಷ್ಯನ ಜೀವನವನ್ನು ಹೇಗೆ ಬದಲಾವಣೆ ಮಾಡುತ್ತೆ..... ಎಂಬ ಅಂಶಗಳನ್ನು ಒಳಗೊಂಡಿದೆ. ಈ ಚಿತ್ರದ ನಾಯಕ ಕ್ರಿಕೆಟ್ ಬೆಟ್ಟಿಂಗ್ ಮೂಲಕ ತನ್ನ ಜೀವನವನ್ನು ಹೇಗೆ ಮುಡುಪಾಗಿ ಇಡುತ್ತಾನೆ. ಅದರಿಂದ ಆಗುವ ಅನಾಹುತಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಈ ಚಿತ್ರದ ಇನ್ನೊಂದು ಅಂಶ.      
      ಒಬ್ಬ ಬಡ ಟೈಲರ್ ಹಳೆಯ ಬಟ್ಟೆಗಳನ್ನು ಹೊಲೆದುಕೊಂಡು ಮೊಮ್ಮಗನನ್ನು ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶಕ್ಕೆ ಪರದಾಡಿ ಕೊನೆಗೂ ಅವಕಾಶ ಪಡೆಯುತ್ತಾನೆ. ಮೊಮ್ಮಗ ಫುಟ್ಬಾಲ್ ಆಟಗಾರ, ಫುಟ್ಬಾಲ್ ತೊಗೊಳಕ್ಕೆ ಹಣ ಗಳಿಸಲು ಏನೇನು ಕಷ್ಟ ಅನುಭವಿಸುತ್ತಾನೆ ಎಂಬ ಅಂಶ ಪ್ರಧಾನವಾಗಿ ಚಿತ್ರದಲ್ಲಿದೆ.
     ಈ ಕಲಾತ್ಮಕ ಚಿತ್ರಕ್ಕೆ ಸಂಗೀತ ಕಲಾಕಾರ್ ಗೋಪಿ, ಸಾಹಿತ್ಯ ಮಂಡ್ಯ ಸಾಗರ್, ಛಾಯಾಗ್ರಹಣ ಮಂಡ್ಯ ಅರುಣ್, ಸಂಕಲನ ಕುಮಾರಸ್ವಾಮಿ ನಿತ್ಯ ಪ್ರಭುಯವರು ನೀಡಿದ್ದಾರೆ.
     ಈ ಚಿತ್ರದಲ್ಲಿ ಹೆಸರಾಂತ ನಿರ್ದೇಶಕ ಮೋಹನ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದರೆ ಇವರ ಜೊತೆ ಮತ್ತೊಬ್ಬ ನಾಯಕ ನಟ ಹರ್ಷ ಇದ್ದಾರೆ. ಇವರು 'ಪ್ರತಿಬಿಂಬ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿ ನಂತರ 'ಅಂಜನ್' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಇದು ಅವರ ಮೂರನೇ ಚಿತ್ರ.
     ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ 'ಪ್ರತಿಬಿಂಬ' ಚಿತ್ರದ ನಾಯಕ ನಟ ಪ್ರದೀಪ್ ಸೋನ್ಸ್ ಗೌರವ ಪಾತ್ರದಲ್ಲಿ ಅಭಿನಯಿಸಿದರೆ, ಶೋಭಾ ಹರ್ಷಿತ್, ಮಂಜುಳಮ್ಮ, ವೆಲ್ಡಿಂಗ್ ವೆಂಕ್ಟೇಶ್ ಬಾಬು.... ಮುಂತಾದವರ ಜೊತೆ ಒಂದು ಪುಟ್ಟ ಪಾತ್ರದಲ್ಲಿ ಈ ಚಿತ್ರದ ನಿರ್ದೇಶಕ R ಸಾಗರ್ ಅವರು ಅಭಿನಯಿಸಿದ್ದಾರೆ.
     ಈ ಚಿತ್ರದ ಬಗ್ಗೆ ಇನ್ನೊಂದು ವಿಶೇಷವೇನೆಂದರೆ ಆಗಸ್ಟ್ ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಶುಭ ಸಂದರ್ಭದಲ್ಲಿ 'ಕೆಸರಿನ ತಾವರೆ' ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕರಾದ ಆರ್ ಸಾಗರ್.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News